ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಪ್ರೇಮ್

‘ನೆನಪಿರಲಿ’  ಖ್ಯಾತಿಯ ನಟ ಪ್ರೇಮ್ ಅವರು ‘ಕೆಂಪಾಂಬುಧಿ’ ಚಿತ್ರದಲ್ಲಿ ಬೆಂಗಳೂರಿನ ಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೆಂಪಾಂಬುಧಿ’ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಜಾಣಗೆರೆ ವೆಂಕಟರಾಮಯ್ಯ ಕಾದಂಬರಿ ಆಧಾರಿತ ‘ಕೆಂಪಾಂಬುಧಿ’ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಶೀಘ್ರ  ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಉದ್ಯಮಿ  ಪ್ರಶಾಂತ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ, ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ‘ಪ್ರಶಾಂತ್ ಪ್ರಕಾಶ್ ಫೌಂಡೇಶನ್’   ಚಿತ್ರವನ್ನು ನಿರ್ಮಿಸುತ್ತಿದೆ. ರಮೇಶ್ ಬೇಗಾರ್ ಅವರು ಬರೆದು ನಿರ್ದೇಶಿಸಿರುವ ‘ಕೆಂಪಾಂಬುಧಿ’ ಚಿತ್ರ ಕೆಂಪೇಗೌಡರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳು ಮತ್ತು ಸ್ಥಳೀಯ ಜಾನಪದ ಕಥನಗಳನ್ನು ಆಧಾರವಾಗಿಸಿಕೊಂಡು ಸಿದ್ಧವಾಗುತ್ತಿದೆ. ಅವರ ಪರಿಸರ ಪ್ರಜ್ಞೆ, ದೂರದೃಷ್ಟಿಯುಳ್ಳ ನಗರ ಯೋಜನೆ ಹಾಗೂ ಪ್ರಜೆಗಳ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಮೇಲೆ ವಿಶೇಷ ಬೆಳಕು ಚೆಲ್ಲುತ್ತದೆ.

ಪ್ರೇಮ್ ಜೊತೆಗೆ ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸಿದ್ದಾರೆ. ಸಂಯುಕ್ತಾ ಹೊರ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಧಾ ಬೆಳವಾಡಿ, ರಾಜೇಶ್ ನಟರಂಗ, ರಮೇಶ್ ಪಂಡಿತ್, ರಾಜೇಂದ್ರ ಕಾರಂತ್, ವಸಂತ ಕೃಷ್ಣಮೂರ್ತಿ, ಕಾರ್ತಿಕ್ ಎ, ರವಿಕುಮಾರ್, ನಾಗಶ್ರೀ ಬೇಗಾರ್, ಚಿರಂಜೀವಿ, ರಜನೀಶ್, ನಿಖಿಲ್ ಮಾರ್ತಾಂಡ ಚಿತ್ರದ ತಾರಾಗಣದಲ್ಲಿ ಇದ್ದಾರೆ.

‘ಕೆಂಪಾಂಬುಧಿ’  ಚಿತ್ರಕ್ಕೆ ಶಶಿರಾ ಅವರ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!