ಕಿರಿಕ್ ಪಾರ್ಟಿ ಅಂತ ಹಿಟ್ ಫಿಲ್ಮ್ ನಂತರ ಮೂರು ವರ್ಷ ಅಜ್ಞಾತ ವಾಸದಲ್ಲಿದ್ದ ರಕ್ಷಿತ್ #ASN ಮೂಲಕ ಹೊರ ಬರುತ್ತಿದ್ದಾರೆ. ಹೊಸತನದ ಹೊಸ್ತಿಲಲ್ಲಿದ್ದ ಕನ್ನಡ ಚಿತ್ರರಂಗ ಕೈ ಹಿಡಿದು ನಡೆದಿದ್ದ ರಕ್ಷಿತ್ ಈಗ ಮಾಗಿದ್ದಾರೆ. ಈಗ ಜನಪ್ರಿಯತೆಯ ಜೊತೆಗೆ ಸ್ಟಾರ್ ಪಟ್ಟವು ಇದೆ. ವೃತ್ತಿ ಜೀವನದ ಹೊಸ ಸ್ತರದಲ್ಲಿರುವ ರಕ್ಷಿತ್ ಗೆ ಇದು ದೊಡ್ಡ ಚಿತ್ರ ಬಜೆಟ್ನಲ್ಲೂ, ಹೌದು ರಿಲೀಸ್ ನಲ್ಲೂ ಹೌದು.ಈಗಿನ ಟ್ರೆಂಡ್ ನಂತೆ #ASN ಕೂಡ ಪಂಚಬಾಷೆ ಚಿತ್ರ .ಮೊದಲ ಬಾರಿಗೆ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಶೆಟ್ರಿಗೆ ಶಾನ್ವಿ ಸಾಥ್ ನೀಡಿದ್ದಾರೆ.
ಸ್ವತಃ ರಕ್ಷಿತ್ ಹೇಳೋ ಹಾಗೆ ಇದು ಯುನಿವರ್ಸಲ್ ಕಥೆ ಹೊಂದಿರುವ ಸಿನೆಮಾ, ಭಾರತ ಚಿತ್ರರಂಗದಲ್ಲೇ ಕಾಣದಂತೆ ವಿಟ್ಟಿ , ಚಾಣಕ್ಯ ಪೊಲೀಸ್ ನ ಕಥೆ. ಹಳೆ ರಕ್ಷಿತ್ ಸಿನೆಮಾಗಳಲ್ಲಿ ಎಡಿಟಿಂಗ್ ಕೈಚಳಕ ತೋರಿದ್ದ ಸಚಿನ್ ಇಲ್ಲಿ ನಿರ್ದೇಶಕನ ಕುರ್ಚಿಯಲ್ಲಿ ಕೂತಿದ್ದಾರೆ.ಬರೋಬ್ಬರಿ 200 ದಿವಸ ಶೂಟಿಂಗ್ ಮುಗಿಸಿ ಇತಿಹಾಸ ಸೃಷ್ಟಿಸಿದ ಸಿನೆಮಾ ಭರವಸೆಯ ಭಾರ ಹೊತ್ತು ರಿಲೀಸ್ ಗೆ ತಯಾರಾಗಿ ನಿಂತಿದೆ.
ಚಿತ್ರ ಕೊನೆಯ ಹಂತದ ತಾಂತ್ರಿಕ ಕಾರ್ಯಕ್ಕೆ ಒಳಪಡುತ್ತಿದ್ದು .ಚಿತ್ರ ತಂಡ ಪ್ರಚಾರ, ರಿಲೀಸ್ ನ ಸಿದ್ಧತೆಯಲ್ಲಿದೆ . ದಸರದೊಂದಿಗೆ ಪ್ರಚಾರ ಪ್ರಾರಂಭಿಸಿದ ಸಿನೆಮಾ ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ ಅಲ್ಲಿ ತೆರೆಗೆ ಬರಲಿದೆ. ಅವನೇ ಶ್ರೀಮನ್ನಾರಾಯಣ ಎಂಬ ಶೀರ್ಷಿಕೆ ಎಲ್ಲ ಭಾಷೆಗೂ ಒಗ್ಗದ ಕಾರಣ ASN ಕಾಮನ್ ಹೆಸರ ಮೂಲಕ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ.ಪ್ರತಿ ಭಾಷೆಯಲ್ಲೂ ASN ನ ವಿಸ್ತರಣೆಯನ್ನು ಬದಲಿಸಲಾಗಿದೆ.
ಕನ್ನಡ- ಅವನೇ ಶ್ರೀಮನ್ನಾರಾಯಣ
ಹಿಂದಿ- ಅದ್ವೆಂಚರ್ ಅಫ್ ಶ್ರೀಮನ್ನಾರಾಯಣ
(Adventures of Srimannarayana)
ತಮಿಳು- ಅವನೇ ಶ್ರೀಮನ್ನಾರಾಯಣ
ತೆಲುಗು- ಅತ್ತುಡೆ ಶ್ರೀಮನ್ನಾರಾಯಣ
ಮಲಯಾಳಂ- ಅವನ್ ಶ್ರೀಮನ್ನಾರಾಯಣ
Pingback: go to this web-site