‘ರಿಲ್ಯಾಕ್ಸ್ ಸತ್ಯ’ ಚಿತ್ರದ ಟ್ರೈಲರ್ ಬಿಡುಗಡೆ

ಅತಿಯಾದ ಕೆಲಸದ ಒತ್ತಡದಿಂದ ಹೊರಬರಲು ಸ್ವಲ್ಪ ರಿಲ್ಯಾಕ್ಸ್ ಬೇಕೇಬೇಕು ಈಗ ನಿರ್ದೇಶಕ ನವೀನ್‍ರೆಡ್ಡಿ ಅದೇ ಹೆಸರಿನಲ್ಲಿ ರಿಲ್ಯಾಕ್ಸ್ ಸತ್ಯ ಎಂಬ ಚಿತ್ರದಲ್ಲಿ ಕ್ರೈಂ, ಥ್ರಿಲ್ಲರ್, ಕಾಮಿಡಿಯನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡಲು ಹೊರಟಿದ್ದಾರೆ.

ಪ್ರಭು ಮಂಡಕರ ಹಾಗೂ ಮಾನ್ವಿತಾ ಹರೀಶ್ ಅವರು ನಾಯಕ, ನಾಯಕಿಯಾಗಿ ನಟಿಸಿರುವ ರಿಲ್ಯಾಕ್ಸ್ ಸತ್ಯ ಚಿತ್ರದ ಟ್ರೈಲರ್ ಅನ್ನು ಮೊನ್ನೆ ಕಲಾವಿದರ ಸಂಘದ ಆವರಣದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ರಿಲ್ಯಾಕ್ಸ್ ಸತ್ಯ ಚಿತ್ರದಲ್ಲಿ ಮನುಷ್ಯನ ಜೀವನದಲ್ಲಿ ಭಾವನೆಗಳು ತೀವ್ರವಾದಾಗ ಅಥವಾ ಹತಾಶೆಗೆ ಒಳಗಾದಾಗ ಆತನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ತೋರಿಸಲು ನಿರ್ದೇಶಕರು ಹೊರಟಿದ್ದಾರೆ.

ಉಗ್ರಂ ಮಂಜು ಅವರು ದಾಸಣ್ಣ ಎಂಬ ವಿಶಿಷ್ಟ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರೆ, ನಾಯಕ ಪ್ರಭು ಮಂಡಕರ್ ಚಾಲನಾ ತರಬೇತಿ ಕೇಂದ್ರದ ಶಿಕ್ಷಕನಾಗಿದ್ದರೆ, ಮಾನ್ವಿತಾ ಹರೀಶ್ ಶ್ರೀಮಂತ ಮನೆತನದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಸ್ವಯಂವರ ಚಂದ್ರು ಭ್ರಷ್ಟ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.ನಟಿಯರಾದ ಕ್ರಪಿತಾವಾದ, ಮೇಘನಾ ಗಾಂವಕರ, ಸೂರಜ್‍ಗೌಡ, ಅಲ್ಲದೆ ನಿರ್ದೆಶಕ ಮಹೇಶ್‍ಕುಮಾರ್ ಹಾಜರಿದ್ದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಮೋಹನ್ ಕುಮಾರ್ ಎಚ್.ಆರ್, ಮೋಹನರೆಡ್ಡಿ ಮತ್ತು ಚೇತನ್‍ಕುಮಾರ್ ನಿರ್ಮಿಸಿರುವ ರಿಲ್ಯಾಕ್ಸ್ ಸತ್ಯ ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ಆನಂದ ರಾಜಾ ವಿಕ್ರಂ ಸಂಗೀತ ಸಂಯೋಜನೆ ಮಾಡಿದ್ದಾರೆ.

ಯೋಗಿ ಚಿತ್ರದ ಛಾಯಾಗ್ರಾಹಕರು ಇದೇ ಸಂದರ್ಭದಲ್ಲಿ ರಿಲ್ಯಾಕ್ಸ್ ಸತ್ಯ ಚಿತ್ರ ತಂಡ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸನ್ಮಾನಿಸಿತು. ಇದೇ ತಿಂಗಳ 15 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಆನಂದ ಆಡಿಯೋ ಈ ಚಿತ್ರ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

ರಿಲ್ಯಾಕ್ಸ್ ಸತ್ಯಕ್ಕೆ ಪ್ರೇಕ್ಷಕರು ಬೆಂಬಲ ನೀಡುವ ಮೂಲಕ ನಿರ್ಮಾಪಕರನ್ನು ರಿಲ್ಯಾಕ್ಸ್ ಮೂಡ್‍ಗೆ ತೆಗೆದುಕೊಂಡು ಹೋಗಲಿ ಎಂಬುದೇ ಸಿನಿಸುದ್ದಿಯ ಆಶಯ.

This Article Has 2 Comments
  1. Pingback: situs judi bola resmi

  2. Pingback: Tow Truck Denton

Leave a Reply

Your email address will not be published. Required fields are marked *

Translate »
error: Content is protected !!