ಸಿಹಿ ಸುದ್ದಿ ನೀಡಿದ ಐಶ್ವರ್ಯಾ- ಶಿಶಿರ್

ʻಬಿಗ್‌ ಬಾಸ್ ಕನ್ನಡ ಸೀಸನ್ 11ʼರ ಸ್ಪರ್ಧಿಗಳಾಗಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ಶೀಘ್ರದಲ್ಲೇ ಹಸಮಣೆ ಏರುವುದಾಗಿ ಅಧಿಕೃತವಾಗಿ ಘೋಷಿಸಿ  ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಶಿಶಿರ್ – ಐಶ್ವರ್ಯ ಇಬ್ಬರು ಒಟ್ಟಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಕಾರಣ  ಅನೇಕರು ಕಮೆಂಟ್‌ ಮಾಡುತ್ತಿದ್ದರು. ಇಷ್ಟು ದಿನಗಳ ಕಾಲ ತಮ್ಮಿಬ್ಬರ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳು ಹಾಗೂ ಟ್ರೋಲ್‌ಗಳಿಗೆ ಉತ್ತರ ನೀಡಿರುವ ಈ ಜೋಡಿ  ‘ಬಿಗ್‌ ಅನೌನ್ಸ್‌ಮೆಂಟ್‌ʼ ಎಂದು ವಿಡಿಯೋ ಹಂಚಿಕೊಂಡು ಇಬ್ಬರು ಎಂಗೇಜ್ಮೆಂಟ್‌ ಆಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

ಶಿಶಿರ್ ಶಾಸ್ತ್ರಿ- ಐಶ್ವರ್ಯ ಸಿಂಧೋಗಿ ನಡುವೆ ತುಸು ಹೆಚ್ಚೇ ಆತ್ಮೀಯತೆ ಇತ್ತು. ಆದರೆ  ಇಬ್ಬರು ಸ್ನೇಹಿತರಷ್ಟೇ ಎನ್ನುವ ಉತ್ತರವನ್ನು ಹೇಳಿ ಸುಮ್ಮನಾಗುತ್ತಿದ್ದರು. ಇದೀಗ ಎಲ್ಲಾ ಊಹೆಗಳಿಗೆ ಇಬ್ಬರು ಸ್ಪಷ್ಟನೆ ನೀಡಿದ್ದಾರೆ.

ಊಹೆಗಳ ಹಿಂದೆ ಒಂದು ಕಥೆಯಿತ್ತು… ನಗುವಿನ ಹಿಂದೆ ಒಂದು ಪ್ರೀತಿಯಿತ್ತು… Comments ಹಿಂದೆ ನಿಮ್ಮ ಕುತೂಹಲವಿತ್ತು… ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR! ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕ್ಯಾಷ್ಷನ್‌ ಬರೆದುಕೊಂಡಿದ್ದಾರೆ.

‘ಜನರು ನಮ್ಮನ್ನ ಅಣ್ಣ-ತಂಗಿ, ಲವರ್ಸ್, ಫ್ರೆಂಡ್ಸ್ ಅಥವಾ ಸಿಚುಯೇಷನ್‌ಶಿಪ್‌ನಲ್ಲಿದ್ದಾರೆ ಎಂದುಕೊಂಡಿದ್ದರು. ಆದರೆ ನಾವು ಯಾವುದೇ ಶಿಪ್‌ನಲ್ಲಿ ಇಲ್ಲ. ಬದಲಾಗಿ ಜೀವನ ಎಂಬ ಶಿಪ್  ನ್ನು ಒಟ್ಟಿಗೆ ಏರುತ್ತಿದ್ದೇವೆ. ಇನ್ಮುಂದೆ ಈ ‘AISHIR’ ಬರಿ ಹ್ಯಾಶ್‌ಟ್ಯಾಗ್ ಅಷ್ಟೇ ಅಲ್ಲ. ನಾವಿಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದೇವೆ.. ‘ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಶಿರ್‌ ಸದ್ಯ ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಐಶ್ವರ್ಯ ಸಿಂಧೋಗಿ  ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!