2020ರ ಮೊದಲ ಸೆಟ್ಟೇರಿದ ಚಿತ್ರ ‘ಹಗ್ಗ’

ವೇಣು ಭಾರದ್ವಾಜ್ ನಾಯಕನಾಗಿ ನಟಿಸುತ್ತಿರುವ ‘ಹಗ್ಗ’ 2020ರ ಮೊದಲ ಚಿತ್ರವಾಗಿ ಸೆಟ್ಟೇರಿದೆ. ಜಯನಗರದ ನಿಮಿಶಾಂಬ ದೇವಾಲಯದಲ್ಲಿ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಸಿನಿಮಾ ಪ್ರಾರಂಭಿಸಲಾಗಿದೆ ಶಾರ್ಟ್ ಮೂವಿಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಅವಿನಾಶ್.ಎನ್ ಅವರು ‘ಹಗ್ಗ’ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದಾರೆ. ವೇಣು ಅವರೊಂದಿಗೆ ಸಹೋದರ ರಾಜ್​ ಭಾರದ್ವಾಜ್​​ ವಸಂತ ಸಿನಿ ಕ್ರಿಯೇಷನ್ ಬ್ಯಾನರ್‌ನಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಗ್ಗ’ ಸಸ್ಪೆನ್ಸ್,ಥ್ರಿಲ್ಲರ್​ನಿಂದ ಕೂಡಿದ ಕಂಪ್ಲೀಟ್​ ಎಂಟರ್​ಟೈನ್​ಮೆಂಟ್​ ಸಿನಿಮಾ.ಈ ಚಿತ್ರದಲ್ಲಿ  ನಾಯಕ ವೇಣು ಭಾರದ್ವಾಜ್ ಹಳ್ಳಿಯಲ್ಲಿ ಗೌಡನ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಮಾಡೆಲ್ ಪ್ರಿಯಾಂಕ ಅರೋರ ಜೊತೆಯಾಗಿದ್ದಾರೆ.

This Article Has 1 Comment
  1. Pingback: 홀덤사이트

Leave a Reply

Your email address will not be published. Required fields are marked *

Translate »
error: Content is protected !!