ಶಂಕರಾಭರಣ

ಶೈನ್‌ ಶೆಟ್ಟಿ ಶಂಕರಾಭರಣ ಸಿನಿಮಾಗೆ ಸಿಕ್ತು ರಾಜ್‌ ಬಿ ಶೆಟ್ಟಿ ಸಾಥ್‌

ಶಂಕರಾಭರಣ ಪೋಸ್ಟರ್‌ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಕನ್ನಡದ ನಿರೀಕ್ಷೆ ಹುಟ್ಟುಹಾಕಿರೋ ಸಿನಿಮಾ. ಸಿನಿಮಾ ಕಥೆ ಹೇಳೋದ್ರಲ್ಲಿ ವಿಭಿನ್ನವಾಗಿರೋದಷ್ಟೇ ಅಲ್ಲದೆ ಸಿನಿಮಾ ಪ್ರಚಾರದಲ್ಲಿಯೂ ವಿಶೇಷವಾಗಿರಬೇಕು ಅಂತ ಸಿನಿಮಾ ನಾಯಕ ಶೈನ್‌ ಶೆಟ್ಟಿ ಶಂಕರಾಭರಣ ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿಯೇ ,ಮಾಡ್ತಿದ್ದಾರೆ.

ಸುಮಂತ್‌ ಭಟ್‌ ನಿರ್ದೇಶನದ ಶೈನ್‌ ಶೆಟ್ಟಿ ನಾಯಕನಾಗಿ ಅಭಿನಯ ಮಾಡಿರುವ ಶಂಕರಾಭರಣ ಸಿನಿಮಾದಲ್ಲಿ ನಾಯಕ ನಟ ಬಸ್‌ ಡ್ರೈವರ್‌ ಆಗಿರುತ್ತಾನೆ..ಹಾಗಾಗಿ ಸಿನಿಮಾದಲ್ಲಿ ಬಳಸಿರೋ ಬಸ್‌ ಓಡಿಸಿಕೊಂಡು ನಟ ಶೈನ್‌ ಶೆಟ್ಟಿ ಕರ್ನಾಟಕದ ಮುಖ್ಯ ಜಿಲ್ಲೆಗಳಿಗೆ ಭೇಟಿ ಕೊಡುತ್ತಿದ್ದಾರೆ …ಕುಂದಾಪುರದಿಂದ ಆರಂಭವಾದ ಶೈನ್‌ ಶೆಟ್ಟಿ ಅವರ ಶಂಕರಾಭರಣ ಸಿನಿಮಾದ ಬಸ್‌ ಜೊತೆಗಿನ ಪ್ರಚಾರ ಈಗಾಗಲೇ ಮಂಗಳೂರು, ಮೈಸೂರು, ಉಡುಪಿ , ಶಿವಮೊಗ್ಗದ ಪ್ರೇಕ್ಷಕರನ್ನ ಭೇಟಿ ಮಾಡಿ ಬಂದಾಗಿದೆ.

ಜಿಲ್ಲೆಗೆ ಭೇಟಿ ಮಾಡೋದ್ರ ಜೊತೆಗೆ ಅಲ್ಲಿ ಪ್ರಸಿದ್ದ ದೇವಾಲಯ ಹಾಗೂ ಕಾಲೇಜುಗಳು ಮತ್ತು ಸಾರ್ವಜನಿಕ ಸಮಾರಂಭಗಳಿಗೆ ಭೇಟಿಕೊಟ್ಟು ಶಂಕರಾಭರಣ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ ನಟ ಶೈನ್‌ ಶೆಟ್ಟಿ ಹಾಗೂ ನಟಿ ತನ್ವಿ ರಾಮ್‌.

ಇತ್ತೀಚಿಗಷ್ಟೇ ಮಂಗಳೂರಿನ ಮಂಗಳೂರಿನ ಪ್ರಸಿದ್ಧ ಪಿಲಿನಲಿಕೆ ಕಾರ್ಯಕ್ರಮದಲ್ಲಿ ನಟ ಶೈನ್‌ ಶೆಟ್ಟಿ ಭಾಗಿಯಾಗಿದ್ರು , ಇದೇ ಸಂದರ್ಭದಲ್ಲಿ ರಾಜ್‌ ಬಿ ಶೆಟ್ಟಿ ಶಂಕರಾಭರಣ ತಂಡವನ್ನ ಭೇಟಿ ಮಾಡಿ ನವೆಂಬರ್‌ ನಲ್ಲಿ ಸಿನಿಮಾ ರಿಲೀಸ್‌ ಆಗ್ತಿದೆ ಮಿಸ್‌ ಮಾಡದೇ ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ರು.ಸದ್ಯ ಬೆಳಗಾವಿದಲ್ಲಿ ಇರೋ ಶಂಕರಾಭರಣ ಬಸ್‌ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಪ್ರೇಕ್ಷಕರನ್ನ ಭೇಟಿ ಮಾಡಲು ಹೊರಡಲಿದೆ.

ಇನ್ನೂ ಸಿನಿಮಾದ ನಾಯಕಿ ಪಾತ್ರದಲ್ಲಿ ನಟಿ ತನ್ವಿ ರಾವ್ ಕಾಣಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾವ್ ಇದೀಗ ಶೈನ್ ಜೊತೆ ಶಂಕರಾಭರಣ ಬಸ್ ಏರಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚರಣ್ ರಾಜ್ ಸಂಗೀತ ಸಿನಿಮಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!