ಕನ್ನಡ ಚಿತ್ರರಂಗದಲ್ಲಿ ಹೊಸಬರ ಮತ್ತೊಂದು ತಂಡ ಎಂಟ್ರಿಯಾಗುತ್ತಿದೆ. ಇನ್ನೂ ಹೆಸರಿಡದ ಆ ಚಿತ್ರವನ್ನು ಸಧ್ಯ ಪ್ರೊಡಕ್ಷನ್ ನಂ.1 ಎಂದು ಆರಂಭಿಸಲಾಗುತ್ತಿದೆ. ಗ್ರೇಟ್‍ಬ್ರೋಸ್ ಸಂಸ್ಥೆಯ ಪ್ರಥಮ ಸಿನಿಮಾ ಇದಾಗಿದ್ದು, ಚಾಲೆಂಜಿಂಗ್‍ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಎಂ.ಸುಭಾಷ್‍ಚಂದ್ರ ಈ ಚಿತ್ರದ ನಿರ್ದೇಶನ ಮಾಡುತ್ತಿ. ನಟ ದರ್ಶನ್‍ರ ಅಫಿಷಿಯಲ್ ಫ್ಯಾನ್‍ಪೇಜ್ ಡಿಕಂಪನಿಯ ಅಡ್ಮಿನ್ ಆಗಿ ಸುಭಾಷ್‍ಚಂದ್ರ ಕಳೆದ ಒಂಬತ್ತು ವರ್ಷಗಳಿಂದಲೂ ಕೆಲಸ ಮಾಡುತ್ತಿರೆ. ಸ್ವತಃ ದರ್ಶನ್ ಅವರೇ ಸುಭಾಷ್‍ರ ಆಸಕ್ತಿಯನ್ನು ಕಂಡು ಕುರುಕ್ಷೇತ್ರ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟಿದ್ದರು.
ಸುಭಾಷ್‍ರ ಹನ್ನೆರಡು ವರ್ಷದ ಕನಸಿನ ಕೂಸಾಗಿರುವ ಈ ಚಿತ್ರಕ್ಕೆ ಅವರ ಹಿತೈಷಿಗಳ ಸಹಕಾರದಿಂದ ಚಾಲನೆ ದೊರೆತಿದೆ. ಗ್ರೇಟ್‍ಬ್ರೋಸ್ ಪಿಕ್ಚರ್ಸ್ ಸಂಸ್ಥೆಯನ್ನು ಸುಭಾಷ್ ಅವರೇ ಹುಟ್ಟುಹಾಕಿದ್ದು ಅದಕ್ಕೆ ಸ್ನೇಹಿತರು ಹಾಗೂ ಕುಟುಂಬ ಸಹ ಸಾಥ್ ನೀಡಿದೆ. ಮಂಜುನಾಥ್ ಕೆ.ಎಸ್. ಹಾಗೂ ರಾಜೇಂದ್ರ ಎಂ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬರುವ ಜನವರಿಯಲ್ಲಿ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಯಲಿದೆ.
ಅದೇ ತಿಂಗಳು ಶೂಟಿಂಗ್ ಆರಂಭಿಸಿ ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ, ಹಾಗೂ ರಾಮನಗರದ ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ. 1990ರಿಂದ 2019ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತನ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಆಕ್ಷನ್, ಥ್ರಿಲ್ಲರ್ ಕಥೆಯ ಮೂಲಕ ನಿರ್ದೇಶಕರು ಹೇಳಲಿದ್ದಾರೆ. ಪ್ರೀತಿಯ ಜೊತೆ ತಂದೆ-ಮಗನ ಸೆಂಟಿಮೆಂಟ್ ಕಥೆ ಕೂಡ ಈ ಚಿತ್ರದಲ್ಲಿದೆ.
ಪಂಚತಂತ್ರ ಖ್ಯಾತಿಯ ವಿಹಾನ್‍ಗೌಡ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ನಾಯಕಿ ಹಾಗೂ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಎ.ಆರ್.ರೆಹಮಾನ್ ಅವರ ಜೊತೆ ಕೆಲಸಮಾಡಿದ ಸುರೇಶ್‍ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಚಿತ್ರದ 5 ಹಾಡುಗಳಿಗೆ ರಾಗ ಸಂಯೋಜಿಸಿ. ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಡಾ. ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ರಚಿಸಿ. ಈ ಚಿತ್ರಕ್ಕೆ ಸುಂದರ್ ಪಿ. ಅವರ ಛಾಯಾಗ್ರಹಣ ಹಾಗೂ ಸುನೀಲ್ ಅವರ ಸಂಕಲನವಿದೆ.
Pingback: Tow Truck Parkersburg WV
Pingback: คาสิโน