ಶಂಕರಾಭರಣ

ನವೆಂಬರ್ 20 ರಂದು ‘ಶಂಕರಾಭರಣ’ ಚಿತ್ರ ಬಿಡುಗಡೆ

ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿರುವ ಹಾರರ್, ಕಾಮಿಡಿ “ಶಂಕರಾಭರಣ” ಚಿತ್ರ ನವಂಬರ್ 20 ರಂದು ಬಿಡುಗಡೆಗೆ ಸಜ್ಜಾಗಿದೆ. ಶೈನ್ ಶೆಟ್ಟಿ ನಟನೆಯ ಜೊತೆಗೆ ಕಥೆ ಬರೆದು ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶೈನ್ ಗೆ ಜೊತೆಯಾಗಿ ದಿವಾಕರ್ ಶೆಟ್ಟಿ ‘ರಂಗಸ್ಥಳ ಸ್ಟುಡಿಯೋಸ್’ ಮೂಲಕ ನಿರ್ಮಾಣ ಮಾಡಿದ್ದಾರೆ..

ಶಂಕರಾಭರಣ ಬಸ್ ಮತ್ತು ಅದರ ಹಿನ್ನೆಲೆಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಶಂಕರಾಭರಣ ಸಿನಿಮಾಗೆ ಮಿಥ್ಯ ಸಿನಿಮಾ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ.. ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ಸುಮಂತ್ ಭಟ್ , ರಾಜ್ಯ ಮತ್ತು ಹೊರ ರಾಜ್ಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಭಿನ್ನ ಮಾದರಿಯ ಹಾಸ್ಯವಿದೆ. ಟ್ರೈಲರ್ ನಲ್ಲಿ ಇರುವ ಅಂಶಗಳು ಇಡೀ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ, ಎಂದರು.

ನಟ ಶೈನ್ ಶೆಟ್ಟಿ ಮಾತನಾಡಿ ನಿರ್ದೇಶಕ ಸುಮಂತ್ ಭಟ್ ಅವರ ಜೊತೆ ” ಏಕಂ” ಕಿರುಚಿತ್ರದಲ್ಕಿ ನಟಿಸಿದ್ದೆ. ಆಗ ಹುಟ್ಟಿದ ಕಥೆ ಶಂಕರಾಭರಣ, ಎರಡು ವರ್ಷಗಳ ಕಾಲ ನಿರ್ಮಾಣ ಸಂಸ್ಥೆ ಮಾಡಲು ದೇಶಾದ್ಯಂತ ಓಡಾದಿದ್ದೇನೆ.‌ ಪ್ರಪಂಚ ಓಡಾಡಿದ ಮೇಲೆ‌ ಮನೆಯಲ್ಲಿ ನಿರ್ಮಾಪಕ ದಿವಾಕರ್ ಶೆಟ್ಟಿ ಸಿಕ್ಕರು.‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿರ್ಮಾಪಕರನ್ನು ಹುಡುಕುವುದಕ್ಕೂ ಮುನ್ನ ಗಾಳ ಹಾಕಿ ಕಾಯುತ್ತಿದ್ದ ಮೀನು ಸಂಗೀತ ನಿರ್ದೇಶಕ ಚರಣ್ ರಾಜ್. ಕಥೆ ಕೇಳಿ ಸಂಗೀತ ನೀಡಲು ಒಪ್ಪಿಕೊಂಡರು, ಎಂದರು.

ಶಂಕರಾಭರಣ

ಚೀನಾ ಸಿನಿಮಾ ಉತ್ಸವಕ್ಕೆ ಕನ್ನಡ ಚಿತ್ರ ಆಯ್ಕೆಯಾಗಿದ್ದು ಕನ್ನಡ ಭಾಷೆಯಲ್ಲಿ ಸಿನಿಮಾ ನೋಡಿದರು. ಅವರ ಕಣ್ಣಲ್ಲಿ ನೀರು ಬಂತು ಅದನ್ನು ನೋಡಿ ಖುಷಿ ಆಯಿತು, ಎಂದರು

ಹಿರಿಯ ಕಲಾವಿದ ಸಂಪತ್ ರಾಜ್ ಮಾತನಾಡಿ, ಸಿನಿಮಾ ಆರಂಭಕ್ಕೂ ಮುನ್ನ ಶೈನ್ ಶೆಟ್ಟಿ ಮತ್ತು ಸುಮಂತ್ ಜೊತೆಯಾಗಿ ಕಥೆ ಹೇಳಲು ಬಂದಿದ್ದರು. ಚಿತ್ರದಲ್ಲಿ ತಾವು ಮಾತನಾಡುವ ರೀತಿ ,ಶೈಲಿ ಸೇರಿದಂತೆ ಇಡೀ ಸಿನಿಮಾದ ಕುರಿತು 18 ನಿಮಿಷದ ಸಾರಾಂಶದ ಬಗ್ಗೆ ಮಾಹಿತಿ ನೀಡಿದ್ದರು. ನನ್ನ ಪಾತ್ರವೂ ಚೆನ್ನಾಗಿ ಮೂಡಿಬಂದಿತ್ತು. ಹೀಗಾಗಿ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ.‌ ಚಿತ್ರ ದೊಡ್ಡ ಯಶಸ್ಸು ಸಿಗಲಿ‌. ಚಿತ್ರದ ಹಾಡುಗಳನ್ನು ತೆಲುಗು, ತಮಿಳು ಸ್ನೇಹಿತರಿಗೆ ಕಳುಹಿಸುತ್ತಿದ್ದೇನೆ. ಜನರ ಮನಸ್ಸಿಗೆ ಕಟ್ಟಿದ ಸಿನಿಮಾಗಳು ಯಶಸ್ಸು ಗಳಿಸಲಿದೆ. ಅದಕ್ಕೆ ಇತ್ತೀಚೆಗೆ ಯಶಸ್ಸು ಕಂಡ ಚಿತ್ರವೇ ಕಾರಣ ಎಂದರು.

ನಿರ್ಮಾಪಕ ದಿವಾಕರ್ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ಕೆಲಸ ಮಾಡಿದವರು ಬಹುತೇಕರು ಪ್ರತಿಭಾವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..

ಇನ್ನು ಈ ಸಿನಿಮಾದಲ್ಲಿ ಕೃತಿ ಶೆಟ್ಟಿ, ಅನೀಲ್ ಕುಮಾರ್ ಚೌಹ್ಹಾಣ್ , ಅರ್ಜುನ್ ಕಜೆ ಸೇರಿದಂತೆ ಚಿತ್ರದಲ್ಲಿ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ..

ಶಂಕರಾಭರಣ

Be the first to comment

Leave a Reply

Your email address will not be published. Required fields are marked *

Translate »
error: Content is protected !!