ದಿಲ್‍ಬರ್ ಬೆಡಗಿ ನೊರಾ..!

ಟ್ಯಾಲೆಂಟೆಡ್ ಬ್ಯೂಟಿ ನೋರಾ ಫತೇಹಿ ಈಗ ಇಂಟರ್‍ನೆಟ್ ಸೆನ್ಸೆಷನ್ ಎನಿಸಿದ್ದಾಳೆ. ಈ ಮಾದಕ ಡ್ಯಾನ್ಸರ್‍ಳ ಫೋಟೋಗಳು ಮತ್ತು ವಿಡಿಯೋಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ನೋರಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ. ಇನ್‍ಸ್ಟಾಗ್ರಾಂ ಮತ್ತು ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಕ್ರಿಯಾಶೀಲಳಾಗಿದ್ದಾಳೆ.

ಈ ಬೆಲ್ಲಿ ಡ್ಯಾನ್ಸರ್ ತನ್ನದೇ ಆದ ಯೂ-ಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದಾಳೆ. ಆಗ್ಗಿಂದಾಗ್ಗೆ ಹೊಸ ವೀಡಿಯೋಗಳು ಮತ್ತು ದೃಶ್ಯ ತುಣುಕುಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾಳೆ.  ನೋರಾ ಇತ್ತೀಚಿನ ತನ್ನ ವ್ಲೋಗ್(ವಿಡಿಯೋಬ್ಲಾಗ್)ನಲ್ಲಿ ಮಜರ್ವಾನ್ ಸಿನಿಮಾದಲ್ಲಿನ ತನ್ನ ಲೇಟೇಸ್ಟ್ ಸಾಂಗ್ ಎಕ್ ತೋ ಕಮ್ ಝಿಂದಗಾನಿ ಹಾಡಿನ ಚಿತ್ರೀಕರಣದ (ಬಿಯಾಂಡ್ ದಿ ಸೀನ್-ಬಿಟಿಎಸ್) ದೃಶ್ಯಗಳನ್ನು ಫ್ಯಾನ್‍ಗಳು ಮತ್ತು ಫಾಲೋವರ್‍ಗಳೊಂದಿಗೆ ಹಂಚಿಕೊಂಡಿದ್ದಾಳೆ.

ಈ ಹಾಡಿನಲ್ಲಿ ಸ್ಮಾಟ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಮೊರೊಕ್ಕೋ ಬ್ಯೂಟಿಯ ಸೂಪರ್ ಡ್ಯಾನ್ಸ್ ಸ್ಟೆಪ್‍ಗಳಿವೆ. ಬಿಟಿಎಸ್ ವಿಡಿಯೋಗಳನ್ನು ಹಾಲಿವುಡ್ ತಾರೆಯರು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಪರಿಪಾಠ ಹೆಚ್ಚಾಗಿರುವಾಗಲೇ ನೋರಾದ ಬಿಯಾಂಡ್ ದಿ ಸೀನ್ ಆಕರ್ಷಕವಾಗಿದೆ.  ಎಕ್ ತೋ ಕಮ್ ಝಿಂದಗಾನಿ ಹಾಡು ಕೂಡ ಹಿಟ್ ಆಗಿದೆ. ಇದು ಜಾನ್‍ಬಾಜ್ ಸಿನಿಮಾದ ಪ್ಯಾರ್ ದೋ ಪ್ಯಾರ್ ಲೋ ಜನಪ್ರಿಯ ಗೀತೆಯ ರೀಮೇಕ್ ವರ್ಷನ್.

ಸತ್ಯಮೇವ ಜಯತೆ ಸಿನಿಮಾದಿ ದಿಲ್‍ಬರ್ ಹಾಡಿನ ಮೂಲಕ ರಸಿಕರ ಹೃದಯ ಗೆದ್ದ ನೋರಾ ಫತೇಹಿ ನಂತರ ಬಾಟ್ಲಾ ಹೌಸ್ ಸಿನಿಮಾದಲ್ಲಿ ಸಖಿ ಓ ಸಖಿ ಐಟಂ ನಂಬರ್‍ನಲ್ಲೂ ಮಿಂಚಿದಳು. ಸಲ್ಮಾನ್ ಖಾನ್ ಅಭಿಯನದ ಭಾರತ್‍ನಲ್ಲೂ ನೋರಾ ನೃತ್ಯವಿದೆ. ಈ ಬಾಂಬ್ ಶೆಲ್ ಸ್ಟ್ರೀಟ್ ಡ್ಯಾನ್ಸರ್-3ಡಿ ಸಿನಿಮಾದಲ್ಲೂ ಕಿಲ್ಲರ್ ಮೂವ್‍ಗಳಿಂದ ಮೋಡಿ ಮಾಡಲಿದ್ದಾಳೆ.

This Article Has 3 Comments
  1. Pingback: top DevOps consulting companies

  2. Pingback: regression testing

  3. Pingback: Casino

Leave a Reply

Your email address will not be published. Required fields are marked *

Translate »
error: Content is protected !!