ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎಂಬ ಮಾತಿದ್ದರೂ, ಅದು ಯುವಪೀಳಿಗೆಗೆ ಅನ್ವಯಿಸುವುದಿಲ್ಲ ಅನ್ನುವುದನ್ನು ‘ಕಿಸ್’ ಚಿತ್ರ ಮತ್ತೆ ಸಾಬೀತು ಮಾಡಿದೆ. ಶೋಟಿಂಗ್ ಮುಹೂರ್ತದಿಂದ ಬಿಡುಗಡೆಯವೆರೆಗೂ ಹಲವು ರೀತಿಯಲ್ಲಿ ಪ್ರೇಕ್ಷಕರನ್ನು ತಲುಪಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸಿದ ನಿರ್ದೇಶಕ ಎ.ಪಿ.ಅರ್ಜುನ್ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸ್ಟಾರ್ ನಟರಿದ್ದರೆ ಮಾತ್ರ ಜನ ಥೀಯೆಟರ್ಗೆ ಬರುತ್ತಾರೆ ಅನ್ನವುದನ್ನು ಸುಳ್ಳು ಮಾಡಿದ್ದಾರೆ.
ಹಾಗಿದ್ದರೆ ಕಿಸ್ನ ಕಿಸ್ಮತ್ ಏನು? ತಾನು ಬಯಸಿದ್ದನ್ನು ಪಡೆಯಲು ಏನು ಬೇಕಾದರೂ ಮಾಡ್ತೀನಿ ಅನ್ನುವ ಅರ್ಜುನ್ (ವಿರಾಟ್) ಮತ್ತು ನಂದಿನಿ (ಶ್ರೀಲೀಲಾ) ನಡುವೆ ಒಪ್ಪಂದ ಏರ್ಪಡುತ್ತದೆ. ಅರ್ಜುನ್ಗೆ ನಂದಿನಿ 72 ದಿನಗಳ ಕಾಲ ಸೇವಕಿಯಾಗಿ ಕೆಲಸ ಮಾಡಿಕೊಂಡಿರಬೇಕು ಎನ್ನುವ ಒಪ್ಪಂದ ಅದು. ಈ ದಿನಗಳಲ್ಲಿ ನಡೆಯುವ ಜಟಾಪಟಿ, ಇಬ್ಬರ ನಡುವೆ ಪ್ರಾರಂಭವಾಗುವ ಲವ್ ಸುತ್ತ ಕಥೆ ಸಾಗುತ್ತದೆ. ನಟನೆಯ ವಿಷಯಕ್ಕೆ ಬಂದರೆ ಶ್ರೀಲಿಲಾ ವಿರಾಟ್ನನ್ನು ಮೀರಿಸಿದ್ದಾರೆ. ವಿರಾಟ್ ಇನ್ನಷ್ಟು ಲೀಲಾಜಾಲವಾಗಿ ನಟಿಸಬೇಕಿತ್ತೇನೋ.. ಎಂದೆನಿಸದೆ ಇರದು.
ಚಿತ್ರದ ಹಾಡುಗಳು ಮನರಂಜಿಸುತ್ತದೆ. ಮೊದಲ ಚಿತ್ರವಾದರೂ ಎ.ಜೆ. ಶೆಟ್ಟಿ ಛಾಯಾಗ್ರಹಣ ಕಣ್ಣಿಗೆ ಮುದ ನೀಡುತ್ತದೆ. ತೆರೆಯ ಮೇಲೆ ಫ್ರೆಶ್ ಎನ್ನಿಸುತ್ತದೆ. ಇಂದಿನ ಯುವಕ ಯುವತಿಯರ ಲೈಫ್ಸ್ಟೈಲ್, ಆಟಿಟ್ಯೂಡ್ ಈ ಚಿತ್ರದಲ್ಲಿ ಕಾಣಬಹುದು. ಸಿನಿಮಾವನ್ನು ಸ್ಟೈಲಿಶ್ ಆಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಛಾಯಾಗ್ರಹಣ, ಮೇಕಿಂಗ್, ಎಡಿಟಿಂಗ್, ಮ್ಯೂಸಿಕ್ ಎಲ್ಲವನ್ನೂ ಬಹಳ ಶ್ರಮವಹಿಸಿ, ಸುಂದರವಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕರು ಎಡಿಟರ್ ಅರ್ಜುನ್ ಇನ್ನಷ್ಟು ಕೆಲಸ ಕೊಡಬಹುದಿತ್ತೇನೋ.. ಚಿತ್ರವನ್ನು ‘ಲ್ಯಾಗ್’ ಅನ್ನುವುದು ತಪ್ಪುತ್ತಿತ್ತು.
ವಿರಾಟ್ ಮೊದಲ ಚಿತ್ರದಲ್ಲಿ ಡಾನ್ಸ್ ಮತ್ತು ಫೈಟ್ ದೃಶ್ಯಗಳಲ್ಲಿ ನುರಿತ ನಟನಂತೆ ಮಿಂಚಿದ್ದಾರೆ. ಅದೇ ಎಫೆರ್ಟ್ ಅನ್ನು ಅರ್ಜುನ್ ಅಭಿನಯದಲ್ಲೂ ಹಾಕಿಸಿದ್ದರೆ ‘ಕಿಸ್’ ಇನ್ನಷ್ಟು ಹತ್ತಿರವಾಗುತ್ತಿತ್ತು. ಇಡೀ ಚಿತ್ರದಲ್ಲಿ ಅರ್ಜುನ್ ಕಾಣುತ್ತಾರೆ. ಪ್ರತೀಫ್ರೇಮ್ ಕೂಡ ಕಲ್ಲಂಗಡಿ ಹಣ್ಣು.. ಸೋ ಫ್ರೇಶ್. ಇನ್ನು ಕಿಸ್ ಎಂದು ಚಿತ್ರದ ಟೈಟಲ್ ಯಾಕೆ ಎಂಬುದನ್ನು ಹೇಳಿದರೆ ನೀವು ಚಿತ್ರ ನೋಡುವ ಆಸಕ್ತಿ ಕಮ್ಮಿಯಾಗಬಹದು. ಒಟ್ಟಿನಲ್ಲಿ ‘ಐರಾವತ’ ಆನೆಯನ್ನು ಸ್ಕ್ರೀನ್ ಮೇಲೆ ಇನ್ಯಾವ ಕನ್ನಡ ನಿರ್ದೇಶಕ ತೋರಿಸದ ರೀರಿಯಲ್ಲಿ ತೋರಿಸಿದ ಅರ್ಜುನರ ಹೊಸ ‘ಕಿಸ್’ ಅನ್ನು ನೋಡಲೇ ಬೇಕು. ಬಿಕಾಸ್, ಅನ್ಯ ಭಾಷೆಯ ಚಿತ್ರಗಳನ್ನುಕೇವಲ ಸ್ಮೂಚ್ನ ವಿಚಾರಕ್ಕೆ ಮುಗಿಬಿದ್ದು ನೋಡುವ ನಾವು ‘ಕಿಸ್’ ನಂತಹ ಚಿತ್ರವನ್ನು ಖಂಡಿತಾ ಮಿಸ್ ಮಾಡ್ಬಾರ್ದು.
#ಬಿಸಿನಿಮಾಸ್ #ಕಿಸ್ #ಚಿತ್ರ_ವಿಮರ್ಶೆ #ಎಪಿ_ಅರ್ಜುನ್ #ವಿರಾಟ #ಶ್ರೀಲೀಲಾ #ಕನ್ನಡ
Be the first to comment