‘ಬಿಲ್‍ಗೇಟ್ಸ್ ಚಿತ್ರದ ಆಡಿಯೋ ಬಿಡುಗಡೆ

ವಿಶ್ವದ ಅತ್ಯಂತ ಶ್ರೀಮಂತರ ಪೈಕಿ ಬಿಲ್‍ಗೇಟ್ಸ್ ಪ್ರಮುಖರು. ಈಗ ಅವರ ಹೆಸರಿನಲ್ಲಿ ಚಂದನವನದಲ್ಲಿ ಒಂದು ಚಿತ್ರ ಬಿಡುಗಡೆ ಆಗಲು ಸಿದ್ಧವಾಗಿದ್ದು ಮೊನ್ನೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಇತ್ತು.

ಸಾಹಿತಿ, ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಈ ಚಿತ್ರದ ಮೊದಲ ವೀಡಿಯೋ ಹಾಡನ್ನು ಬಿಡುಗಡೆಗೊಳಿಸಿದರೆ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಎರಡನೇ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಶಿಶಿರಶಾಸಿ ಹಾಗೂ ಚಿಕಣ್ಣ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ತಲೆ ಹರಟೆ ಮಾಡಿಕೊಂಡು ಹಳ್ಳಿಯಲ್ಲಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಯುವಕರಿಬ್ಬರು ಶ್ರೀಮಂತರಾಗುವ ಆಸೆಯಲ್ಲಿ ನಗರಕ್ಕೆ ಬಂದು ಏನೇಲ್ಲಾಪಜೀತಿ ಮಾಡಿಕೊಳ್ಳುತ್ತಾರೆ, ಅವರು ಕೊನೆಗೂ ಶ್ರೀಮಂತರಾದರೇ? ಅಥವಾ ಹಳ್ಳಿಗೆ ಮರಳಿದರೆ? ಎಂಬ ಕುತೂಹಲಭರಿತ ಕಥೆಯನ್ನು ನಿರ್ದೇಶಕ ಶ್ರೀನಿವಾಸ ಮಂಡ್ಯ ಅವರು ಹೇಳಲು ಹೊರಟಿದ್ದಾರೆ.

ವಸಂತಕುಮಾರ್, ಯತೀಶ್, ಮುನಿಕೃಷ್ಣ, ಆದಿನಾರಾಯಣ ಸೇರಿದಂತೆ ಒಟ್ಟು 12 ಜನ ನಿರ್ಮಾಪಕರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದು, ಇವರೆಲ್ಲ ಐಟಿ-ಬಿಟಿ ಎಂಪ್ಲಾಯೀಸ್ ಅನ್ನೋದು ಇಲ್ಲಿ ವಿಶೇಷ. ಚಿತ್ರತಂಡದ ಶ್ರಮ ಎಫರ್ಟ್ ಕಂಡು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರಾಕೇಶ್ ಸಿ. ತಿಲಕ ಈ ಚಿತ್ರದ ಛಾಯಾಗ್ರಾಹಕರು.ಮಿಸ್ಟರ್ ಎಲ್‍ಎಲ್‍ಬಿ ಖ್ಯಾತಿಯ ಶಿಶಿರಶಾಸಿ ಹಾಗೂ ಹಾಸ್ಯ ನಟ ಚಿಕ್ಕಣ್ಣ ಅವರ ಹಾಸ್ಯ ಚಿತ್ರದ ಹೈಲೈಟ್ ಆಗಿದ್ದುಘಿ, ದ್ವಿತೀಯಾರ್ಧದಲ್ಲಿ ಯಮಲೋಕದ ಭಾಗವನ್ನು ಗ್ರಾಫಿಕ್ಸ್‍ನಲ್ಲಿ ಅದ್ಭುತವಾಗಿ ರೂಪುಗೊಳಿಸಿದ್ದು, ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲರ್ ಜೊತೆಗೆ ಸಂದೇಶವನ್ನು ಕೂಡ ಇದೆ.

ಈ ಚಿತ್ರದಲ್ಲಿ ನಾಯಕಿಯಾಗಿ ರೋಜಾ ಕಾಣಿಸಿಕೊಂಡಿದ್ದು, ರಶ್ಮಿತ್ ಸೆಕೆಂಡ್ ಲೀಡ್‍ರೋಲ್ ಮಾಡಿದ್ದಾರೆ. ಮತ್ತೊಬ್ಬ ನಟಿ ಪಲ್ಲವಿಗೌಡ ಸೌಮ್ಯ ಎಂಬ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.ಬಿಲ್‍ಗೇಟ್ಸ್ ಚಿತ್ರವನ್ನು ನಿರ್ಮಾಪಕರಿಗೆ ಲಾಭ ತಂದುಕೊಟ್ಟು ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವಂತಾಗಲಿ.

@Bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!