“ಲಕ್ಷ್ಯ” ಜೊತೆಯಲಿ ಅನಿರುದ್ಧ್

“ಲಕ್ಷ್ಯ” ಎಂಬ ವಿಭಿನ್ನ ಶೈಲಿಯ ಕನ್ನಡ ಚಲನಚಿತ್ರವೊಂದು, ಈಗಾಗಲೇ  ಹೋಸತರಹದ  ಪೋಸ್ಟರ್ಸ್ ಹಾಗೂ ಮೋಷನ್ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ  ಹುಟ್ಟು ಹಾಕಿದೆ. ಬಿಡುಗಡೆಯಾಗಿರುವ ಎರಡು ಲಿರಿಕಲ್ ಹಾಡುಗಳು ಮತ್ತು ಮೋಷನ್ ಟೀಸರ್, ಖ್ಯಾತ ಆಡಿಯೋ ಕಂಪನಿ, ಲಹರಿ ಮ್ಯೂಸಿಕ್‍ನ ಮೂಲಕ ಪ್ರೇಕ್ಷಕರ ಮನ ಗೆದ್ದಿವೆ.

ಈಗ ಉತ್ಸಾಹಿ “ಲಕ್ಷ್ಯ” ಚಿತ್ರತಂಡದ ಜೊತೆಗೆ, “ಜೊತೆಜೊತೆಯಲಿ” ನಾನಿರುವೆ ನಿಮ್ಮೊಂದಿಗೆ ಎಂದು ನಿಂತಿದ್ದಾರೆ, ಕನ್ನಡದ ಖ್ಯಾತ ನಟ ಅನಿರುದ್ಧ್. ಇತ್ತೀಚಿಗೆ “ಲಕ್ಷ್ಯ” ಚಿತ್ರದ ಡೈಲಾಗ್ ಟೀಸರ್‍ವೊಂದನ್ನ ಬಿಡುಗಡೆ ಮಾಡಿಕೊಟ್ಟಿರುವ

ಅನಿರುದ್ಧ್ ಚಿತ್ರದ ತುಣುಕುಗಳನ್ನ ನೋಡಿ, ಹಾಗೇ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳನ್ನು ಮತ್ತು ಬಿಡುಗಡೆಯಾಗ ಬೇಕಿರುವ ಹಾಡುಗಳನ್ನೂ ಸಹ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಜನ ಸಾಮಾನ್ಯರು ಬಹಳಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ, ಅಂತಹ ಹಲವು ಸಮಸ್ಯೆಗಳ ಮಧ್ಯೆ ಇರುವಂತಹ, ಒಂದು ಗಂಭೀರವಾದ ಸಮಸ್ಯೆ ಒಂದನ್ನ ಕಮರ್ಷಿಯಲ್ ರೂಪದಲ್ಲಿ ಹೇಳಲು ಹೆರಟಿದೆ ಲಕ್ಷ್ಯ ತಂಡ.

ಮೇಘಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ “ಲಕ್ಷ್ಯ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.  ಟೀಸರ್ ಬಿಡುಗಡೆ ಮಾಡಿಕೊಟ್ಟ ಅನಿರುದ್ಧ್ ರವರಿಗೆ, ನಿರ್ಮಾಪಕರಾದ ಮಹಾಂತೇಶ ತಾಂವಶಿ, ಸಹ ನಿರ್ಮಾಪಕರಾದ ಪ್ರಕಾಶ್‍ಕೊಲ್ಹಾರ್, ಸಂಕಲನಕಾರ ಶಿವಸರ್ವಮ್ ಮತ್ತು ನಿರ್ದೇಶಕ ರವಿ ಸಾಸನೂರ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ಹಿರಿಯ ನಟರಾದ ರಾಮಕೃಷ್ಣ, ಮಾಲತಿಶ್ರೀ ಮೈಸೂರು, ಶಿವಕುಮಾರ್ ಆರಾಧ್ಯ, ಸಂತೋಷ್‍ರಾಜ್ ರವರೆ, ಶರ್ಮಿಳಾ, ಸತ್ಯನಾಥ್, ನಿತಿನಧ್ವಿ, ಸಾಯಿ ಯಶಸ್ವಿನಿ, ಬೇಬಿ ಗಮನ, ಬೇಬಿ ದಿವ್ಯ ಧನಶೆಟ್ಟಿ, ಇನ್ನೂ ಮುಂತಾದವರಿದ್ದಾರೆ.

This Article Has 1 Comment
  1. Pingback: secret book

Leave a Reply

Your email address will not be published. Required fields are marked *

Translate »
error: Content is protected !!