ದಮಯಂತಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್

ಸ್ಯಾಂಡಲ್‍ವುಡ್‍ನ ಸ್ವೀಟಿ ರಾಧಿಕಾರ ಹುಟ್ಟುಹಬ್ಬದಂದು ಅವರು ನಟಿಸಿರುವ ದಮಯಂತಿ ಚಿತ್ರದ ಆಡಿಯೋವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.ದರ್ಶನ್ ಮಾತನಾಡಿ, ರಾಧಿಕಾ ಕುಮಾರಸ್ವಾಮಿ ಅವರು ನನಗಿಂತ ಒಂದು ವರ್ಷ ಸೀನಿಯರ್, ನನ್ನ ಮೆಜೆಸ್ಟಿಕ್ ಬರುವ ಮುನ್ನ ಅವರ ನೀಲಮೇಘಶ್ಯಾಮ ಚಿತ್ರ ಬಿಡುಗಡೆಯಾಗಿತ್ತು,

ದಮಯಂತಿ ಚಿತ್ರದಲ್ಲಿ ರಾಧಿಕಾ ಸೇರಿದಂತೆ ಎಲ್ಲ ನಟರು ತುಂಬಾ ಚೆನ್ನಾಗಿ ನಟಿಸದ್ದಾರೆ, ಚೀನಾದಲ್ಲಿ ನಾವು ಸತ್ತ ನಂತರ ಹೇಗಿರುತ್ತೆ ಎಂಬ ಅನುಭವಕ್ಕಾಗಿ 10 ನಿಮಿಷಗಳ ಕಾಲ ಮಲಗಿಸುತ್ತಾರೆ, ನಮ್ಮಲ್ಲಿ ನಾಲ್ಕು ಜನ ಹೊತ್ತುಕೊಂಡು ಹೋಗುತ್ತಾರೆ, ಇಂತಹ ದೃಶ್ಯಗಳು ರಾಧಿಕಾರ ನೀಲಮೇಘ ಶ್ಯಾಮ ಹಾಗೂ ನಾನು ಅಭಿನಯಿಸಿದ್ದ ಮೆಜೆಸ್ಟಿಕ್ ಚಿತ್ರದಲ್ಲಿ ಬಂದಿತ್ತುಘಿ.

ರಾಧಿಕಾ ಸಾಕಷ್ಟು ಪರಿಶ್ರಮ ಪಟ್ಟಿದ್ದಾರಿಂದಲೇ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ, ಅವರ ಕಾಲದ ನಟಿಯರು ಇಂದು ಮರೆಯಾಗಿದ್ದಾರೆ, ಇವರು ಮಾತ್ರ ಇನ್ನು ಬ್ಯೂಸಿಯಾಗಿದ್ದಾರೆ, ದಮಯಂತಿ ಪಾತ್ರವನ್ನು ಮಾಡಬೇಕಾದರೆ ಧೈರ್ಯ, ಶಕ್ತಿಘಿ, ಸಿದ್ಧತೆ ಎಲ್ಲಾ ಬೇಕು, ಅಲ್ಲದೆ ಕುಟುಂಬದವರ ಪ್ರೋತ್ಸಾಹವು ಬೇಕು, ಈ ಚಿತ್ರ ಬರೀ ಕಾಫಿಯಾಗರದೆ ಮೃಷ್ಣಾನ್ನ ಭೋಜನ ಸವಿದಂತಹ ಅನುಭವ ನೀಡುತ್ತದೆ ಎಂದು ಹೇಳಿದರು.

ನಾಯಕಿ ರಾಧಿಕಾ ಕುಮಾರಸ್ವಾಮಿ ಮಾತನಾಡಿ, ನನ್ನ ಹುಟ್ಟುಹಬ್ಬದಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನನ್ನ ನಟನೆಯ ದಮಯಂತಿ ಚಿತ್ರದ ಟ್ರೈಲರ್, ಆಡಿಯೋ ಬಿಡುಗಡೆ ಮಾಡಿರುವುದು ನನ್ನ ಹುಟ್ಟುಹಬ್ಬಕ್ಕೆ ಸಿಕ್ಕ ಉಡುಗೊರೆಯಾಗಿದೆ. ದರ್ಶನ್‍ರೊಂದಿಗೆ ಮಂಡ್ಯಘಿ, ಅನಾಥರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೆಘಿ, ದಮಯಂತಿ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ಈ ಚಿತ್ರದ ಹಿನ್ನೆಲೆ ಸಂಗೀತ ಎಲ್ಲರ ಮನಸ್ಸನ್ನ ಕದಿಯುತ್ತದೆ ಎಂದು ಹೇಳಿದರು.

ನಿರ್ಮಾಪಕ, ನಿರ್ದೇಶಕ ನವರಸನ್ ಮಾತನಾಡಿ,ದಮಯಂತಿ ಚಿತ್ರದಲ್ಲಿ ರಾಧಿಕಾ ಅವರ ಪಾತ್ರ ತುಂಬಾ ವಿಶೇಷವಾಗಿದೆ, ಇಡೀ ಚಿತ್ರವನ್ನು ಅವರು ತೂಗಿಸಿಕೊಂಡು ಹೋಗಿದ್ದಾರೆ, ಗ್ಲಾಮರ್ ಪಾತ್ರಗಳಲ್ಲೇ ಮಿಂಚಿದ್ದ ಅವರಿಗೆ ಈ ಚಿತ್ರದ ಪಾತ್ರ ಡಿಫರೆಂಟಾಗಿದೆ. ಕಲಾವಿದರು, ತಂತ್ರಜ್ಞರ ಸಹಕಾರದಿದಲೇ ಈ ಚಿತ್ರ ಯೋಜನೆಯಂತೆ ತಯಾರಾಗಿದೆ.

ಇಲ್ಲಿರುವ ತುಣುಕುಗಳು ಕೇವಲ ಚಿತ್ರದ ಸ್ಯಾಂಪಲ್ ಅಷ್ಟೇ. ಚಿತ್ರವು ಉತ್ತಮ ಮನರಂಜನೆ ಕೊಡುತ್ತದೆ ಎಂದು ಹೇಳಿದರು.ಲಹರಿ ವೇಲು ಮಾತನಾಡಿ, ದಮಯಂತಿ ಚಿತ್ರವು ಆರುಂಧತಿ ಸಿನಿಮಾದ ಫೀಲಿಂಗ್ ಕೊಡಲಿದೆ, ಆ ಚಿತ್ರದ ಹಾಡುಗನ್ನು ನಮ್ಮ ಆಡಿಯೋ ಸಂಸ್ಥೆಯಿಂದಲೇ ಹೊರತಂದಿದ್ದೆವು ಆ ಸಿನಿಮಾದ ಹಾಡುಗಳು ಹಿಟ್ ಆಗಿದ್ದವು, ದಮಯಂತ ಚಿತ್ರವು ಡಬ್ಬಲ್ ಹಿಟ್ ಆಗಲಿ.ಆದಷ್ಟು ಬೇಗ ಪ್ಲಾಟಿನಂ ಡಿಸ್ಕ್ ಕೊಡುತ್ತೇವೆ ಎಂದು ಹೇಳಿದರು.ತಬಲ ನಾಣಿ, ಮಿತ್ರ, ಭಜರಂಗಿ ಲೋಕಿ, ಪವನ್‍ಕುಮಾರ್, ಕಂಪೆಗೌಡ, ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್, ಸಾಹಿತಿ ಕಿನ್ನಾಲ್‍ರಾಜ್ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಮುಂತಾದವರೆಲ್ಲ ಹಾಜರಿದ್ದು ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.ವಿಶಿಷ್ಟ ಲುಕ್, ಜಬರ್‍ದಸ್ತ್ ಡೈಲಾಗ್ ಮೂಲಕ ಪ್ರೇಕ್ಷಕರ ಮನಸ್ಸನ್ನು ಕದಿಯಲು ಹೊರಟಿರುವ ರಾಧಿಕಾಗೆ ದಮಯಂತಿ ಚಿತ್ರವು ಸಕ್ಸಸ್ ತಂದುಕೊಡಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!