ರಾಜ್ಯೋತ್ಸವಕ್ಕೆ ಬರಲಿದ್ದಾಳೆ ‘ರಂಗನಾಯಕಿ’

ಹೆಸರು ಮತ್ತು ಟ್ರೇಲರ್ ಮೂಲಕ ಗಮನ ಸೆಳೆದ ಚಿತ್ರವೇ ‘ರಂಗನಾಯಕಿ’. ಈಗಾಗಲೇ ಆನ್ಲೈನಲ್ಲಿ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು ಆಡಿಯೋ ಬಿಡುಗಡೆಯ ಅಧಿಕೃತ ಘೋಷಣೆಯನ್ನು ಸೋಮವಾರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ರಂಗನಾಯಕಿಯ ನಿರ್ದೇಶಕ ದಯಾಳ್ ಪದ್ಮನಾಭನ್, ಚಿತ್ರವು ಗೋವಾದಲ್ಲಿ ನವೆಂಬರ್ 24ಕ್ಕೆ ನಡೆಯಲಿರುವ ಇಂಡಿಯನ್ ಪನೋರಮದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ವಿಚಾರ ಹಂಚಿಕೊಂಡು ಸಂಭ್ರಮಿಸಿದರು. ಅದೇ ಸಂತಸದಲ್ಲಿ ಕೇಕ್ ಕತ್ತರಿಸಿ ಹಂಚಲಾಯಿತು.
ಚಿತ್ರದ ಕಂಟೆಂಟ್ ಬಗ್ಗೆ ಸೆನ್ಸಾರ್ ಮಾಡಿದ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದು, ಯು ಎ ಸರ್ಟಿಫಿಕೇಟ್ ನೀಡಿರುವುದಾಗಿ ದಯಾಳ್ ತಿಳಿಸಿದ್ದಾರೆ. ಚಿತ್ರದ ನಾಯಕ ಎಂ.ಬಿ ಶ್ರೀನಿವಾಸ್ ಮತ್ತೋರ್ವ ಪ್ರಧಾನ ಪಾತ್ರಧಾರಿ ಪದ್ಮಾವತಿ ಧಾರಾವಾಹಿಯ ಸಾಮ್ರಾಟ್ ಖ್ಯಾತಿಯ ತ್ರಿವಿಕ್ರಮ್ ಸೇರಿದಂತೆ ನಿರ್ಮಾಪಕ ಶ್ರೀನಿವಾಸ್, ಅವಿನಾಶ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು. ದೇಶವನ್ನು ನಡುಗಿಸಿದ ‘ನಿರ್ಭಯ’ ಪ್ರಕರಣವನ್ನು ಆಧಾರವಾಗಿಸಿಕೊಂಡು ದಯಾಳ್ ಪದ್ಮನಾಭನ್ ಮಾಡಿರುವ ಈ ಚಿತ್ರದಲ್ಲಿ ಒಂದಷ್ಟು ಶಾಸ್ತ್ರೀಯ ಹಾಡುಗಳನ್ನು ಬಳಸಿಕೊಂಡಿದ್ದು, ಚಿತ್ರವು ವೀಕ್ಷಕರಲ್ಲಿ ಕುತೂಹಲ ತುಂಬುವಲ್ಲಿ ಯಶಸ್ವಿಯಾಗಿದೆ.

This Article Has 3 Comments
  1. Pingback: คอนโดปูนา

  2. Pingback: Buy Sex Toys Online

  3. Pingback: download arkas 2.07

Leave a Reply

Your email address will not be published. Required fields are marked *

Translate »
error: Content is protected !!