ನಾನು ನನ್ ಜಾನು ಚಿತ್ರದ ಟ್ರೈಲರ್ ಬಿಡುಗಡೆ

ಸ್ಯಾಂಡಲ್‍ವುಡ್‍ನಲ್ಲಿ ಪ್ರತಿ ವಾರವು ಯಾವುದಾದರೂ ಚಿತ್ರದ ಧ್ವನಿಸುರುಳಿ ಬಿಡುಗಡೆಯೋ, ಟ್ರೇಲರ್ ಅನಾವರಣದ ಸಮಾರಂಭವೋ ನಡೆಯುತ್ತಲೇ ಇರುತ್ತದೆ, ಈ ವಾರ ಆ ಸಾಲಿಗೆ ನಾನು ನನ್ ಜಾನು ಸೇರಿಕೊಂಡಿದೆ.

ರೇಣುಕಾಂಬ ಥಿಯೇಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ನನ್ ಜಾನು ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮನು, ರಿತ್ವಿಕಾಶೆಟ್ಟಿ ನಾಯಕ, ನಾಯಕಿಯಾಗಿ ನಟಿಸಿದ್ದರೆ ಟಾಕಿಂಗ್ ಸ್ಟಾರ್ ಸೃಜನ್‍ಲೋಕೇಶ್ ವಿಶೇಷ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮಜಾಭಾರತದ ಮೂವರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ನಾಯಕ ಆ್ಯಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ, ಆಗ ಅವನು ಅನುಭವಿಸುವ ಕಷ್ಟಗಳು, ಅದರಿಂದ ಹೊರ ಬರುವಾಗ ಅವನು ಏನೆಲ್ಲಾ ಸ್ಥಿತಿಯನ್ನು ಎದುರಿಸುತ್ತಾನೆ ಎಂಬುದೇ ನಾನು ನನ್ ಜಾನು ಚಿತ್ರದ ಒನ್‍ಲೈನ್ ಸ್ಟೋರಿ.

ನಿರ್ದೇಶಕ ಶ್ರೀ ಹರಿ ಮಾತನಾಡಿ, ನಾನು ನನ್ ಜಾನು ಚಿತ್ರದಲ್ಲಿ 86 ಜನ ಕಲಾವಿದರು ನಟಿಸಿದ್ದರೂ ಎಲ್ಲಾ ಪಾತ್ರಕ್ಕೂ ಮಹತ್ವವಿದೆ. ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳ ಆಗಮನವಾಗುತ್ತದೆ.

ಈ ಹಿಂದೆ ಬಿಡುಗಡೆ ಮಾಡಿದ್ದ ಈ ಚಿತ್ರದ ಟೀಸರ್‍ಗೆ ಹೆಚ್ಚು ಹಿಟ್ ಬಂದಿದ್ದು, ಈಗ ಬಿಡುಗಡೆಯಾಗಿರುವ ಟ್ರೈಲರ್‍ಗೂ ಅದೇ ರೀತಿಯ ರೆಸ್ಪಾನ್ಸ್ ಬರುವ ನಿರೀಕ್ಷೆಯಿದೆ. ಈ ತಿಂಗಳ ಅಂತ್ಯದಲ್ಲಿ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ನಾಯಕ ಮನು ಮಾತನಾಡಿ, ಈ ಚಿತ್ರದಲ್ಲಿ ನಾನು ಜವಾಬ್ದಾರಿ ಹಾಗೂ ಕೆಲಸ ಕಾರ್ಯ ಇಲ್ಲದ ಹುಡುಗನಾಗಿ ಎರಡು ಶೇಡ್‍ಗಳಲ್ಲಿ ನಟಿಸಿದ್ದೇನೆ, ಅಂತಹ ಪ್ರವೃತ್ತಿಯವನು ಹೇಗೆ ಸಮಾಜದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂಬುದನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ಹೇಳಿದ್ದಾರೆ ಎಂದರು.

ನಾಯಕಿ ರುತ್ವಿಕಾಶೆಟ್ಟಿ ಮಾತನಾಡಿ, ಉಡುಪಿಯ ಮೂಲದವಳಾದ ನನಗೆ ಚಿತ್ರದಲ್ಲೂ ಸಂಪ್ರದಾಯಸ್ಥ ಮನೆಯ ಹುಡುಗಿಯ ಪಾತ್ರ ಸಿಕ್ಕಿದೆ. ನಾಯಕನ ಕನಸಿಗೆ ಬೆಂಬಲವಾಗಿ ನಿಲ್ಲುವ ಹುಡುಗಿಯ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಹರೀಶ್ ಹಾಗೂ ಕೆಂಪೇಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ 7 ಹಾಡುಗಳಿದ್ದು ಶ್ರೀಧರ ಕಶ್ಯಪ್ ಸಂಗೀತ ನೀಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಲವ್ ಸಬ್ಜೆಕ್ಟ್ ಇರುವ ಅನೇಕ ಚಿತ್ರಗಳು ಸಕ್ಸಸ್ ಆದಂತೆ ನಾನು ನನ್ ಜಾನು ಎಂಬ ಚಿತ್ರವು ಸಕ್ಸಸ್ ಕಾಣುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!