ದೂರು ದಾಖಲಿಸಿದ ವಿಜಯ್ -ರಶ್ಮಿಕಾ

ಸೋಶಿಯಲ್ ಮೀಡಿಯಾದ  ತೀವ್ರ ಟ್ರೋಲಿಂಗ್‌ ವಿರುದ್ಧ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ದಂಪತಿ ಹೈದರಾಬಾದ್‌ನ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತ ದೂರು ದಾಖಲಿಸಿದ್ದಾರೆ.

ಕರಣ್ ಜೋಹರ್ ಅವರ ಜನಪ್ರಿಯ ‘ಕಾಫಿ ವಿತ್ ಕರಣ್’ ಟಾಕ್ ಶೋನಲ್ಲಿ ಭಾಗವಹಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ   ಟ್ರೋಲಿಂಗ್‌ಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ನಿರೂಪಣೆಗಳು, ಮಾರ್ಪಡಿಸಿದ ಸ್ಕ್ರೀನ್‌ಶಾಟ್‌ಗಳು,  ನಕಲಿ ಖಾತೆ ತೆರೆದು ಶೋಷಣೆ ಮಾಡುವುದು, ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನಿಖೆಗೆ ಅಗತ್ಯವಿರುವ   ಲಿಂಕ್‌ಗಳು ಮತ್ತು ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು ಪರಿಶೀಲಿಸದ ಹೇಳಿಕೆಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು.ಊಹಾಪೋಹಗಳನ್ನು ಸತ್ಯವೆಂಬಂತೆ ಮಂಡಿಸುವುದನ್ನು ತಪ್ಪಿಸಬೇಕು ಎಂದು ದಂಪತಿ ಮನವಿ ಮಾಡಿದ್ದಾರೆ.

“ನನ್ನ ಆಪ್ತ ಸ್ನೇಹಿತೆ, ನನ್ನ ಪತ್ನಿ, ನನ್ನ ಸಂಗಾತಿ. ನನ್ನ ಜೀವನದ ಅತ್ಯಂತ ಸುಂದರವಾದ ಭಾಗಗಳಲ್ಲಿ ಒಂದು.ಇದನ್ನು ನಾನು ಸರಿಯಾಗಿಯೇ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ನಮ್ಮ ಬಗ್ಗೆ ಚಿಂತಿಸುವವರಿಗೆ ಹೇಳುವುದೇನೆಂದರೆ, ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ. ನಾನು ನಿಜಕ್ಕೂ ಅದೃಷ್ಟಶಾಲಿ. ಒಂದು ವೇಳೆ ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ ಸರಿ, ನಾವಿಬ್ಬರೂ ಒಟ್ಟಾಗಿ ಎದುರಿಸುತ್ತೇವೆ” ಎಂದು ವಿಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಅವರೊಂದಿಗಿನ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಕಾಮೆಂಟ್ ಮಾಡುತ್ತಿರುವವರಿಗೆ ಕಠಿಣ ಸಂದೇಶ  ನೀಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!