‘ರಾಮಾಯಣ’ ಸಿನಿಮಾದ ಯಶಸ್ಸಿನ ಬಳಿಕ ಸಾಯಿ ಪಲ್ಲವಿ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ.
‘ರಾಮಾಯಣ’ ಚಿತ್ರದ ಎರಡೂ ಭಾಗಗಳಿಗೆ ಸಾಯಿ ಪಲ್ಲವಿ ಒಟ್ಟು 12 ಕೋಟಿ ರೂ.ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಸಾಯಿ ಪಲ್ಲವಿ ತಮ್ಮ ಸಂಭಾವನೆಯಲ್ಲಿ ದೊಡ್ಡ ಏರಿಕೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಸದ್ಯ ಸಿನಿಮಾಕ್ಕೆ 6ರಿಂದ 8 ಕೋಟಿ ರೂಪಾಯಿ ಸಂಭಾವನೆ ನಿಗದಿಪಡಿಸಿಕೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ರಾಮಾಯಣ’ ಬಳಿಕ ಬಾಲಿವುಡ್ನಿಂದ ಅವರಿಗೆ ಹೊಸ ಅವಕಾಶಗಳು ಬರುತ್ತಿವೆ. ದೊಡ್ಡ ನಿರ್ಮಾಣ ಸಂಸ್ಥೆಯೊಂದು ಸಾಯಿ ಪಲ್ಲವಿ ಅವರನ್ನು ತನ್ನ ಸಿನಿಮಾದಲ್ಲಿ ನಟಿಸಲು ಸಂಪರ್ಕಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಹಜ ಅಭಿನಯ, ಅದ್ಭುತ ನೃತ್ಯ, ಸರಳ ವ್ಯಕ್ತಿತ್ವದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಸಾಯಿ ಪಲ್ಲವಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರು ಸಿನಿಮಾಕ್ಕೆ ಬರುವ ಮುನ್ನ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. 2015ರಲ್ಲಿ ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.ಬಳಿಕ ‘ಫಿದಾ’, ‘ಲವ್ ಸ್ಟೋರಿ’, ‘ಶ್ಯಾಮ್ ಸಿಂಘ ರಾಯ್’, ‘ಗಾರ್ಗಿ’ ಮತ್ತು ‘ಅಮರನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದರು.
ಇತ್ತೀಚೆಗೆ ಬಿಡುಗಡೆಯಾದ ‘ಓಂ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಣಿರತ್ನಂ ನಿರ್ದೇಶನದ ಹೊಸ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
—-





Be the first to comment