ಸಧ್ಯದಲ್ಲೇ ಓಪನ್ ಆಗಲಿದೆ “ಮೂರ್ಕಲ್ ಎಸ್ಟೇಟ್” ಸೀಕ್ರೆಟ್

ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಹೊಸಬರ ತಂಡ ನಿರ್ಮಾಣದ “ಮೂರ್ಕಲ್ ಎಸ್ಟೇಟ್” ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.ಶ್ರೀ ಭದ್ರಾವತಿ ಮೂವಿ ಮೇಕರ್ಸ್ ಮೂಲಕ ಕುಮಾರ್ .ಎನ್. ಭದ್ರಾವತಿ ನಿರ್ಮಾಣದ ಈ ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಮುನಿಸ್ವಾಮಿ. ಎಸ್. ಡಿ , ಕೃಷ್ಣ .ಎಲ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಪ್ರವೀಣ್ ನಾಯಕನಾಗಿದ್ದು ಪ್ರಕೃತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವಾಗಿದ್ದು ಸುಮಾರು 40 ದಿನಗಳ ಕಾಲ ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಚಿತ್ರೀಕರಣವನ್ನು ಮಾಡಿದ್ದಾರೆ.
ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದು , ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯರನ್ನು ಕೂಡ ಬೆಚ್ಚಿ ಬೀಳಿಸಿದೆಯoತೆ.ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಮುಂದಿನ ವಾರ ಬಿಡುಗಡೆ ಆಗುತ್ತಿರುವ ಮೂರ್ಕಲ್ ಎಸ್ಟೇಟ್ ಚಿತ್ರವನ್ನು ವಿಜಯ್ ಸಿನಿಮಾಸ್ ಮೂಲಕ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

This Article Has 2 Comments
  1. Pingback: Regression Testing

  2. Pingback: DevSecOps

Leave a Reply

Your email address will not be published. Required fields are marked *

Translate »
error: Content is protected !!