ಕೇಂದ್ರ ಸರ್ಕಾರವು ರೂ.2000 ಮತ್ತು ರೂ.500 ಬೆಲೆಯ ನೋಟುಗಳನ್ನು 2016ರಲ್ಲಿ ಅಪನಗದಿಕರಣಗೊಳಿಸಿತು, ಈ ಸಂದರ್ಭದಲ್ಲಿಜನಸಾಮಾನ್ಯರುಯಾವರೀತಿ ಸಮಸ್ಯೆಗೆ ಒಳಪಟ್ಟರು. ಕಾಳಧನಿಕರು ಬಡವರನ್ನು ಹೇಗೆ ಉಪಯೋಗಿಸಿಕೊಂಡರುಎಂಬುದುಎಲ್ಲರೂ ನೋಡಿದ್ದು, ಕೇಳಿದ್ದು ಆಗಿದೆ.ಅದಕ್ಕಿಂತಲೂ ಭಿನ್ನವಾದಒಂದಷ್ಟು ಸಂಗತಿಗಳನ್ನು ‘ಜನ್‍ಧನ್’ ಸಿನಿಮಾದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಟು ಚಿತ್ರದುರ್ಗವೆಂದು ಅಡಿ ಬರಹದಲ್ಲಿ ಹೇಳಿಕೊಂಡಿದೆ. ಹಾಗಂತ ತಂಡವು ಏಕಾಏಕಿ ಮಾಹಿತಿ ಕಲೆಹಾಕಿಲ್ಲ. ಅಡಿಪಾಯದಲ್ಲಿ ಸಂಶೋಧನೆ ನಡೆಸಿ ಮತ್ತಷ್ಟು ವಿಷಯಗಳನ್ನು ಸಂಗ್ರಿಹಿಸಿಕೊಂಡಿದೆ. ಜನ್‍ಅಂದರೆಕಾಮನ್, ಧನ್‍ಗೆರಾಯಲ್‍ಅಂತಾರೆ. ಇವರೆಡರ ಮಧ್ಯೆ ನಡೆಯುವುದೇ ಸಿನಿಮಾದ ಸಾರಾಂಶವಾಗಿದೆ.ಇದರಜೊತೆಗೆ ಸಿನಿಮಾದಲ್ಲೊಂದು ಸಿನಿಮಾದಕತೆಯನ್ನು ಹೇಳಲಾಗಿದೆ.ಒಟ್ಟಾರೆಒಂದು ದಿನದಲ್ಲಿ ನಡೆಯುವಕತೆಯಾಗಿರುವುದು ವಿಶೇಷ.ದ್ವಿತಿಯಾರ್ಧದಲ್ಲಿಒಂದುದೃಶ್ಯ ನೋಡದೆಇದ್ದರೆ ಮುಂದಿನ ಸನ್ನಿವೇಶಗಳು ಅರ್ಥವಾಗುವುದಿಲ್ಲವಂತೆ.
ಮರಡಿಹಳ್ಳಿ ನಾಗಚಂದ್ರ ಸಿನಿಮಾಕ್ಕೆಕತೆ, ನಿರ್ದೇಶನಅಲ್ಲದೆಬಂಡವಾಳದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸುನಿಲ್‍ಶಶಿ ನಾಯಕನಾಗಿಆರಂಗ್ರೇಟಂ.ರಚನಾದಶರಥ ನಾಯಕಿ. ಇಬ್ಬರುತೆರೆ ಮೇಲೆ ಇದೇರೀತಿ ನಟನೆ ಮಾಡಿರುವುದು ವಿಶೇಷ. ನಿರ್ದೇಶಕನಾಗಿ ಅರುಣ್, ಖಳನಾಗಿ ಸುಮನ್‍ಶರ್ಮ, ಜಯಲಕ್ಷೀ ಮುಂತಾದವರ ನಟನೆಇದೆ. ತಲಾ ಒಂದೊಂದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಕಿ, ಎಸ್.ಪಿ.ಚಂದ್ರಕಾಂತ್ ಮತ್ತುಟಾಪ್‍ಸ್ಟಾರ್‍ರೇಣು. ಅದರಲ್ಲೂಕೊನೆಯವರು ಕೆಲಸದಜೊತೆಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕುವರಯಲ್ಲಪ್ಪ, ವಿಕ್ಕಿ ಹಾಗೂ ನಿರ್ದೇಶಕರ ಸಾಹಿತ್ಯವಿದೆ.ಗೂರವನಹಳ್ಳೀ ಮಹಾಲಕ್ಷೀಅಮ್ಮನ ಮೊಮ್ಮಗಳಾದ ಶ್ರೀಲಕ್ಷೀಪ್ರಸನ್ನ ‘ದೀಪೋತ್ಸವ ಲಕ್ಷೀ ದೀಪೋತ್ಸವ’ ಕಂಠದಾನ ಮಾಡುವಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೋಂದು ಹಿರಿಮೆಯಾಗಿದೆ.ಬೆಂಗಳೂರು, ಚಿತ್ರದುರ್ಗ, ಸಿರಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.
ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ ಲಹರಿವೇಲು ಮಾತನಾಡಿಅನಾಣ್ಯೀಕರಣ ಸಂದರ್ಭದಲ್ಲಿ ಸಾಮಾನ್ಯರಿಗೆ ತೊಂದರೆಆಗಿಲ್ಲ. ಶ್ರೀಮಂತರು, ತೆರಿಗೆ ಪಾವತಿಸದವರಿಗೆ ಅನಾನುಕೂಲವಾಯಿತು. ನಿರ್ಮಾಪಕರ ಸಿನಿಮಾಕ್ಕೆಜನ ಜಾಸ್ತಿ ಬಂದು,ಧನ ಹೆಚ್ಚು ಬರಲೆಂದು ಶುಭಹಾರೈಸಿದರು.
ನಟಧರ್ಮಕೀರ್ತಿರಾಜ್‍ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು.ಪ್ರಾರಂಭದಲ್ಲಿಗಣ್ಯರಿಂದಸಸಿಗೆ ನೀರು ಹಾಕುವ ಮೂಲಕ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವಕಲ್ಪನೆಯುಅರ್ಥಪೂರ್ಣವಾಗಿತ್ತು. ಆರ್.ತ್ಯಾಗರಾಜು ಸಹನಿರ್ಮಾಪಕರಾಗಿರುವಚಿತ್ರವುಇದೇ ತಿಂಗಳು ಬಿಡುಗಡೆಯಾಗುವ ಸಾದ್ಯತೆಇದೆ.
Pingback: click for more