ಕನ್ನಡ ಭಾಷೆಯ ಬುಡಕ್ಕೇ ಕೊಳ್ಳಿ ಇಟ್ರಾ ಸುದೀಪ್?

ಕರ್ನಾಟಕದಲ್ಲಿ ಬೋರ್ಡ್‍ಗಳಲ್ಲಿ ಹಿಂದಿಯ ಹೇರಿಕೆಯನ್ನು ಪ್ರತಿಭಟಿಸಿದ ನಾವು, ‘ಹಿಂದಿ ದಿವಸ್’ ವಿಚಾರಕ್ಕೂ ಇದು ‘ಕನ್ನಡ ಭಾಷೆಯ ಮೇಲೆ ನಡೆಯುತ್ತಿರುವ ರೇಪ್’ ಎಂದು ಒಕ್ಕೊರೊಲೊನಿಂದ ಕೂಗಿದೆವು. ಇನ್ನೂ ಮುಂದಕ್ಕೆ ಹೋಗಿ ಕನ್ನಡದ ಮೇಲಿನ ಹಿಂದಿ ಹೇರಿಕೆ ಕೇವಲ ಭಾಷೆಯ ಮೇಲೆ ನಡೆದ ದೌರ್ಜನ್ಯ ಅಲ್ಲ, ಬದಲಾಗಿ ಈ ನೆಲೆದ ಸಂಸ್ಕ್ರøತಿ ಆಚಾರ-ವಿಚಾರಗಳ ಮೇಲೆ ನಡೆದ ದಬ್ಬಾಳಿಕೆ ಎಂದು ಬೊಬ್ಬಿಟ್ಟೆವು. ಸೂಪರ್… ನಮ್ಮ ಕನ್ನಡ ಅಭಿಮಾನದ ಬಗ್ಗೆ ಹೆಮ್ಮೆಪಡಲೇಬೇಕು. ಆದರೆ, ಈ ನೆಲದಲ್ಲಿದ್ದುಕೊಂಡೇ ಸದ್ದಿಲ್ಲದೇ ಸಿನಿಮಾ ಹೆಸರಿನಲ್ಲಿ ಕನ್ನಡ ಭಾಷೆಯ ಮೇಲೆ ಹಿಂದಿ ಹೇರಿಕೆಯನ್ನು ಮಾಡುತ್ತಿರುವ ಮರೆತೇ ಬಿಟ್ಟಿದ್ದೇವೆ. ಅದಕ್ಕೆ ಇತ್ತೀಚಿನ ಫ್ರೆಶ್ ಎಗ್ಸಾಂಪಲ್ ‘ದಬಾಂಗ್3’ ಚಿತ್ರ.

ಹೌದು, ದಬಾಂಗ್3 ಅಪ್ಪಟ ಕನ್ನಡ ಚಿತ್ರ ಎಂದು ಘಂಟಾಗೋಷವಾಗಿ ಹೇಳುತ್ತಿರುವ ಇದೇ ಚಿತ್ರದ ಖಳನಾಯಕ ಕಿಚ್ಚ ಸುದೀಪ್‍ಗೆ ಪಾಪ ಹಿಂದಿ ಟೈಟಲ್ ಅನ್ನು ಕನ್ನಡದಲ್ಲಿ ಬರೆದರೆ ಅದು ಕನ್ನಡ ಚಿತ್ರವಾಗುತ್ತದೆ ಎಂದು ಯಾವಾಗ ಅರಿವಿಗೆ ಬಂತೋ! ಸರಿ, ಇದಕ್ಕೇ ಅವರ ಅಭಿಪ್ರಾಯವನ್ನೇ ತೆಗೆದುಕೊಳ್ಳೋಣ. ಅವರ ಪ್ರಕಾರ ‘ದಬಾಂಗ್’ ಒಂದು ಫ್ರಾಂಚೈಸೀ ಅಂತೆ.. ಅದನ್ನು ಕನ್ನಡೀಕರಿಸಿದರೆ ಅರ್ಥವೇ ಇರುವುದಿಲ್ಲವಂತೆ.. ಹಾಗಿದ್ದರೆ ಇಂಥ ಅನರ್ಥದ ಹಿಂದೆ ಸುದೀಪ್ ಬೆನ್ನೆಲುಬಾಗಿ ನಿಂತಿದ್ದೇಕೆ? ಆಯ್ತು ಮಲ್ಟೀಸ್ಟಾರ್, ಕನ್ನಡ ಭಾಷೆಯ ರಾಯಭಾರಿ, ಅಭಿನಯ ಭಾರ್ಗವ.. ಎಕ್ಸೆಟ್ರಾ ಆಗಿರುವ ಸುದೀಪ್ ಅವರೆ ಹಿಂದಿ ಚಿತ್ರ ಕನ್ನಡಕ್ಕೆ ಡಬ್ ಆಗುವಾಗ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಗಳ ಹೆಸರುಗಳೂ ಹಿಂದಿಯದ್ದೇ ಯಾಕಿರುತ್ತದೆ. ಹಿಂದಿಯ ಚುಲ್‍ಬುಲ್‍ಪಾಂಡೆ ಕನ್ನಡದಲ್ಲೂ ಚುಲ್‍ಬಲ್‍ಪಾಂಡೇನೆ! ಇದನ್ನು ನಾವು ಕನ್ನಡಿಗರು ಅಪ್ಪಟ ಕನ್ನಡ ಚಿತ್ರ ಇದೆಂದು ನೋಡಿ ಹಾಡಿ ಹೊಗಳಬೇಕಾ? ಸಲ್ಮಾನ್‍ಖಾನ್ ತನ್ನ ಮಾರ್ಕೆಟ್ ಅನ್ನು ವಿಸ್ತಾರಮಾಡಿಕೊಳ್ಳಲು.. ಕನ್ನಡ ಭಾಷೆಯ ಮೇಲೆ ಹಿಂದಿಯ ಹೇರಿಕೆಗಾಗಿ ನಿಮ್ಮನ್ನು ದಾಳವಾಗಿಸಿಕೊಳ್ಳುತ್ತಿರೋದು ಒಂದು ಕ್ಷಣಕ್ಕೂ ಅರಿವೆಗೆ ಬಂದಿಲ್ಲವೇ? ಅಥವಾ ಕನ್ನಡಿಗರು ಪರಮ ಸಹಿಷ್ಣುಗಳು ಅನ್ನುವ ಅನಾದಾರವೇ?
ಇನ್ನು, ಅದೇ ಹಿಂದಿ ಹಾಡಿನ ಟ್ಯೂನ್‍ಗೆ ಅಸಂಬದ್ಧ ಪದಗಳನ್ನು ಜೋಡಿಸಿ ಕನ್ನಡ ಚಿತ್ರ ಅಂತೀರಿ. ಟೆಕ್ನೀಶನ್ ವಿಚಾರಕ್ಕೇ ಬಂದರೆ ಎಷ್ಟು ಜನ ಕನ್ನಡಿಗಿದ್ದಾರೆ ಸ್ವಾಮಿ? ಅದರೂ ಇದು ಕನ್ನಡ ಚಿತ್ರ!

ಕನ್ನಡಿಗರೇ, ಇದರ ಒಟ್ಟು ಸಾರಾಂಶ ಇಷ್ಟೇ. ದಬಾಂಗ್3 ಯಲ್ಲಿ ಸ್ಕ್ರೀನ್‍ಮೇಲೆ ಸಲ್ಮಾನ್ ಎದುರು ಖಳನಾಯಕನಾಗಿ ಅಬ್ಬರಿಸಿ ಬೊಬ್ಬಿರಿದಿರೋ ಸುದೀಪ್, ನಿಜಾರ್ಥದಲ್ಲಿ ಕನ್ನಡಿಗರಿಗೇ ಖಳನಾಯಕರಾಗಿದ್ದಾರೆ. ಇಲ್ಲಿವರೆಗೆ ಪತ್ರಕರ್ತರನ್ನು ಗುಂಪು ಗುಂಪುಗಳಾಗಿ ಒಡೆದು ತಮಾಶೆ ನೋಡುತ್ತಿದ್ದ ಸುದೀಪ್, ಸದ್ಯಕ್ಕೆ ಕನ್ನಡ ಸಿನಿಮಾಗಳ ಮೇಲೆ ಹಿಂದಿ ಹೇರಿಕೆಗಾಗಿ ದಾರಿಹುಡುಕುತ್ತಿದ್ದವರಿಗೆ ತಾವೇ ಹೆಬ್ಬಾಗಿಲಾಗಿದ್ದಾರೆ. ಕನ್ನಡ ಹೋರಾಟಗಾರರೇ ಇದೆಲ್ಲಾ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ಬೋರ್ಡ್‍ಗಳಿಗೆ ಮಸಿಬಳಿಯುವ ಧೈರ್ಯ ತೋರುವ ನಿಮಗೆ, ಈಗ ಮನೋರಂಜನೆಯ ಹೆಸರಲ್ಲಿ ಕನ್ನಡಕ್ಕೆ ಆಗುತ್ತಿರುವ ಅನ್ಯಾಯ ಸಮ್ಮತವೇ?

@ಬಿಸಿನಿಮಾಸ್

This Article Has 2 Comments
  1. Pingback: Margate roofing contractor

  2. Pingback: 꽃계열 개나리

Leave a Reply

Your email address will not be published. Required fields are marked *

Translate »
error: Content is protected !!