‘ಅವನೇ’ ಇವನಾ!

‘ಅವನೇ’ ಇವನಾ!

‘ಅವನೇ ಶ್ರೀಮನ್ನಾರಾಯಣ’ ಟ್ರೈಲರ್ ರಿಲೀಸ್ ಆಗಿದ್ದೇ ತಡ, ಚಿತ್ರ ಹಾಲಿವುಡ್ ಚಿತ್ರವೊಂದರ ಕಾಪಿನಾ ಇಲ್ಲಾ ಜಸ್ಟ್ ಇನ್ಸಪೀರೇಶನ್ನಾ.. ಅನ್ನುವ ಗಂಭೀರ ಚರ್ಚೆ ಶುರವಾಗಿದೆ. ಇಲ್ಲಿ ಗಮನಿಸಬೇಕಾಗಿದ್ದು ‘ಕೆಜಿಎಫ್’ ಚಿತ್ರದ ಟ್ರೈಲರ್ ಕೂಡ ಇದೇ ಚರ್ಚೆ ಹುಟ್ಟು ಹಾಕಿತ್ತು. ಶ್ರೀಮನ್ನಾರಾಯಣ ಟ್ರೈಲರ್ ಹಾಲಿವುಡ್ ನ ‘ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್'(The Ballad of Buster Scruggs) ಚಿತ್ರದ ನೆನಪು ತರುತ್ತಿದೆ ಎಂದು ಹೇಳಲಾಗುತ್ತಿದೆ.

ಆದರೆ ಈಗ ಸಚಿನ್ ಹೆಸರಿನಲ್ಲಿ ರಕ್ಷಿತ್ ಡೈರೆಕ್ಟ್ ಮಾಡಿದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಇನ್ನೊಂದು ಹಾಲಿವುಡ್ ಚಿತ್ರಕ್ಕೂ ಸಾಮ್ಯತೆ ಇದೆ ಎಂದು ಹೇಳಲಾಗುತ್ತದೆ. ಆ ಚಿತ್ರವೇ ‘ಎ ಮ್ಯಾನ್ ವಿತ್ ನೋ ನೇಮ್’(Man with No Name).
ಶ್ರೀಮನ್ನಾರಾಯಣನ ಅನೇಕ ದೃಶ್ಯಗಳು ‘ಎ ಮ್ಯಾನ್ ವಿತ್ ನೋ ನೇಮ್’ ಚಿತ್ರವನ್ನು ಹೋಲುತ್ತಿದೆ. ಕಾಸ್ಟ್ಯೂಮ್, ಲೊಕೇಶನ್, ನಾಯಕನ ಮ್ಯಾನರಿಸಂ, ಕೆಲವು ದೃಶ್ಯಗಳು, ಕೌವ್ ಬಾಯ್ ಪಾತ್ರ ಪ್ರತಿಯೊಂದು ಸಹ ‘ಎ ಮ್ಯಾನ್ ವಿತ್ ನೋ ನೇಮ್’ ಚಿತ್ರದ ನೆನಪನ್ನು ತರಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಹಾಗೇ ನೋಡಿದರೆ ‘ಎ ಮ್ಯಾನ್ ವಿತ್ ನೋ ನೇಮ್’ ಚಿತ್ರ ಕೂಡ 1961ರಲ್ಲಿ ಜಗತ್ಪ್ರಸಿದ್ದ ನಿರ್ದೇಶಕ ಅಕಿರಾ ಕುರೊಸಾವಾ ನಿರ್ದೇಶಿಸಿದ ‘ಯೊಜಿಂಬೋ’(Yojimbo) ಚಿತ್ರದ ನಕಲು. ಈಗ ನಕಲನ್ನು ರಕ್ಷಿತ್ ಅಂಡ್ ಟೀಮ್ ಮತ್ತೆ ನಕಲು ಮಾಡಿದೆ ಅನ್ನುವ ಅಪವಾದ ಕೇಳಿ ಬರುತ್ತಿದೆ. ನೀವು ‘ಎ ಮ್ಯಾನ್ ವಿತ್ ನೋ ನೇಮ್’ ಚಿತ್ರದ ಟ್ರೈಲರ್ ನೋಡಿದರೆ ನಿಮಗೂ ಖಂಡಿತಾ ನೀವೂ ಸಂದೇಹ ಬಾರದಿರದು.

ಇನ್ನು, ‘ನಾರಾಯಣ’ನನ್ನು ಇನ್ನಷ್ಟು ನಕಲು ಅಂತ ಸಾಬೀತು ಪಡಿಸೋದು ಅಜನೀಶ್ ಲೋಕನಾಥ್ ಅವರ ಬಿಜಿಎಮ್. ಎರಡು ಟ್ರೈಲರ್  ಗಳ ಬಿಜಿಎಮ್ ನಲ್ಲಿ ಸಾಕಷ್ಟು ಸಾಮ್ಯತೆ ಇದೆ. ಚಿತ್ರದ ಪಾತ್ರಗಳು ಎರಡಕ್ಕೂ ಹೊಂದಿಕೆಯಾಗುತ್ತೆ. ‘ಅವನೇ ಶ್ರೀಮನ್ನಾರಾಯಣ’ದಲ್ಲಿ ನಟ ಪ್ರಮೋದ್ ಶೆಟ್ಟಿಯ ಮೂರು ಬರೆಳುಗಳು ಕಟ್ಟಾಗಿದ್ದರೆ, ‘ಎ ಮ್ಯಾನ್ ವಿತ್ ನೋ ನೇಮ್’ನಲ್ಲಿ ಒಬ್ಬ ಒಂಟಿ ಕಣ್ಣಿನವನು ಕಾಣ ಸಿಗುತ್ತಾನೆ. ಅಲ್ಲಿಗೆ ಇನ್ಸಪೀರೇಶನ್ ಹೆಸರಿನಲ್ಲಿ ಶೆಟ್ರ ಗ್ಯಾಂಗ್ ಕಾಪೀ ಮಾಡಿ ಬಿಟ್ರಾ ಅನ್ನುವ ಡೌಟ್ ಬರುತ್ತೆ. ಒಟ್ಟಿನಲ್ಲಿ ಚಿತ್ರದ ಟ್ರೈಲರ್ ನೋಡುಗನ ನಿರೀಕ್ಷೆಯನ್ನು ತಣಿಸದೇ ಹೋದರೂ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನೇಇದ್ದರೂ ‘ನಾರಾಯಣ’ ತೆರೆಕಂಡಮೇಲೆ ಚಿತ್ರದ ಅಸಲಿಯತ್ತು ಬೆಳಕಿಗೆ ಬರಲಿದೆ. ಆರಂಭದಲ್ಲಿ ಚಿತ್ರದ ಪೋಸ್ಟರ್ ನಕಲು ಎಂದು ಸುದಿಯಾಗಿದ್ದ `ನಾರಾಯಣ’, ತೆರೆಕಾಣುವುದರೋಳಗೆ ‘ನಾರಾಯಣ’ ಇನ್ನೆಷ್ಟು ಚಿತ್ರದ ನಕಲು ಎಂದು ಸುದ್ದಿಯಾಗುತ್ತದೋ.. ನಾರಾಯಣ.. ನಾರಾಯಣ!!

‘ಎ ಮ್ಯಾನ್ ವಿತ್ ನೋ ನೇಮ್ ’ ಟ್ರೈಲರ್ ಲಿಂಕ್ –

This Article Has 3 Comments
  1. Pingback: Login Area

  2. Pingback: testing automation tool

  3. Pingback: plumbing contractor Bethania NC

Leave a Reply

Your email address will not be published. Required fields are marked *

Translate »
error: Content is protected !!