ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ಹಲ್ಲೆ

ನವದೆಹಲಿ: ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ರೂಮ್‍ಮೇಟ್ ಹಲ್ಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.ನಳಿನಿ ನೇಗಿ ಹಲ್ಲೆಗೊಳಗಾದ ನಟಿ. ನಳಿನಿ ಮನೆ ಖಾಲಿ ಮಾಡಿ ಎಂದಿದ್ದಕ್ಕೆ ತನ್ನ ರೂಮ್‍ಮೇಟ್ ಪ್ರೀತಿ ರಾಣಾ ಹಾಗೂ ಆಕೆಯ ತಾಯಿ ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಳಿನಿ ನೇಗಿ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಟಿ ನಳಿನಿ, ನಾನು ಹಾಗೂ ಪ್ರೀತಿ ಮೊದಲಿನಿಂದಲೂ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದೇವೆ. ಬಳಿಕ ನಾನು ಒಶಿವಾರಾಗೆ ಶಿಫ್ಟ್ ಆಗಲು ನಿರ್ಧರಿಸಿದೆ. ಪ್ರೀತಿ ಮತ್ತೆ ನನ್ನನ್ನು ಸಂಪರ್ಕಿಸಿ ನನಗೆ ವಾಸಿಸಲು ಮನೆ ಇಲ್ಲ ಎಂದು ಹೇಳಿದ್ದಳು. ಅಲ್ಲದೆ ಕೆಲವು ದಿನಗಳವರೆಗೆ ನನ್ನ ಮನೆಯಲ್ಲಿ ವಾಸಿಸಲು ಜಾಗ ನೀಡುವಂತೆ ಕೇಳಿಕೊಂಡಿದ್ದಳು. ಪ್ರೀತಿ ಕೆಲವು ದಿನ ನನ್ನ ಮನೆಯಲ್ಲೇ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

ನನ್ನ ಪೋಷಕರು ಕೆಲವು ದಿನಗಳ ಕಾಲ ನನ್ನ ಜೊತೆಯಿರಲು ಬಯಸಿದ್ದರು. ಹಾಗಾಗಿ ನಾನು ಪ್ರೀತಿಗೆ ಮನೆ ಖಾಲಿ ಮಾಡುವಂತೆ ಹೇಳಿದೆ. ಇದಕ್ಕೆ ಪ್ರೀತಿ ಒಪ್ಪಿಕೊಂಡಳು. ಆದರೆ ಕೆಲವು ದಿನಗಳ ನಂತರ ಆಕೆಯ ತಾಯಿ ಕೂಡ ನಮ್ಮ ಜೊತೆಯಲ್ಲಿಯೇ ಇದ್ದರು. ಅವರು ಬಂದಾಗ ನಾನು ಮನೆ ಶಿಫ್ಟ್ ಮಾಡಲು ಪ್ರೀತಿಯ ಸಹಾಯಕ್ಕೆ ಬಂದಿದ್ದಾರೆ ಎಂದುಕೊಂಡಿದೆ. ಕಳೆದ ವಾರ ನಾನು ಜಿಮ್‍ಗೆ ಹೋಗುತ್ತಿದ್ದಾಗ ಪ್ರೀತಿಯ ತಾಯಿ ನನ್ನ ಜೊತೆ ಜಗಳವಾಡಲು ಶುರು ಮಾಡಿದ್ದರು ಎಂದರು.

ಬಳಿಕ ಪ್ರೀತಿ ತಾಯಿ ನಾನು ಜಗಳವಾಡುತ್ತಿದ್ದೇನೆ ಎಂದು ಅವರ ಮಗಳ ಬಳಿ ನನ್ನ ಮೇಲೆ ದೂರು ನೀಡಿದ್ದರು. ಆಗ ಪ್ರೀತಿ ಕೂಡ ನನ್ನ ಜೊತೆ ಜಗಳವಾಡಲು ಶುರು ಮಾಡಿದ್ದಳು. ನಾನು ಪ್ರೀತಿಗೆ ಎಲ್ಲವನ್ನು ಹೇಳಲು ಪ್ರಯತ್ನಿಸುತ್ತಿದೆ. ಆದರೆ ಅಷ್ಟರಲ್ಲಿ ಇಬ್ಬರು ಗ್ಲಾಸ್‍ನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಬ್ಬರು ನನ್ನನ್ನು ಕೊಲಲ್ಲು ಪ್ರಯತ್ನಿಸುತ್ತಿದ್ದರು. ಅಷ್ಟೇ ಅಲ್ಲದೆ ನಾನು ನಟಿಯಾಗಿದ್ದರಿಂದ ನನ್ನ ಮುಖವನ್ನು ಗಾಯಗೊಳಿಸಲು ಇಬ್ಬರು ಪ್ಲ್ಯಾನ್ ಮಾಡಿದ್ದರು ಎಂದು ನಳಿನಿ ಹೇಳಿದ್ದಾರೆ.

ನಟಿ ನಳಿನಿ ಈಗ ತಮ್ಮ ತಂದೆ-ತಾಯಿಯ ಜೊತೆ ವಾಸಿಸುತ್ತಿದ್ದಾರೆ. ನಳಿನಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಾಮಕರಣ’ ಧಾರಾವಾಹಿಯಲ್ಲಿ ನಟಿಸಿದ್ದರು.

This Article Has 1 Comment
  1. Pingback: sex shop online

Leave a Reply

Your email address will not be published. Required fields are marked *

Translate »
error: Content is protected !!