ಸದ್ಯದಲ್ಲೇ ಬಿಡುಗಡೆ ‘ಆರ್ ಹೆಚ್ 100’

ಆರ್ ಎಕ್ಸ್ 100 ಹೆಸರಿನಲ್ಲಿ ತೆಲುಗಿನಲ್ಲಿ ಚಿತ್ರವೊಂದು ಬಿಡುಗಡೆಯಾಗಿ ಯಶಸ್ವಿ ಕೂಡ ಆಗಿತ್ತು, ಈಗ ಸ್ಯಾಂಡಲ್‍ವುಡ್‍ನಲ್ಲೂ ಆರ್ ಹೆಚ್ 100 ಎಂಬ ಚಿತ್ರ ತಯಾರಾಗುತ್ತಿದ್ದು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಸಸ್ಪೆನ್ಸ್, ಹಾರರ್ ಕಥಾಅಂಶವನ್ನು ಹೊಂದಿರುವ ಈ ಚಿತ್ರವನ್ನು ರ ಕ ಕಿಡಿ ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್ ಎಂ.ಸಿ. ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಏಳು ಜನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಶೋಧನೆಗಾಗಿ ಕಾಡಿಗೆ ಹೋಗುತ್ತಾರೆ, ಅಲ್ಲಿ ಅವರು ಏನೇನು ಸಮಸ್ಯೆಗಳನ್ನು ಎದುರಿಸುತ್ತಾರೆ, ಅದರಿಂದ ಹೇಗೆ ಹೊರಬರುತ್ತಾರೆ ಎಂಬುದೇ ಕಥೆಯ ಹೈಲೈಟ್. ಈ ಕಥೆಗೂ ಆರ್‍ಹೆಚ್ 100 ಟೈಟಲ್‍ಗೂ ಏನು ಸಂಬಂಧವೆಂಬುದನ್ನು ತೆರೆಯ ಮೇಲೆ ತಿಳಿಯಬೇಕೆಂಬುದು ನಿರ್ದೇಶಕರ ಅನಿಸಿಕೆ.

ಚಿತ್ರೀಕರಣವು ನೈಜವಾಗಿರಲೆಂಬ ಉದ್ದೇಶದಿಂದ ಕೊಡಚಾದ್ರಿಯ ಕಾಡಿನಲ್ಲೇ ಬಹುತೇಕ ಶೂಟಿಂಗ್ ಮಾಡಿದ್ದು , ಕೆಲವು ದೃಶ್ಯಗಳನ್ನು ಬೆಂಗಳೂರಿನಲ್ಲೂ ಚಿತ್ರೀಕರಿಸಲಾಗಿದೆ. ಈ ಚಿತ್ರದ ಡಿಐ ಕಾರ್ಯಗಳು ನಡೆಯುತ್ತಿದ್ದು ಬರುವ ಜನವರಿಯಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡವರು ಹೇಳಿದ್ದಾರೆ.ಸತೀಶ್, ಚಿತ್ರಾ, ಕಾವ್ಯಾ, ಗಣೇಶ್ ಹರ್ಷ ಸೇರಿದಂತೆ ಒಂದಷಟು ಯುವ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಎಂಬ ನಟಿ ಈಗಾಗಲೇ ದರ್ಪಣ ಸೇರಿದಂತೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ 4ನೇ ಚಿತ್ರ. ಸುರೇಶ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಸಹ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದಾರೆ.

ಈ ಚಿತ್ರದಲ್ಲಿ ನಿರ್ಗತಿಕರಿಗೆ ಸಂಬಂಧಿಸಿದ ಒಂದು ಮಹತ್ವದ ವಿಷಯ ಕೂಡ ಈ ಚಿತ್ರದಲ್ಲಿದೆಯಂತೆ. ಆರ್‍ಹೆಚ್ 100ನಲ್ಲಿ ಇನ್ನು ಏನೇನು ರಹಸ್ಯಗಳು ಅಡಗಿವೆಯೋ ಎಂಬುದನ್ನು ನೋಡಲು ಚಿತ್ರ ತೆರೆಗೆ ಬರುವವರೆಗೂ ಕಾಯಲೇಬೇಕು.

This Article Has 1 Comment
  1. Pingback: Order sig sauer guns online

Leave a Reply

Your email address will not be published. Required fields are marked *

Translate »
error: Content is protected !!