ಜಯಣ್ಣ ಕಂಬೈನ್ಸ್ ನಿರ್ಮಾಣದ ಚಿತ್ರಕ್ಕೆ ಸ್ವರೂಪ್ ನಿರ್ದೇಶನ ‘ಪಂಚತಂತ್ರ’ ಖ್ಯಾತಿಯ ವಿಹಾನ್ ನಾಯಕನಾಗಿ ಹಾಗೂ ‘ಕಿಸ್’, ‘ಭರಾಟೆ’ ಖ್ಯಾತಿಯ ಶ್ರೀಲೀಲ ನಾಯಕಿಯಾಗಿ ನಟಿಸಲಿರುವ ‘ಲೆಟ್ಸ್ ಬ್ರೇಕಪ್’ ಚಿತ್ರದ ಫಸ್ಟ್ ಲುಕ್ 2020 ಫೇಭ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. 2020ರ ಮೇ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.
ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸ್ವರೂಪ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಸ್ವರೂಪ್ ನಿರ್ದೇಶಿಸಿದ್ದ ‘ಲಖನೌ ಟು ಬೆಂಗಳೂರು’ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಇದು ಅವರ ನಿರ್ದೇಶನದ ಎರಡನೇ ಚಿತ್ರ.
ಪಕ್ಕ ರೊಮೆಂಟಿಕ್ ಲವ್ ಸ್ಟೋರಿಯ ‘ಲೆಟ್ಸ್ ಬ್ರೇಕಪ್’ ಚಿತ್ರಕ್ಕೆ ಫಾರ್ ಎವರ್ ಎಂಬ ಅಡಿಬರಹವಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ನೀಡಲಿದ್ದಾರೆ. ಮೂರು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. 90ರಷ್ಟು ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದರೆ, 10ರಷ್ಟು ಭಾಗದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ. ಉಳಿದ ತಾರಾಬಳಗ ಹಾಗೂ ತಂತ್ರಜರ ಆಯ್ಕೆ ನಡೆಯುತ್ತಿದೆ.
Be the first to comment