ನಿರ್ದೇಶಕ ಸಿಂಪಲ್ಲ್ ಸುನಿಯ ‘ಬಜಾರ್ ‘

ಸಿಂಪಲ್ ಸ್ಟಾರ್ ನಿರ್ದೇಶಕ  ಸಿಂಪಲ್ಲ್ ಸುನಿ ‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ,’ ಸಿಂಪಲ್ಲಾಗಿ ಇನ್ನೋಂದು ಲವ್ ಸ್ಟೋರಿ’ ಚಮಕ್ ‘ ಹಿಟ್ ಚಿತ್ರಗಳ ನಂತರ ‘ಬಜಾರ್ ‘ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಪೂರೈಸಿಕೊಂಡಿದ್ದು ಮೊನ್ನೆ ಈ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು.

ಧನವೀರ್ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟಿದ್ದು ಪಾರಿವಾಳಗಳ ತರಬೇತುದಾರನಾಗಿ ಕಾಣಿಸಿಕೊಂಡಿದ್ದಾನೆ. ಅಜೇಯ್‍ರಾವ್ ಅವರ ಧೈರ್ಯಂ ಚಿತ್ರದ ನಾಯಕಿ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದು , ನಾಯಕ ಧನವೀರ್ ರ ತಂದೆ ತಮ್ಮೇಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ನಿರ್ದೇಶಕ ಸುನಿ ಮಾತನಾಡಿ, ಚಿತ್ರವು ಪೋಸ್ಟ್ ಪ್ರೊ ಡಕ್ಷನ್ ವರ್ಕ್ ನಡೆಯುತ್ತಿದ್ದು, ಹೆಸರುಘಟ್ಟ, ಮಹಿಮಾಪುರ ಹಾಗೂ ಪ್ರಕಾಶನಗರದಲ್ಲಿರುವ ಪಾರಿವಾಳಗಳ ಅಡ್ಡೆವೊಂದರಲ್ಲಿ 62 ದಿನಗಳಕಾಲ ಈ ಚಿತ್ರಕ್ಕೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೆ ಥೈಲ್ಯಾಂಡ್‍ನಲ್ಲಿ ಡ್ಯುಯೆಟ್ ಹಾಡೊಂದನ್ನು ಶೂಟ್ ಮಾಡಿಕೊಂಡು ಬಂದಿದ್ದೇವೆ ಎಂದರು.ನಾಯಕ ಧನವೀರ್ ಮಾತನಾಡಿ, ಚಿತ್ರರಂಗದಲ್ಲಿ ನನಗೆ ನೆಲೆ ಕಲ್ಪಿಸಬೇಕೆಂದು ನನ್ನ ತಂದೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 

ನಿರ್ದೇಶಕ ಸುನಿ ಅವರು ಸೋದರನ ಸ್ಥಾನದಲ್ಲಿ ನಿಂತುಕೊಂಡು ನನಗೆ ಚಿತ್ರರಂಗಕ್ಕೆ ಬೇಕಾದ ಎಲ್ಲ ತರಬೇತಿ ಕೊಡಿಸಿದರು. 22 ದಿನಗಳಲ್ಲಿ 6 ಪ್ಯಾಕ್ ಟ್ರೈನಿಂಗ್ ತಗೊಂಡು ಡ್ರೀಮ್ ಸಾಂಗ್‍ನಲ್ಲಿ ನಟಿಸಿದ್ದೇನೆ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ನಾಯಕಿ ಅದಿತಿ ಮಾತನಾಡಿ, ಧೈರ್ಯಂ ಚಿತ್ರದ ನಂತರ ಬಜಾರ್ ಚಿತ್ರದಲ್ಲೂ ನನಗೆ ಉತ್ತಮ ಪಾತ್ರ ದೊರೆತಿದೆ. ಮಧ್ಯಮ ವರ್ಗದ ಕುಟುಂಬದ ಸಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.ಈ ಚಿತ್ರಕ್ಕೆ ರವಿ ಬಸ್ಸೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ನಟ ಶಿವಧ್ವಜ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

 

ನಿರ್ಮಾಪಕ ತಮ್ಮೇಗೌಡ ಮಾತನಾಡುತ್ತಾ, ನನ್ನ ಮಗ ಧನವೀರನಿಗೆ ಚಿಕ್ಕ ವಯಸ್ಸಿನಿಂದಲೇ ಅಭಿನಯದ ಗೀಳು ಇತ್ತು. ಈಗಗಲೇ ಚಿತ್ರಕ್ಕೆ 5 ಕೋಟಿ ಖರ್ಚಾಗಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ರಿಲೀಸ್ ಮಾಡಿ ಆಗಸ್ಟ್ 15ರಿಂದ ಸೆ.10ರೊಳಗೆ ಸಿನಿಮಾ ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.  ಮಗನಿಗೆ ಚಿತ್ರರಂಗದಲ್ಲಿ ಭದ್ರ ನೆಲೆ ನೀಡಬೇಕೆಂಬ ಆಸೆಯಿಂದ ತಮ್ಮೇಗೌಡ ಅವರು ಬಂಡವಾಳ ಹೂಡಿದ್ದು ಬಜಾರ್ ಚಿತ್ರ ಗೆಲ್ಲುವ ಮೂಲಕ ಧನ್‍ವೀರ್‍ಗೆ ಉತ್ತಮ ಅವಕಾಶಗಳು ದೊರೆಯುವಂತಾಗಲಿ.

This Article Has 1 Comment
  1. Pingback: DevSecOps

Leave a Reply

Your email address will not be published. Required fields are marked *

Translate »
error: Content is protected !!