‘ನನ್ನನ್ನು ಮದುವೆಯಾಗುವಂತೆ ಒಂದು ವರ್ಷದವರೆಗೂ ವಿಜಯ್ ದೇವರಕೊಂಡ ಅವರನ್ನು ಕೇಳುತ್ತಲೇ ಇದ್ದೆ’ ಎಂದು ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದ್ದಾರೆ.
‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಎರಡನೇ ಸಂಚಿಕೆಯ ಟ್ರೈಲರ್ ಬಿಡುಗಡೆಯಾಗಿದ್ದು ಇದರಲ್ಲಿ ತೆಲುಗು ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಟೀಸರ್ ಅವರ ವೈವಾಹಿಕ ಜೀವನದ ಝಲಕ್ ನೀಡಿದ್ದು ತನ್ನನ್ನು ಮದುವೆಯಾಗುವಂತೆ ವಿಜಯ್ ಅವರಿಗೆ ತಾನೇ ಪಟ್ಟು ಹಿಡಿದಿದ್ದಾಗಿ ರಶ್ಮಿಕಾ ಹೇಳುತ್ತಾರೆ.
ಟ್ರೈಲರ್‌ನ ಆರಂಭದಲ್ಲಿ ಕರಣ್ ಅವರು ವಿಜಯ್ ಮತ್ತು ರಶ್ಮಿಕಾ ಅವರನ್ನು ಸ್ವಾಗತಿಸುತ್ತಾ, ‘ಬ್ಲಾಕ್‌ಬಸ್ಟರ್ ಜೋಡಿ’ ಎಂದು ಕರೆಯುತ್ತಾರೆ. ಇಬ್ಬರ ನಡುವೆ ಪ್ರಪೋಸಲ್ ನಡೆದಿತ್ತೇ? ಎಂದು ಕರಣ್ ಕೇಳುತ್ತಾರೆ. ರಶ್ಮಿಕಾ ‘ಇಲ್ಲ’ ಎಂದು ತಲೆಯಾಡಿಸಿದರೆ, ವಿಜಯ್, ‘ಆಕೆಯೇ ಮದುವೆಯಾಗೋಣ ಎಂದು ಹೇಳಿದಳು’ ಎಂದು ಪ್ರತಿಕ್ರಿಯಿಸುತ್ತಾರೆ. ‘ನೀನು ನನ್ನನ್ನು ಸುಮಾರು 100 ಬಾರಿ ಕೇಳಿದ್ದೀಯಲ್ಲ’ ಎಂದು ಕೇಳುತ್ತಾರೆ.
ಕರಣ್ ರಶ್ಮಿಕಾ ಕಡೆಗೆ ತಿರುಗಿ, ‘ನೀವು ನಿಜವಾಗಿಯೂ ವಿಜಯ್‌ಗೆ ನೂರು ಬಾರಿ ಮದುವೆಯಾಗುವಂತೆ ಕೇಳಿದ್ದೀರಾ?’ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೆ ರಶ್ಮಿಕಾ, ‘ನಾನು ಒಂದು ವರ್ಷದವರೆಗೂ ಅವರನ್ನು ಕೇಳುತ್ತಲೇ ಇದ್ದೆ’ ಎಂದು ಒಪ್ಪಿಕೊಳ್ಳುತ್ತಾರೆ. ಇದನ್ನು ಕೇಳಿ ಆಶ್ಚರ್ಯಚಕಿತರಾದ ಕರಣ್ ವಿಜಯ್‌ರತ್ತ ನೋಡುತ್ತಾರೆ. ಆಗ ವಿಜಯ್ ‘ನಾನೇನು ಅಷ್ಟು ಕೆಟ್ಟವನಲ್ಲ’ ಎಂದು ಹೇಳುತ್ತಾರೆ.
ಕಾಫಿ ವಿತ್ ಕರಣ್’ ಕಾರ್ಯಕ್ರಮದ ಇತ್ತೀಚಿನ ಸೀಸನ್ ಭರ್ಜರಿಯಾಗಿ ಆರಂಭಗೊಂಡಿದ್ದು, ಕರಣ್ ಜೋಹರ್ ಅವರ ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಭಾಗವಹಿಸಿದ್ದರು.
—-





Be the first to comment