ಚಿತ್ರ ವಿಮರ್ಶೆ : ದೃಶ್ಯ ಕಾವ್ಯವಾಗುವ ಬಗೆ!

ಬಿಸಿನಿಮಾಸ್ ಚಿತ್ರ ವಿಮರ್ಶೆ : ದೃಶ್ಯ ಕಾವ್ಯವಾಗುವ ಬಗೆ! 

ಚಿತ್ರ : ಮುಂದಿನ ನಿಲ್ದಾಣ

ನಿರ್ದೇಶನ: ವಿನಯ್‌ ಭಾರದ್ವಾಜ್‌

ತಾರಾಗಣ: ಪ್ರವೀಣ್‌ ತೇಜ್‌, ರಾಧಿಕಾ ನಾರಾಯಣ್‌, ಅನನ್ಯ ಕಶ್ಯಪ್‌, ದತ್ತಣ್ಣ, ಅಜಯ್‌

ಲೈಫ್ ಒಂದು ಜರ್ನಿ ಎಂಬುದನ್ನು ನಾವು ಅಲ್ಲಿ ಇಲ್ಲಿ ಕೇಳಿತ್ತೇವೆ ಓದಿತ್ತೇವೆ. ಈ ಲೈಫ್‍ ಜರ್ನಿಯನ್ನೇ ಪ್ಲಾಟ್ ಆಗಿಟ್ಟುಕೊಂಟು ಡೈರೆಕ್ಟರ್ ಭಾರಾದ್ವಾಜ್, ಲೈಫ್‍ನಲ್ಲಿ ಅಚಾನಕ್ ಎದುರಾಗುವ ಸಂಬಂಧಗಳನ್ನು ಒಂದು ಸುಂದರ ಚಿತ್ರಪಟದ ರೀತಿಯಲ್ಲಿ ತೋರಿಸುವ ಪ್ರಾಮಾಣಿಕ ಪ್ರಯತ್ನವನ್ನು ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಮಾಡಿದ್ದಾರೆ.

ಇದು ಮಿಲೆನಿಯಲ್ ಅಂದ್ರೆ ಈ ಕಾಲದ ಯುವಜನಾಂಗದ ಕಥೆ. ಸಾಫ್ಟ್‍ವೇರ್ ಇಂಜಿನಿಯರ್ ಪಾರ್ಥ, ಆರ್ಟ್‍ಕ್ಯೂಟೆರ್ ಮೀರಾ ಮತ್ತು ಮೆಡಿಕಲ್‍ಸೈನ್ಸ್ ಸ್ಟೂಡೆಂಟ್ ಅಹನಾ ಕಷ್ಯಪ್ ಈ ಮೂವರ ಮಧ್ಯೆ ನಡೆಯುವ ಕಥೆ. ಈ ಮೂವರ ಕಥೆಯನ್ನು ಪಾರ್ಥನನ್ನು ಒಂದು ರೀತಿಯಲ್ಲಿ ನಿರೂಪನಾಗಿಯೂ, ಪಾತ್ರವಾಗಿಯೂ ಕಥೆ ಹೇಳಿಕೊಂಡು ಹೋಗುತ್ತಾರೆ ಭಾರಾದ್ವಾಜ್. ಈ ಹಿಂದೆ ಇದೇ ಮಿಲೆನಿಯಲ್‍ಗಳ ಕಥೆ ಹೊತ್ತುಕೊಂಡು ಕನ್ನಡದಲ್ಲೂ ಸಾಕಷ್ಟು ಸಿನ್ಮಾಗಳು ಬಂದು ಹೋಗಿವೆ. ಭಾರಾಧ್ವಾಜರ ಹೊಸ ಪ್ರಯತ್ನ ಇದಲ್ಲದೇ ಹೋದರೂ ಚಿತ್ರದ ನರೇಶನ್‍ನಲ್ಲಿ ಸಾಕಷ್ಟು ಹೊಸತನವಿದೆ. ಅದಕ್ಕೇ ಚಿತ್ರ ಅನಾಯಾಸವಾಗಿ ನೋಡಿಸಿಕೊಂಡು ಹೋಗುತ್ತದೆ.

ದೃಶ್ಯಗಳನ್ನೇ ಕಾವ್ಯವನ್ನಾಗಿಸಿ ಬದುಕಿನ ಸಿಹಿ-ಕಹಿಯನ್ನು ಬಿಚ್ಚಿಡುತ್ತಲೇ ಅಲ್ಲಲ್ಲಿ ಭಾವನಗೆ ತಾಕುವ ಚಿತ್ರ, ಕೊನೆಯಲ್ಲಿ ಸಿಹಿ-ಕಹಿ ಎರಡೂ ಲೈಫ್‍ನ ಭಾಗ ಎಂಬುದನ್ನು ಹೇಳುತ್ತದೆ. ಈ ಚಿತ್ರವ್ನನು ಒಂದು ಕಮರ್ಶಿಯಲ್ ಅಂಶಗಳನ್ನು ಮೈಂಡ್‍ನಲ್ಲಿ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ನಿರಾಶೆ ಖಂಡಿತ. ಯಾಕೆಂದರೆ ಇಂತಹ ಹಲವು ಲೇಯರ್‌ ನಲ್ಲಿ ಕಥೆ ಹೇಳುವ ಚಿತ್ರಗಳನ್ನು ನೋಡಲು ಬೆರೆಯದೇ ಆದ ಮೈಂಡ್‍ಸೆಟ್ ಇರಬೇಕು ಇಲ್ಲವೆಂದಾದರೆ, ಕೇವಲ ದೃಶ್ಯಗಳ ಮೂಲಕ ಸಾಕಷ್ಟನ್ನು ಹೇಳುವ ಭಾರಾದ್ವಾಜ್ ಪ್ರಯತ್ನ ಅರ್ಥವೇ ಆಗಲಾರದು.
ಸಿನ್ಮಾದ ಪ್ರಧಾನ ಪಾತ್ರಗಳು ತೆಗೆದುಕೊಳ್ಳುವ ನಿರ್ಧಾರಗಳು ಸರಿಯೇ, ತಪ್ಪೇ? ನಿರ್ಧಾರವನ್ನು ಬದಲಿಸುವ ಅವಕಾಶ ಇದ್ದರೂ ಪಾರ್ಥ ಯಾಕೆ ತನ್ನ ನಿರ್ಧಾರಕ್ಕೇ ಅಂಟಿಕೊಂಡಿರತ್ತಾನೆ. ತನ್ನ ನಿರ್ಧಾರ ತನ್ನ ಬದುಕಿನ ಕಹಿ ಅನುಭವಾಗಬಹುದು ಅಂತ ಗೊತ್ತಿದ್ದೂ ಯಾಕೆ ಮೀರಾ ಮತ್ತು ಅಹನಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ? ಎಂಬ ದಂದ್ವವನ್ನು ನೋಡುಗನಲ್ಲಿ ಚಿತ್ರ ಉಳಿಸಿಹೋಗುತ್ತದೆ. ಈ ದಂದ್ವವೇ ಚಿತ್ರದ ಶಕ್ತಿ. ಥೀಯೆಟರ್‍ನಿಂದ ಹೊರ ಬಂದ ನಂತರವೂ ಚಿತ್ರದ ಪಾತ್ರಗಳು ನೋಡುಗನನ್ನು ಕಾಡುತ್ತವೆ ಅಂದರೆ ಅಲ್ಲಿಗೆ ಚಿತ್ರತಂಡದ ಶ್ರಮ ಸಾರ್ಥಕವಲ್ಲವೇ?

ಪಾರ್ಥ ಪಾತ್ರದಲ್ಲಿ ಇಮೋಶನ್ಸ್ ಸಾಕಷ್ಟು ಸೆಟಲ್ ಆಗಿ ಪ್ರೆಸೆಂಟ್ ಮಾಡಿರೋ ಪ್ರವೀಣ್ ತೇಜ್, ಸಾಕಷ್ಟು ಹೋಮ್‍ವರ್ಕ್ ಮಾಡಿರೋದು ಅರಿವಿಗೆ ಬರುತ್ತದೆ. ಅಹನಾ ಪಾತ್ರಧಾರಿ ಅನನ್ಯ ತಾನು ಅಭಿನಯಿಸುತ್ತಿದ್ದೇನೆ ಅನ್ನುವುದನ್ನೇ ಮರೆತು ಸಾಕಷ್ಟು ಮಚ್ಯೂರ್ಡ್ ಆದ ಅಭಿನಯ ನೀಡಿದ್ದಾರೆ. ಮೀರಾ ಆಗಿರುವ ರಾಧಿಕಾ ಇಂತದೊಂದು ಪಾತ್ರಕ್ಕಾಗಿ ಅದೆಷ್ಟು ವರ್ಷ ಧ್ಯಾನಿಸಿದ್ದರೋ? ಎಲ್ಲಕ್ಕಿಂತ ಮಿಗಿಲಾಗಿ ಇಡೀ ಚಿತ್ರವನ್ನು ಚೇತೋಹಾರಿ ಗೊಳಿಸಿರೋದು ಕ್ಯಾಮೆರಾಮೆನ್ ಅಭಿಮನ್ಯು ಸದಾನಂದನ್ ಮತ್ತು ಕಲರ್‍ಗ್ರೇಡ್ ಮಾಡಿರೋ ಪುಣ್ಯಾತ್ಮ. ಕೊನೆಯಲ್ಲಿ ನೋಡುಗರಲ್ಲಿ ಒಂದು ಬಿನ್ನಹ, ಈ ಚಿತ್ರವನ್ನು ಯಾವುದೇ ಕಾರಣಕ್ಕೂ ಸಿಂಗಲ್‍ಸ್ಕ್ರೀನ್‍ನಲ್ಲಿ ನೋಡುವ ಪ್ರಯತ್ನ ಮಾಡಬೇಡಿ. ನೋಡಿದಿರಿ ಅಂದಾದರೇ ಅದು ಕಲರ್‍ಗ್ರೇಡ್ ಟೆಕ್ನಿಶಿಯನ್‍ಗೆ ನೀವು ಮಾಡುವ ಘೋರ ಅಪಮಾನ!

@ಬಿಸನಿಮಾಸ್ ವಿಮರ್ಶೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!