ಅಕ್ಟೋಬರ್ 4ಕ್ಕೆ”ಅಧ್ಯಕ್ಷ ಇನ್ ಅಮೇರಿಕಾ” ವಿಶ್ವದಾದ್ಯಂತ ಬಿಡುಗಡೆ

ಪೀಪಲ್ ಮೀಡಿಯಾ ಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಟಿ.ಜಿ ಅವರು ನಿರ್ಮಿಸಿರುವ ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಅಕ್ಟೊಬರ್ ೪ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ವಿವೇಕ್ ಕುಚಿಬೊಟ್ಲ ಈ ಚಿತ್ರದ ಸಹ ನಿರ್ಮಾಪಕರು.
ಯೋಗಾನಂದ್ ಮುದ್ದಾನ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೆಶಿಸಿರುವ ಈ ಚಿತ್ರದ ನಾಯಕರಾಗಿ ಶರಣ್ ಅಭಿನಯಿಸಿದ್ದಾರೆ. ರಾಗಿಣಿ ದ್ವಿವೇದಿ ಈ ಚಿತ್ರದ ನಾಯಕಿ. ದಿಶಾ ಪಾಂಡೆ, ಅಶೋಕ್, ಅವಿನಾಶ್, ಪ್ರಕಾಶ್ ಬೆಳವಾಡಿ, ಶಿವರಾಜ್ ಕೆ.ಆರ್.ಪೇಟೆ, ಚಿತ್ರಾ ಶೆಣೈ, ಪದ್ಮಜಾ ರಾವ್, ತಬಲ ನಾಣಿ, ಮಕರಂದ್ ದೇಶಪಾಂಡೆ, ತಾರಕ್ ಪೆನ್ನಪ್ಪ, ಸಾಧುಕೋಕಿಲ, ರಂಗಾಯಣ ರಘು, ರಾಕ್‌ಲೈನ್ ಸುಧಾಕರ್, ಅಂಥೋನಿ ಕಮಲ್, ಸುಂದರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಧಾಕರ್ ಎಸ್ ರಾಜ್, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್ ತರುಣ್ ಕುಮಾರ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೆಶನ ಹಾಗೂ ರವಿ ಸಂತೆಹೈಕ್ಲು, ಮೋಹನ್ ಬಿ ಕೆರೆ ಕಲಾ ನಿರ್ದೆಶನ ಈ ಚಿತ್ರಕ್ಕಿದೆ.

This Article Has 1 Comment
  1. Pingback: CI CD Solutions

Leave a Reply

Your email address will not be published. Required fields are marked *

Translate »
error: Content is protected !!