ಪೃಥ್ವಿ ಶಾ ಜೊತೆ ಒಂದಾದ ನಟಿ

ಕ್ರಿಕೆಟಿಗ ಪೃಥ್ವಿ ಶಾ ಜೊತೆ ನಟಿ ಆಕೃತಿ ಅಗರ್ವಾಲ್ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಹೊಸದಾಗಿ ಜೀವನ ಆರಂಭಿಸಲು ಮುಂದಾಗಿರುವುದಾಗಿ  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆಕೃತಿ,  ಇತರರ ಮಾತುಗಳನ್ನು ಕೇಳಿ, ತಪ್ಪು ಗ್ರಹಿಕೆಯಿಂದ ಆತುರದ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಬಳಿಕ ಪೃಥ್ವಿ ಶಾ ಜೊತೆ ಮುಕ್ತವಾಗಿ ಮಾತನಾಡಿ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.

ತಮ್ಮ ಸಂಬಂಧದಲ್ಲಿ ಬಿರುಕು ಮೂಡಲು ಇತರರ ಪ್ರಭಾವವೂ ಕಾರಣವಾಗಿತ್ತು. ತಪ್ಪು ನಿರ್ಧಾರ ತೆಗೆದುಕೊಂಡಿದ್ದಕ್ಕೆ ತಾವೇ ಜವಾಬ್ದಾರರು ಎಂದು ಒಪ್ಪಿಕೊಂಡಿರುವ ಅವರು, ಇನ್ನು ಮುಂದೆ ಬೇರೆಯವರ ಮಾತುಗಳಿಗೆ ಪ್ರಭಾವಿತರಾಗದೆ ತಮ್ಮ ತಿಳಿವಳಿಕೆ ಮತ್ತು ನಂಬಿಕೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದಾಗಿ ಆಕೃತಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಇಬ್ಬರೂ ಬೇರ್ಪಡುತ್ತಿರುವುದಾಗಿ ಆಕೃತಿ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಈ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಜೋಡಿ ದೂರವಾಗಲು ಕಾರಣವೇನು ಎಂಬ ಚರ್ಚೆಗಳು ನಡೆದಿದ್ದವು. ಇದೀಗ ಇಬ್ಬರ ನಡುವಿನ ಮನಸ್ತಾಪಗಳು ದೂರವಾಗಿದೆ ಎಂದು ತಿಳಿದು ಬಂದಿದೆ.

ಪೃಥ್ವಿಶಾ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರೆ, ಆಕೃತಿ ಅಗರ್ವಾಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿರುವ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!