ಬಂಗಾರದ ಮನುಷ್ಯ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರು ರಾಜೀವರಾಗಿ ಹಳ್ಳಿ ತೊರೆದು ಸಿಟಿಯಲ್ಲಿ ವಾಸಿಸುತ್ತಿದ್ದವರನ್ನು ಮತ್ತೆ ಹಳ್ಳಿಯತ್ತ ಮುಖ ಮಾಡುವಂತೆ ಮಾಡಿದರೆ, ಈಗ ಮಯೂರ್ ಪಟೇಲ್‍ರ ರಾಜೀವ ಚಿತ್ರದಲ್ಲೂ ಕೂಡ ಅದೇ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಮಯೂರ್‍ಪಟೇಲ್‍ಗೆ 3 ಶೇಡ್‍ಗಳಿರುವ ಈ ಚಿತ್ರವನ್ನು ಮಂಜು ನಿರ್ದೇಶಿಸುತ್ತಿದ್ದು ಮೊನ್ನೆ ಈ ಚಿತ್ರದ ಟ್ರೇಲರ್ ಹಾಗೂ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು.ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ ಆದರೆ ಬೆಳೆಸಾಲ ಹಾಗೂ ಸಾಲ ಬಾಧೆಯಿಂದ ದಿನಕ್ಕೊಬ್ಬ ರೈತರಾದರೂ ಆತ್ಮಹತ್ಯೆಗೆ ಶರಣಾಗುತ್ತಾರೆ ಅದೇ ವಿಷಯವನ್ನಿಟ್ಟುಕೊಂಡು ರಾಜೀವ ಚಿತ್ರವನ್ನು ಮಾಡಿದ್ದಾರೆ.
ನಿರ್ದೇಶಕ ಮಂಜು ಮಾತನಾಡಿ, ಒಂದು ಉತ್ತಮ ಸಂದೇಶವಿರುವ ಈ ಚಿತ್ರದ ಷೂಟಿಂಗ್ ಈಗಾಗಲೇ ಮುಗಿದಿದ್ದು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ನಾಯಕ ಐಎಎಸ್ ಅಧಿಕಾರಿಯಾಗಿರುತ್ತಾನೆ, ಒಮ್ಮೆ ಆತ ಹಳ್ಳಿಗೆ ಬಂದಾಗ ಅಲ್ಲಿನ ಕಷ್ಟಗಲನ್ನು ಕಂಡು ಅದನ್ನು ಬದಲಾಯಿಸಬೇಕೆಂದು ನಿರ್ಧಾರಿಸುತ್ತಾನೆ, ಜೊತೆಗೆ ಸಿಟಿಗೆ ಹೋಗಬೇಕೆಂಬುವವರ ಮನಸ್ಸನ್ನು ಪರಿವರ್ತಿಸುವುದರ ಜೊತೆಗೆ ಸಿಟಿಯಲ್ಲಿರುವವರನ್ನು ಹೇಗೆ ಹಳ್ಳಿಗೆ ಕರೆಸಿಕೊಳ್ಳುತ್ತಾನೆ ಎಂಬುದೇ ರಾಜೀವ ಚಿತ್ರದ ಹೈಲೈಟ್ ಎಂದು ಹೇಳಿದರು.
ಈ ಚಿತ್ರದಲ್ಲಿ ಮಯೂರ್‍ಪಟೇಲ್‍ಗೆ ಮೂರು ಶೇಡ್‍ಗಳಿವೆ, 20, 40, 60 ವರ್ಷದವನಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಗಳಲ್ಲಿ ನಟಿಸುವಾಗ ಅವರು ತುಂಬಾ ಶ್ರಮಪಡಬೇಕಾಯಿತು. ಈಗಾಗಲೇ ಚಿತ್ರದ ಎಲ್ಲ ಕೆಲಸಗಳು ಮುಗಿದಿದ್ದು, ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್‍ನಲ್ಲಿ ಇದ್ದೇವೆ ಎಂದು ಹೇಳಿದರು.ನಾಯಕಿಯಾಗಿ ಅಕ್ಷತಾ ನಟಿಸಿದ್ದಾರೆ.
ಈ ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ ನಿರ್ದೇಶನ ಮಾಡಿದ್ದು, ಆನಂದ್ ಇಳಯರಾಜ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ಜಿ.ಎಮ್ . ರಮೇಶ್ ಹಾಗೂ ಕಿರಣ್ .ಕೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ರಾಜೀವ ಚಿತ್ರವನ್ನು ನೋಡಿದ ಮೇಲಾದರೂ ನಗರದಲ್ಲಿರುವ ಮಂದಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತಾದರೆ ಚಿತ್ರತಂಡದ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ.
@Bcinemas.in
Pingback: Buy Sex Toys Online
Pingback: 메이저토토사이트