ಪಬ್ಬಾರ್

‘ಪಬ್ಬಾರ್’ ಚಿತ್ರದ ಲಾಲಿ ಹಾಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟನೆ ಮಾಡಿರುವ ಪಬ್ಬಾರ್ ಚಿತ್ರದ ಲಾಲಿ ಹಾಡು ಬಿಡುಗಡೆಯಾಗಿದೆ.

ಗೀತಾ ಪಿಚ್ಚರ್ಸ್ ನಿರ್ಮಾಣ ಮಾಡಿರುವ ಈ ಚಿತ್ರ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರದಲ್ಲಿ ಶಿವಣ್ಣ ಬಳೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಶಾಖಾಹಾರಿ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ಈ ಚಿತ್ರವನ್ನು ಧೀರೇನ್ ರಾಮ್ ಕುಮಾರ್ ಅವರಿಗಾಗಿ ನಿರ್ಮಾಣ ಮಾಡಿದ್ದಾರೆ. ಟಗರು ಪಲ್ಯ ಚಿತ್ರದಲ್ಲಿ ನಾಯಕಿಯಾಗಿ ನಡೆಸಿದ್ದ ಅಮೃತ ಪ್ರೇಮ್ ಅವರು ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

ಪಬ್ಬಾರ್

ಮಯೂರ್ ಅಂಬೆಕಲ್ ಸಂಗೀತ ಇರುವ ಲಾಲಿ ಹಾಡು ಗೀತೆಗೆ ನಿರ್ದೇಶಕರು ಸಾಹಿತ್ಯ ರಚಿಸಿದ್ದಾರೆ. ಭಾಗ್ಯದ ಬಳೆಗಾರ ಚಿತ್ರದ ಬಳಿಕ ಶಿವಣ್ಣ ಅವರು ಇಲ್ಲಿ ಬಳೆಗಾರನಾಗಿ ಕಾಣಿಸಿಕೊಂಡಿದ್ದಾರೆ.

ಗೀತಾ ಶಿವಣ್ಣ ಮಾತನಾಡಿ, ಚಿತ್ರದಲ್ಲಿ ನಾಯಕ, ನಾಯಕಿ ಇಬ್ಬರು ಉತ್ತಮವಾಗಿ ನಟಿಸಿದ್ದಾರೆ. ಲಾಲಿ ಹಾಡು ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತದೆ ಎಂದರು.

ಶಿವ ರಾಜಕುಮಾರ್ ಮಾತನಾಡಿ, ಇನ್ನೊಬ್ಬರ ಮೇಲೆ ಒತ್ತಡ ಹಾಕುವುದು ಬೇಡ ಎಂದು ನಾವೇ ನಿರ್ಮಾಣ ಮಾಡಿದ್ದೇವೆ. ನಿರ್ಮಾಣದಲ್ಲಿ ಯಾವುದೇ ಕೊರತೆ ಮಾಡಿಲ್ಲ. ಪಬ್ಬಾರ್ ಎನ್ನುವುದು ಉತ್ತರ ಭಾರತದ ಒಂದು ಕಣಿವೆ. ನಾಯಕ ಅಲ್ಲಿಗೆ ಯಾಕೆ ಹೋಗುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ ಎಂದರು.

ಪಬ್ಬಾರ್

ಈ ಚಿತ್ರವನ್ನು 14 ಜಿಲ್ಲೆಯ 165 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದೂವರೆ ವರ್ಷದ ದೀರ್ಘ ಪ್ರಯಾಣ ಈ ಚಿತ್ರದಲ್ಲಿದೆ ಎಂದು ನಿರ್ದೇಶಕ ಸಂದೀಪ್ ಸುಂಕದ್ ಹೇಳಿದರು.

ನಾಯಕ ಧೀರೇನ್ ಹಾಗೂ ಅಮೃತ ಪ್ರೇಮ್ ಅವರು ಈ ಸಂದರ್ಭದಲ್ಲಿ ನಟನೆಯ ಅನುಭವವನ್ನು ಹಂಚಿಕೊಂಡರು.

ಪಬ್ಬಾರ್

Be the first to comment

Leave a Reply

Your email address will not be published. Required fields are marked *

Translate »
error: Content is protected !!