‘ಧೀರನ್’ ಚಿತ್ರದ ಟೈಟಲ್ ಲಾಂಚ್

ಬಣ್ಣದ ಲೋಕದ ಮಾಯೆಯೇ ಹಾಗೆ, ನಿರ್ದೇಶಕನಾಗಬೇಕೆಂದು ಬಂದವರು ನಟರಾಗುತ್ತಾರೆ, ನಟರಾಗಬೇಕಾದವರು ನಿರ್ದೇಶಕರಾಗುತ್ತಾರೆ ಈಗ ಅದೇ ಸಾಲಿಗೆ ಸೇರಿರುವವರು ಧೀರನ್. ಅವರು ನಟಿಸುತ್ತಿರುವ ಚಿತ್ರವನ್ನು ವೈಬಿಎನ್ ಸ್ವಾಮಿ ನಿರ್ದೇಶಿಸುತ್ತಿದ್ದು ಈ ಚಿತ್ರದ ಎರಡು ಹಂತಗಳು ಈಗಾಗಲೇ ಚಿತ್ರೀಕರಣವಾಗಿದ್ದು ಸೆಪ್ಟೆಂಬರ್ ಕೊನೆಯಲ್ಲಿ ಚಿತ್ರದ ಮೂರನೇ ಹಂತದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ,

ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.ಮೊನ್ನೆ ಮಾಧ್ಯಮದವರ ಮುಂದೆ ಧೀರನ್ ತಮ್ಮ ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.ನಿರ್ದೇಶಕ ಸ್ವಾಮಿ ಮಾತನಾಡಿ, ಇದೊಂದು ಜರ್ನಿ ಕಥೆಯಾಗಿದ್ದು ಮನುಷ್ಯನಲ್ಲಿರುವ ಮನುಷ್ಯ ಹೊರಬಂದರೆ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ.

ಬೆಂಗಳೂರು ಟು ಸಕಲೇಶಪುರದವರೆಗೆ ಈ ಕಥೆ ನಡೆಯುತ್ತದೆ. ನಿರ್ದೇಶಕನಾಗಬೇಕೆಂಬ ದೃಷ್ಟಿಯಿಂದ ನಾನೊಂದು ಕಥೆಯನ್ನು ಮಾಡಿದೆ, ಅದರಲ್ಲಿ ಹೊಸ ಮುಖವೇ ನಟಿಸಬೇಕೆಂದುಕೊಂಡಾಗ ಯಾರೂ ಸ್ಪಂದಿಸದಿದ್ದಾಗ ನಾನೇ ನಾಯಕನಾಗಿ ಬಣ್ಣ ಹಚ್ಚಿದೆ.

ಮಾಸ್ತಿ ಅವರು ಉತ್ತಮ ಸಂಭಾಷಣೆ ಬರೆದುಕೊಟ್ಟಿದ್ದಾರೆ, ನಟ ಪ್ರಮೋದ್ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದು ಈಗಾಗಲೇ 30 ದಿನಗಳ ಶೂಟಿಂಗ್ ಮುಗಿಸಿz್ದÉೀವೆ ಎಂದು ಹೇಳಿದರು.ಮಿಮಿಕ್ರಿ ದಯಾನಂದ್ ಮಾತನಾಡಿ, ನನಗೆ ಈ ಚಿತ್ರದಲ್ಲಿ ಉತ್ತಮ ಪಾತ್ರವಿದೆ, ಕಾಡಿನ ಬೆಂಕಿಯಲ್ಲಿ ಇದೇ ರೀತಿಯ ಪಾತ್ರ ಸಿಕ್ಕಿತ್ತು, ಅದರ ಲೆನ್ತ್ ಚಿಕ್ಕದಾದರೂ ಪ್ರೇಕ್ಷಕರ ಮನದಲ್ಲಿ ನಿಲ್ಲುತ್ತೇನೆ, ನಾನು ನೀಡುವ ಸಲಹೆ, ಸಹಕಾರಗಳನ್ನು ಚಿತ್ರತಂಡವು ಸಂತಸದಿಂದ ಸ್ವೀಕರಿಸಿದೆ ಎಂದು ಹೇಳಿದರು.

ಚಿತ್ರ ನಿರ್ಮಾಣದೊಂದಿಗೆ ಈ ಚಿತ್ರದ ಕಥೆ, ಚಿತ್ರಕಥೆಯನ್ನು ಕೂಡ ಸ್ವಾಮಿ ಅವರೇ ಬರೆದಿದ್ದಾರೆ. ಗಣೇಶ ನಾರಾಯಣ ಅವರ ಸಂಗೀತ ಸಂಯೋಜನೆ ಹಾಗೂ ಸಿಂಪಲ್ ಸುನಿ, ಬಾತನಕುಮಾರ್ ಅವರ ಸಾಹಿತ್ಯವಿದೆ.ಚಿತ್ರದಲ್ಲಿ ನಾಯಕಿ ರಕ್ಷಾಶೆಟ್ಟಿ ಜೊತೆ ತೇಜಸ್ವಿನಿ ಕೂಡ ಅಭಿನಯಿಸಿದ್ದು, ಅವರದು ಅತಿಥಿ ಪಾತ್ರವಾಗಿದೆ. ಡ್ರಗ್ಸ್ ಮಾಫಿಯಾ ಕೂಡ ಈ ಚಿತ್ರದಲ್ಲಿದೆ.

This Article Has 1 Comment
  1. Pingback: AWS DevOps

Leave a Reply

Your email address will not be published. Required fields are marked *

Translate »
error: Content is protected !!