ದರ್ಶನ್ ‘ಕೆಂಡ’, ಸೂರಿ ಸಂಪಿಗೆ! ತೆರೆಗೆ ಬರದ ಚಿತ್ರಗಳು-PART -3

ದರ್ಶನ್ ‘ಕೆಂಡ’, ಸೂರಿ ಸಂಪಿಗೆ! ತೆರೆಗೆ ಬರದ ಚಿತ್ರಗಳು-PART -3

ಸೂರಿ ನಿರ್ದೇಶನದ `ಕೆಂಡ ಸಂಪಿಗೆ’ ಚಿತ್ರ ಸಾಕಷ್ಟು ಸೌಂಡು ಮಾಡಿದ್ದು ನಿಮ್ಗೆ ಗೊತ್ತೇ ಇದೆ. ಆದರೆ, ಈ ಚಿತ್ರದ ಹಿಂದಿನ ಸತ್ಯ ನೀವು ತಿಳಿದರೆ ಬೆರಗಾಗುತ್ತೀರಿ.
“ದುನಿಯಾ” “ಜಂಗ್ಲಿ” “ಜಾಕಿ” “ಟಗರು” “ಕಡ್ಡಿಪುಡಿ” ಅಬ್ಬಬ್ಬಾ ಎಂತ ಲೋಕಲ್ ಸುಕ್ಕಾ ಸಿನಿಮಾಗಳು ಇವು. ಕರಾಬ್ ಮನುಸ್ಸುಗಳ ಅನಾವರಣ ಮಾಡುವಂತಹ ಚಿತ್ರಗಳು, ಇಂತಹ ಚಿತ್ರಗಳನ್ನು ಸೂರಿಯವರು ನಿರ್ದೇಶನ ಮಾಡುವಲ್ಲಿ ನಿಸ್ಸೀಮರು. `ದೂಡ್ಡ ಮನೆ’ ಹುಡುಗದಂತಹ ಸಿನಿಮಾ ಮಾಡಿದಾಗ ಇದು ಸೂರಿ ಸಿನಿಮಾನೇ ಅಲ್ಲ, ಎಂದೂ ಚಿತ್ರ ರಸಿಕರು ಮೂಗುಮುರಿದರು. ಇಂತಹ ಪಕ್ಕಾ ಲೋಕಲ್ ಸುಕ್ಕಾ ಸುರಿ ಎಂಬ ಖ್ಯಾತಿ ಪಡೆದ ನಿರ್ದೇಶಕ ಇಂತಹ ಲೋಕಲ್ ಕತೆಯೊಂದನ್ನ ಆರಡಿ ಘಟ, ಖಡಕ್ ಡೈಲಾಗ್ ನಾಯಕ, ಡಿ-ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸೂರಿ ನಿರ್ದೇಶನ ಮಾಡಿದರೆ ಹೇಗಿರುತ್ತೆ!? ಇಂತಹದೂಂದು ಮಾತು ಕೇಳಿದ ತಕ್ಷಣ ಅಭಿಮಾನಿಗಳ ಎದೆಯಲ್ಲಿ ಪುಳಕವನ್ನುಂಟು ಮಾಡುವುದು ಸುಳ್ಳಲ್ಲ.

ಆದರೆ ಅಂತಹದೂಂದು ಪ್ರಯತ್ನ ನೆಡೆದು ನಿಂತು ಹೋಗಿತ್ತು. ಇದು ಜಂಗ್ಲಿ ದುನಿಯಾ ಮುಂಗಾರು ಮಳೆ ಸುರಿದ ಸಮಯದ ಮಾತು. ಅದು ಸೂರಿ ಮತ್ತು ಭಟ್ಟರ ಸುವರ್ಣಯುಗ. ಅಂದಿಗೆ ಜಾಕಿ ಸಿನಿಮಾವನ್ನ ಸೂರಿ ಚಿತ್ರಿಕರಣ ಮುಗಿಸುವ ವೇಳೆಗೆ ನಿರ್ಮಾಪಕ ರಾಮು ದರ್ಶನ್ ಅವರ ಕಾಲ್‍ಶೀಟ್ ಹಿಡಿದು ಕುಳಿತ್ತಿದ್ದರು ಸೂರಿಯೊಂದಿಗೆ ಮಾತು ಕತೆ ಮಾಡುವಷ್ಟರಲಿ ಜಾಕಿ ತೆರಿಗೆ ಬಂದಿತ್ತು. ಜಾಕಿಯ ಅಬ್ಬರ ಜೋರಾಗಿತ್ತು, ಪುನಿತ್ ನಟನೆಗೆ ಸೂರಿ ನಿರ್ದೇಶನಕ್ಕೆ ಪ್ರೇಕ್ಷಕ ಶರಣಾಗಿದ್ದ. ನಿರ್ಮಾಪಕ ರಾಮು ಅವರು ಸೂರಿ-ದರ್ಶನ್ ಕಾಂಬಿನೇಷನ್ ಚಿತ್ರ ಮಾಡಿಸಲು ಎಲ್ಲ ರೀತಿಯ ಸಜ್ಜಾಗಿದ್ದರು, ದರ್ಶನ್ ಅವರಿಗೂ ಈ ಕತೆಯು ಇಷ್ಟವಾಗಿತ್ತು. ಸೂರಿಯು ಅದರ ಮೇಲೆ ಸ್ಕ್ರೀಪ್ಟ್ ಮಾಡಲು ಕುಳಿತರು. ದರ್ಶನ್ ಅವರ ಎಲ್ಲ ಹಿಟ್ ಚಿತ್ರಗಳನ್ನು ಸಿಡಿ ತೆರಿಸಿಕೊಂಡು ನೋಡಿ ಅದ್ಯಯನ ಮಾಡಿ ವಿಭಿನ್ನ ರೀತಿಯಲ್ಲಿ ಹೇಗೆ ತೋರಿಸಬಹುದು ಎಂಬ ಲೆಕ್ಕಾಚಾರ ಹಾಕಿ “ಕೆಂಡಸಂಪಿಗೆ” ಶಿರ್ಷೀಕೆ ನೊಂದಣಿಯು ಆಯಿತು. ಸೂರಿ ದರ್ಶನ್ ಸಿನಿಮಾ ಕೆಂಡಸಂಪಿಗೆ ಎಂದು ಅನೌನ್ಸು ಮಾಡಿದರು. ಆದರೆ… ಒಂದೇ ಒಂದು ಯಾರೋದು ಮಾತಿನಿಂದ ವರ್ಷವಿಡೀ ಮಾಡಿದ ಕತೆ ನಿರಲ್ಲಿ ಬಿಟ್ಟಂತಾಯ್ತು. ಪತ್ರಿಕಾಗೋಷ್ಠಿಯಲ್ಲಿ ಸೂರಿ ಅವರು ನಿರ್ಮಾಪಕ ರಾಮು ಅವರು ಎಲ್ಲರು ಸಿನಿಮಾ ಬಗ್ಗೆ ಮಾತನಾಡಿ ಹೋದಮೇಲೆ. ಬಹುತೇಕ ಎಲ್ಲಾ ಪತ್ರಿಕಾ ಮಿತ್ರರು ಸತತವಾಗಿ ಮೂರು ನಾಲ್ಕು ಪ್ಲಾಪ್ ಕೊಡುತ್ತಾ ಬಂದ ದರ್ಶನ್ ಗೆ ಸೂರಿ ಗ್ಯಾರಂಟಿ ಬ್ರೇಕ್ ಕೊಡುತ್ತಾರೆ, ಎಂದೂ ಪ್ರಕಟಿಸಿದರು. ಅಲ್ಲಿಗೆ ಕೆಂಡಕ್ಕೆ ನಿರನ್ನು ಹಾಕಿದಂತೆ ಆಯ್ತು.

ದರ್ಶನ್ ಅವರಿಗೆ ಈ ಹೇಳಿಕೆ ಅರಗಿಸಿಕೋಳ್ಳಲು ಆಗಲಿಲ್ಲ. ‘ನಾನು ಹತ್ತು ವರ್ಷದಿಂದ ಇದ್ದನೆ,ಹಲವು ಹಿಟ್ ಕೊಟ್ಟಿದ್ದೆನೆ. ನನ್ನಂತ ಸ್ಟಾರ್ಗೆ ಬ್ರೇಕ್ ಕೊಡಲು ನಿನ್ನೆ ಮೊನ್ನೆ ಬಂದ ಸೂರಿ ಬೇಕಾ? ಹೀಗೊಂದು ಅನಸಿಕೆ ದರ್ಶನ್ ಅವರಲ್ಲಿ ಮೂಡಿತು. ಇದೇ ವಿಷಯ ರಾಮು&ಸೂರಿಗೂ ಮುಟ್ಟಿತು. ದರ್ಶನ್ ಒಬ್ಬ ನಿರ್ದೇಶಕನ ಕಷ್ಟ ಗೊತ್ತಿಲ್ಲದವರೇನೂ ಅಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಯಕಶ್ಚಿತ್ ಅವರ ಅಹಂನಿಂದಾಗಿ ಚಿತ್ರ ನಿಲ್ಲಲು ಕಾರಣವಾಯಿತು. ಮತ್ತೆ ಕೆಂಡಸಂಪಿಗೆ ಏನಾಯ್ತು ಎನ್ನುವಷ್ಟರಲಿ ಉತ್ತರ ಯಾರ ಬಳಿಯು ಇರಲಿಲ್ಲ. ನಿರ್ದೇಶಕ ಸೂರಿ ಒಂದೇ ಒಂದು ಶಬ್ದ ಮಾತನಾಡದೆ ಸುಮ್ಮನಾದರು. ತಮ್ಮ ಆತ್ಮೀಯ ಗೆಳಯ ಯೋಗರಾಜ್ ಭಟ್ಟರಬಳಿ ಹೇಳಿಕೊಂಡು ಅತ್ತಿದ್ದಾರೆ. ಭಟ್ಟರು ಸಮಾಧಾನ ಪಡಿಸಿಕಳಿಸಿದ್ದಾರೆ. ಮುಂದೆ ಸೂರಿಯವರು ತಮ್ಮೊಂದಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಹುಡುಗನನ್ನ ಹೀರೋ ಮಾಡಿ, ತಮ್ಮೊಳಿಗಿನ ಕೆಂಡದಂತಹ ಕಥೆಯನ್ನು, ಹೊಸದಾಗಿ ಸಂಪಿಗೆಯ ಘಮದಂತೆ ಹೆಣೆದು, `ಕೆಂಡಸಂಪಿಗೆ’ ಮಾಡಿದರು ಅದು ಯಶಸ್ಸು ಕಂಡಿತು. ಅದರ ಮುಂದಿನ ಭಾಗ ‘ಕಾಗೆ ಬಂಗಾರ’ ಇನ್ನೇನು ಸ್ವಲ್ಪದರಲ್ಲೇ ಶೂಟಿಂಗ್ ಆರಂಭವಾಗಲಿದೆ. ಆದರೆ ದರ್ಶನ್ ವರ್ಶನ್‍ನ ‘ಕೆಂಡಸಂಪಿಗೆ’ ಇನ್ನೂ ಬಿಳಿಯ ಹಾಳೆಯಮೇಲೆ ಉಳಿದು ಹೋಗಿದೆ. ಒಂದು ಸಣ್ಣ ಅಹಂ ಒಂದು ಚಿತ್ರ ನಿಂತುಹೋಗಲು ಕಾರಣವಾಗಿದ್ದು ಬೇಸರದ ಸಂಗತಿ. ದರ್ಶನ್ ಮತ್ತು ಸೂರಿ ಕಾಂಬೀನೇಶನ್‍ನ ಚಿತ್ರ ಮುಂದೆ ಸೆಟ್ಟೇರುತ್ತಾ ಎಂದು ಕಾದು ನೋಡಬೇಕಿದೆ.

#ಸಂಗ್ರಹ ಸಿದ್ದು ವಜ್ರಪ್ಪ

#ಬಿಸಿನಿಮಾಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!