ಕನ್ನಡಕ್ಕೆ ಗ್ಲಾಮರ್ ಪ್ರತಿಭೆ ಗುಂಜನ್ ಅರಸ್

ಕನ್ನಡ ಚಿತ್ರರಂಗಕ್ಕೆ ಬರುವವರಲ್ಲಿ ಮಾಡೆಲಿಂಗ್ ಸೇರಿದಂತೆ ಇನ್ನಿತರೆ ಗ್ಲಾಮರ್ ಕ್ಷೇತ್ರಗಳಿಂದ ಬರುವವರು ಹೆಚ್ಚಾಗುತ್ತಿದ್ದಾರೆ. ಇವೆಲ್ಲಾ ಫಿಲಂ ಇಂಡಸ್ಟ್ರಿಗೆ ಬರುವವರಿಗೆ ವೇದಿಕೆ ಕಲ್ಪಿಸಿದೆ. ಅದೇ ರೀತಿ ಡೆಡ್ಲಿ ಅಫೇರ್ ಚಿತ್ರದ ನಾಯಕಿ ಗುಂಜನ್ ಅರಸ್ ನ್ಯೂ ಎಂಟ್ರಿ ಪಡೆದುಕೊಂಡಿದ್ದಾರೆ. ರಾಜೇಶ್ ಮೂರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುರುಷರ ವಿವಾಹೇತರ ಸಂಬಂಧಗಳಿಂದಾಗುವ ಪರಿಣಾಮಗಳ ಬಗ್ಗೆ ಹೇಳಲಾಗಿದೆ. ಈ ಚಿತ್ರದ ನಾಯಕಿ ಗುಂಜನ್ ಅರಸ್ ಮೂಲತಃ ಬಾಂಬೆಯವರು. ಗಂದಿಬಾತ್ ಎಂಬ ವೆಬ್ ಸಿರೀಸ್ ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ ವೈಫ್‍ಐ ಎಂಬ ತೆಲುಗು ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಇವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋಯರ್ಸ್ ಹೊಂದುವ ಮೂಲಕ ಇನ್‍ಸ್ಟಾಗ್ರಾಂ ಸ್ಟಾರ್ ಎನಿಸಿಕೊಂಡಿದ್ದಾರೆ.

ಗುಂಜನ್ ಅರಸ್ 2018 ರಲ್ಲಿ ಯೂಥ್ ಐಕಾನ್ ಆಫ್ ದಿ ಈಯರ್ ಅವಾರ್ಡ್ ಗೆದ್ದಿದ್ದಾರೆ. ಅಲ್ಲದೆ ಯೂನಿಸಫಪೀಸ್ ಅಂಬಾಸೆಡರ್ ಕೂಡ ಆಗಿದ್ದಾರೆ. ಸಾಕಷ್ಟು ಆ್ಯಡ್ ಫಿಲಂಗಳಿಗೆ ಮಾಡೆಲಿಂಗ್ ಕೂಡ ಮಾಡುವ ಮೂಲಕ ಗುರುತಿಸಿಕೊಂಡಿರುವ ಗುಂಜನ್ ಅರಸ್ ಈಗ ಡೆಡ್ಲಿ ಆಫರ್ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಕಥೆ ಬಹುತೇಕ ಭಾಗ ಗುಂಜನ್ ಅವರ ಪಾತ್ರದ ಮೇಲೆ ಸಾಗುತ್ತದೆ. ಚಿತ್ರದಲ್ಲಿ ಈಕೆಯದು ಸೈಕೋ ತರದ ಪಾತ್ರ. ಆಂಟಿ ಹೀರೋಯಿನ್ ಪಾತ್ರ ಇವರದು. ಚಿತ್ರದಲ್ಲಿ ಸಖತ್ ಗ್ಲ್ಯಾಮರಸ್ ಆಗಿ ಮೈಛಳಿ ಬಿಟ್ಟು ಅಭಿನಯಿಸಿರುವ ಗುಂಜನ್ ಅರಸ್ ಅವಕಾಶ ಸಿಕ್ಕರೆ ಎಂತಹ ಕ್ಲಿಷ್ಟಕರ ಪಾತ್ರವನ್ನಾದರೂ ನಿಭಾಯಿಸಬಲ್ಲೆ ಎಂದು ನಿರೂಪಿಸಿದ್ದಾರೆ. ಚಿತ್ರಕ್ಕೆ ನಿತಿನ್ ಕುಮಾರ್ ಸಂಗೀತ್, ವಿನೋದ್ ಆರ್.ಛಾಯಾಗ್ರಹಣ, ನಾಗರಾಜ್ ಮಹೇಶ್ವರಪ್ಪ ಸಾಹಿತ್ಯ, ಸತೀಶ್ ಸಂಕಲನವಿದೆ. ಸ್ವಪನ್ ಕೃಷ್ಣ, ಗುಂಜನ್ ಅರಸ್, ರಾಹುಲ್ ಸೋಮಣ್ಣ, ರಾಜೇಶ್ ಮಿಶ್ರ ಹಾಗೂ ಮಾಸ್ಟರ್ ವಿಶೃತ್ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!