ಕನ್ನಡದಲ್ಲಿ ಬಹಳದಿನಗಳ ನಂತರ ವೈಜ್ಞಾನಿಕ ಚಿತ್ರವೊಂದು ಸೆಟ್ಟೇರಿದ್ದು ಸ್ಟಾರ್ ನಟರಿಂದ ಅದಾಗಲೇ ಮೆಚ್ಚುಗೆ ಪಡೆದಿದೆ. ವಿಕಾಸ್ ಪುಷ್ಪಗಿರಿ ನಿರ್ದೇಶನದ ‘ನ್ಯೂರಾನ್’ ಸಿನಿಮಾ. ಈ ಸಿನಿಮಾದ ಮೂಲಕ ನಾಯಕನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿರುವ ಹೊಸ ಪ್ರತಿಭೆ ಯುವ.
ಯುವನಿಗೆ ಜೊತೆಯಾಗಿ ನೇಹಾ ಪಾಟೀಲ್, ವೈಷ್ಣವಿ ಮೆನನ್ ಮತ್ತು ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಸಿನಿಮಾ, ಸಂಶೋಧನಾ ವಿದ್ಯಾರ್ಥಿಗಳು ಸುತ್ತ ಹೆಣೆದಿರುವ ಕಥೆ .ಇತ್ತೀಚೆಗೆ ಆಡಿಯೋ, ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಪ್ರೊಡಕ್ಷನ್ ಹೌಸ್ ಚೆನ್ನಾಗಿದೆ. ಒಳ್ಳೊಳ್ಳೆ ನಿರ್ಮಾಪಕರು ಇದ್ದಾಗ ಅವರನ್ನು ತಂತ್ರಜ್ಞರು ದಯವಿಟ್ಟು ಕಳೆದುಕೊಳ್ಳಬೇಡಿ, ಒಳ್ಳೆ ಕೆಲಸದಿಂದ ಅವರನ್ನು ಉಳಿಸಿಕೊಳ್ಳಿ. ತಂಡಕ್ಕೆ ಒಳ್ಳೆಯದಾಗಲಿ, ಈ ಸಿನಿಮಾ ಜನರ ಮನಸ್ಸಿಗೆ ಮುಟ್ಟಿದರೆ ಅವರೇ ನಿಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗ್ತಾರೆ. ಗುರುಕಿರಣ್ ಅವರ ಸಂಗೀತ ಚೆನ್ನಾಗಿದೆ.” ಎಂದು ಹೇಳಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
‘ನ್ಯೂರಾನ್’ ಎಂಬ ಟೈಟಲ್ ಕೇಳಿದರೆ ಇದರಲ್ಲಿ ಗಟ್ಟಿ ಕಥಾಹಂದರವಿರಬಹುದು ಎಂಬ ಕುತೂಹಲ ಮೂಡಬಹುದು. ನಾಯಕ ಯುವರಿಗೆ ಇದು ಮೊದಲ ಸಿನಿಮಾ. ರವಿಚಂದ್ರನ್ ಈ ಚಿತ್ರಕ್ಕೆ ಚಾಲನೆ ನೀಡಿದ್ದರು. “ಪಿಎಚ್ಡಿ ಸಂಶೋಧನೆ ಮಾಡಲು ಹೋದ ಸ್ಟುಂಡೆಂಟ್ಸ್ ಕಾಣೆಯಾಗುತ್ತಾರೆ. ತದನಂತರದಲ್ಲಿ ಏನೆಲ್ಲ ಆಗುತ್ತದೆ ಎನ್ನುವುದೇ ಈ ಸಿನಿಮಾದ ರೋಚಕತೆ. ಒಂದೊಂದು ಪಾತ್ರಕ್ಕೂ ಕೂಡ ತುಂಬ ಮಹತ್ವ ನೀಡಿದ್ದು, ಟ್ವಿಸ್ಟ್ ಮೂಲಕ ಕಥೆ ಸಾಗುತ್ತದೆ” ಎಂದಿದ್ದಾರೆ ನಿರ್ದೇಶಕರು. ಕಬೀರ್ ದುಹಾನ್ ಸಿಂಗ್, ಜೈ ಜಗದೀಶ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ಈ ಚಿತ್ರಕ್ಕಿದೆ.
Pingback: best site to buy dumps
Pingback: CI/CD
Pingback: south dakota cornhole