ಚಿತ್ರ: ಶಬರಿ
ನಿರ್ದೇಶನ: ಒರಟ ಶ್ರೀ
ನಿರ್ಮಾಣ: ರಮೇಶ್ ಬಿ, ಬದ್ರಿ ಮತ್ತುವಿಷ್ಣುಕಾಂತ್
ತಾರಾಗಣ: ಸಮರ್ಥ್ ರಮೇಶ್, ಕೃತ್ತಿಕಾ ಗೌಡ, ಧನ್ವಿ ಚಿನ್ನು ಮೊದಲಾದವರು…
ರೇಟಿಂಗ್ : 3.5/5
ಆತನ ಹೆಸರು ರಾಮ್. ಪುರಾಣದ ರಾಮನಿಗೆ ವಾಹನವಿಲ್ಲ. ಆದರೆ ಈ ರಾಮ ಜೀಪ್ ಪ್ರಿಯ. ಜೀಪ್ ಎಂದರೆ ಜೀವ ಕೊಡುವಷ್ಟರ ಮಟ್ಟಿಗಿನ ವಿ ಕಾಳಜಿ, ನಿಜಕ್ಕೂ ಜೀಪ್ ಗಾಗಿ ಜೀವ ನೀಡುತ್ತಾನ? ಅಥವಾ ಜೀವ ತೆಗೆಯುತ್ತಾನ ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಚಂದ.
ಶಬರಿ ಎನ್ನುವುದು ಚಿತ್ರದ ಶೀರ್ಷಿಕೆ. ಆದರೆ ಇಲಿನ ನಾಯಕನಿಗೆ ಸಫಾರಿ ಹೋಗುವಂಥ ವಾಹನದ ಕೋರಿಕೆ. ಈ ಬಯಕೆಯ ಹಿಂದೆ ಬಲು ಸುಂದರವಾದ ಕಥೆ ಇದೆ. ಅದನ್ನು ಅಷ್ಟೇ ಸೊಗಸಾಗಿ ಪರದೆಯ ಮೇಲೆ ಹೇಳಲಾಗಿದೆ. ಮೊದಲೇ ಹೇಳಿದಂತೆ ಕಥೆ ಜೀಪ್ ಎನ್ನುವ ವಾಹನದ ಸುತ್ತವೇ ನಡೆಯುತ್ತದೆ. ಆದರೆ ಅದರ ಹೆಸರು ಶಬರಿಯಲ್ಲ. ಅರ್ಜುನ ಎನ್ನುವುದು ನಾಯಕನೇ ಮಾಡಿರುವ ನಾಮಕರಣ. ಆ ಅರ್ಜುನನ ಜತೆಗಿನ ಪ್ರಯಾಣದಲ್ಲಿ ಸಿಗುವವಳೇ ಶಬರಿ. ಈಕೆ ಉತ್ತರ ಭಾರತ ಮೂಲದ ಒಬ್ಬಳು ಪುಟ್ಟ ಬಾಲಕಿ. ಆದರೆ ಕಥೆಯ ದ್ವಿತೀಯಾರ್ಧಕ್ಕೆ ಈಕೆಯೇ ಚಾಲಕಿ.
ಕಥಾನಾಯಕ ರಾಮ್ ಪಾತ್ರದಲ್ಲಿ ಸಮರ್ಥ್ ರಮೇಶ್ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ತಮಗೆ ಸಿಕ್ಕ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ದೃಶ್ಯವೊಂದರಲ್ಲಿ ಹುಚ್ಚ ಚಿತ್ರದ ಕ್ರೈಮ್ಯಾಕ್ಸ್ ನಲ್ಲಿ ಸುದೀಪ್ ನಟಿಸಿದಂಥ `ಸನ್ನಿವೇಶವಿದೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ನಟಿಸಿ ತೋರಿಸಿರುವ ಸಮರ್ಥ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಪಾತ್ರಕ್ಕೆ ತಕ್ಕಂತೆ ತಮ್ಮ ಧ್ವನಿಯಲ್ಲಿ ಬದಲಾವಣೆ ತೋರಿಸಿರುವುದು ಕೂಡ ಪ್ರಶಂಸಾತ್ಮಕವಾಗಿದೆ.
ಕಥಾ ನಾಯಕಿ ಸೀತಾ ಪಾತ್ರದಲ್ಲಿ ಕೃತ್ತಿಕಾ ಗೌಡ ನಟನೆ ಮನಮೋಹಕ. ಘಾಟಿಯಾಗಿ, ಚೂಟಿಯಾಗಿ ಮಾತ್ರವಲ್ಲ, ಅದರಾಚೆಗೆ ಮುಗ್ಧ ಪ್ರೇಯಸಿತಾಗಿ ಕೃತ್ತಿಕಾ ಗೌಡ ನೀಡಿರುವ ನಟನೆ ಪ್ರಶಂಸಾರ್ಹ ಎಂದೇ ಹೇಳಬಹುದು. ಇನ್ನು ಟೈಟಲ್ ಕ್ಯಾರೆಕ್ಟರ್ ಮಾಡಿರುವ, ಶಬರಿಗೆ ಜೀವ ತುಂಬಿರುವ ಪುಟ್ಟನಟಿ ಶಬರಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಅಂದಹಾಗೆ ಶಬರಿ ಪಾತ್ರಕ್ಕೆ ಈ ಮಟ್ಟಕ್ಕೆ ಜೀವತುಂಬಿರುವ ಕಲಾವಿದೆ ಬಾಲನಟಿ ದನ್ನಿ. ಕಿರುತೆರೆ ದಾರಾವಾಹಿಗಳಲ್ಲಿ ಹೆಸರು ಮಾಡಿರುವ ದನ್ನಿ ಅವರಿಗೆ ನಾಯಕನೊಂದಿಗೆ ಒಂದು ಆಕರ್ಷಕ ಗೀತೆ ಕೂಡ ಇದೆ. ಈ ಗೀತೆಗೆ ಸಂಗೀತ ನಿರ್ದೇಶಕ ಬಿ.ಆರ್ ಹೇಮಂತ್ ಕುಮಾರ್ ಮ್ಯೂಸಿಕ್ ನೀಡಿದ್ದಾರೆ. ಈ ಹಾಡಿನ ಸಂಗೀತ ಸಾಹಿತ್ಯದ ಜತೆಗೆ ದನ್ನಿ ನೀಡಿರುವ ನಟನೆ ಕೂಡ ಅದ್ಭುತವಾಗಿದೆ.
ಹಾಡಾಗಲೀ, ಹೊಡೆದಾಟದ ದೃಶ್ಯವಾಗಲಿ ಎಲ್ಲರ ಗಮನ ಸೆಳೆಯಲು ಈ ಚಿತ್ರದ ಛಾಯಾಗ್ರಹಣ ನಿರ್ವಹಿಸಿರುವ ಕ್ಯಾಮರಾಮ್ಯಾನ್ ಕೂಡ ಪ್ರಮುಖ ಕಾರಣ ಎಂದು ಸ್ಮರಿಸಲೇಬೇಕು. ನಾಯಕ, ನಾಯಕಿಯ ಸ್ನೇಹಿತೆ ಮತ್ತು ಇತರ ಪ್ರಮುಖ ಪಾತ್ರಗಳ ಸಂಭಾಷಣೆ ತಲೆದೂಗುವಂತಿದೆ. ಬಾಲನಟಿ ಬಾಯಲ್ಲಿನ ಹಿಂದಿ ಪದಗಳು ಯಾವ ಬಾಲಿವುಡ್ ಕಲಾವಿದೆಗೂ ಕೊರತೆ ಇರದಷ್ಟು ಸಹಜವಾಗಿ ಮೂಡಿ ಬಂದಿವೆ.
ಒಂದು ಸಣ್ಣ ಗ್ಯಾಪ್ ಬಳಿಕ ಆಗಮಿಸಿರುವ ನಿರ್ದೇಶಕ ಒರಟ ಶ್ರೀ ಮತ್ತೊಂದು ವಿಭಿನ್ನ. ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಕಥೆ ಎನ್ನುವುದಕ್ಕಿಂತಲೂ ಇಲ್ಲಿ ಜೀವನದ ನೀತಿ ಇದೆ.





Be the first to comment