ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ಬಿಡುಗಡೆ ಭಾಗ್ಯ

ಕಾದಂಬರಿ ಆಧಾರಿತ ಚಿತ್ರ ‘ಭಾಗ್ಯಶ್ರೀ’ ಬಾಲ್ಯ ವಿವಾಹ ದುಷ್ಪರಿಣಾಮ ಕುರಿತಾದ ಸಿನಿಮಾ ಈ ವಾರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಶ್ರೀಮತಿ ಆಶಾ ಶಾಹಿರ ಬಿಳಗಿ ಹಾಗೂ ಶಾಹಿರ ಬಿಳಗಿ ಬಾಗಲಕೋಟೆ ಜಿಲ್ಲೆಯವರು ಬನಶಂಕರಿ ಆಟ್ರ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ತಯಾರಿಸಿದ್ದಾರೆ. ಎಸ್ ಮಲ್ಲೇಶ್ ಅವರ ಕಾದಂಬರಿ ‘ಭಾಗ್ಯಶ್ರೀ’ ಅದೇ ಹೆಸರಿನಲ್ಲಿ ಅವರು ನಿರ್ದೇಶನ ಸಹ ಮಾಡಿದ್ದಾರೆ.

7 ನೇ ತರಗತಿ ಪ್ರಾರ್ಥನ ಶಾಲೆಯ ವಿಧ್ಯಾರ್ಥಿ ಕುಮಾರಿ ಹೀರ ಈ ಚಿತ್ರದಲ್ಲಿ ‘ಭಾಗ್ಯಶ್ರೀ’ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಪದ್ಮಶ್ರೀ ದೊಡ್ಡರಂಗೆ ಗೌಡ ಅವರು ಎರಡು ಹಾಡುಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಕುರಿತಾದ ಒಂದು ವಿಶೇಷವಾದ ಹಾಡು ನಾಲ್ಕುವರೆ ನಿಮಿಷಗಳ ಕಾಲ ಮೂಡಿಬಂದಿದೆ.

ಮೂರು ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಅವರ ರಾಗ ಸಂಯೋಜನೆಯಲ್ಲಿ ಮೂಡಿಬಂದಿದೆ. ನಿರ್ದೇಶಕ ಮಲ್ಲೇಶ್ ಸಹ ಒಂದು ಗೀತೆಯನ್ನು ರಚಿಸಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಹೇಮಂತ್ ಕುಮಾರ್ ಛಾಯಾಗ್ರಹಣ ಇರುವ ಈ ಭಾಗ್ಯಶ್ರೀ ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ, ಕೆ ಜಿ ಎಫ್ ಕೃಷ್ಣೋಜಿ ರಾವ್, ಏಕನಾಥ್, ನಾಗರಾಜ್ ಹಾಗೂ ಇತರರು ತಾರಾಗಣದಲಿದ್ದಾರೆ.

This Article Has 1 Comment
  1. Pingback: Regression testing

Leave a Reply

Your email address will not be published. Required fields are marked *

Translate »
error: Content is protected !!