ಧನಂ ಮೂಲಂ ಇದಂ ಜಗತ್ ಎಂಬ ಸಾಲಿನಲಿ ಕೃತ ಎಂಬ ಪದ ಬರುತ್ತದೆ, ಈಗ ಇದೇ ಹೆಸರಿನ ಚಿತ್ರಕ್ಕೆ ಉಪ್ಪರಿ ರಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಹೊಂದದೆ.
ನಟಿ ಮೇಘನಾಗೌಡ ಕಾಣಿಸಿಕೊಂಡಿದ್ದು ಮೊನ್ನೆ ಈ ಚಿತ್ರದ ಧ್ವನಿಸುರುಳಿಯನ್ನುಕನ್ನಡ ಪ್ರಜಾಪರ ವೇದಿಕೆಯ ಅಧ್ಯಕ್ಷ ಶಶಿಕುಮಾರ್, ವಾಟಾಳ್ ಪಕ್ಷದ ನಾಗರಾಜ್, ನಾನೊಂಥರಾ ಚಿತ್ರದ ನಾಯಕ ತಾರಖ್, ಹಾಸ್ಯನಟ ಪೃಥ್ವಿ ಬಿಡುಗಡೆ ಮಾಡಿದರು.
ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಈ ಚಿತ್ರಕ್ಕೆ ಅಳವಡಿಸಿದ್ದಾರೆ. ನಾಲ್ಕು ವರ್ಷದ ಮಗುವಿನೊಂದಿಗೆ ತಾಯಿಯು ಪಡುವ ಪರಿಪಾಟಲು ಇದರಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್.
ನಿರ್ಮಾಪಕ ವಿಜಯೇಂದ್ರ ಮಾತನಾಡಿ, ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು ನಾಯಕಿ ಹಾಗೂ ಒಂದು ಮಗುವಿನ ಮೇಲೆ ನಡೆಯುವ ಕಥೆ ಹೊಂದಿದ್ದು ನಾನು ಕೂಡ ಉದ್ಯಮಿಯ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು.
ನಿರ್ದೇಶಕ ಉಪ್ಪರಿ ರಮೇಶ್ ಮಾತನಾಡಿ, ಸಸ್ಪೆನ್ಸ್ , ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಕೃತ ಎಂಬ ಸಂಸ್ಕøತ ಪದವನ್ನು ಬಳಸಿದ್ದೇವೆ, ಇಡೀ ಚಿತ್ರವು ಒಂದೇ ರಾತ್ರಿಯಲ್ಲಿ ನಡೆಯಿದ್ದು ತಾಯಿ ಹಾಗೂ ಮಗು ಇಬ್ಬರೇ ಇರುವ ಮನೆಗೆ ಅನಾಮಿಕನ ಎಂಟ್ರಿ ಆದಾಗ ನಡೆಯುವ ಸ್ವಾರಸ್ಯಕರ ಕಥೆಯನ್ನು ಚಿತ್ರಕ್ಕೆ ಅಳವಡಿಸಿದ್ದೇವೆ ಎಂದು ಹೇಳಿದರು.
ನಾಯಕಿ ಮೇಘನಾಗೌಡ ಮಾತನಾಡಿ, ನಾನು ಈ ಹಿಂದೆ ಹಳ್ಳಿ ಪಂಚಾಯ್ತಿ ಎಂಬ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ಹೋಮ್ಲಿ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು.ಮಂಜು ಚರಣ ಈ ಚಿತ್ರಕ್ಕೆ ಸಾಹಿತ್ಯ ರಚನೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಾಯಕಿಯ ಸ್ನೇಹಿತೆಯಾಗಿ ರಶಿಕಾ ನಟಿಸಿದ್ದಾರೆ ಚುನಾವಣೆ ಮುಗಿದ ನಂತರ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿರುವ ಚಿತ್ರತಂಡವು ಪ್ರೇಕ್ಷಕರ ಅಗ್ನಿ ಪರೀಕ್ಷೆಯಲ್ಲಿ ಗೆದ್ದುಬರುವಂತಾಗಲಿ.
Pingback: lees recensie
Pingback: Digital Transformation Company