ಮಾಸ್ಟರ್ ಆನಂದ್ ಈಗ “ನಾ ಕೋಳಿಕ್ಕೆ ರಂಗ”

ಶ್ರಿದುರ್ಗಾ ಆಂಜನೇಯ ಮೂವೀಸ್ ಲಾಂಛನದಲ್ಲಿ ಎಸ್.ಟಿ.ಸೋಮಶೇಖರ್ ಅವರು ನಿರ್ಮಿಸುತ್ತಿರುವ ‘ನಾ ಕೋಳಿಕ್ಕೆರಂಗ’ ಚಿತ್ರದ ನಾಯಕರಾಗಿ ಮಾಸ್ಟರ್ ಆನಂದ್ ಅಭಿನಯಿಸಿದ್ದಾರೆ.
ಗೊರವಾಲೆ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೆಶಿಸುತ್ತಿದ್ದಾರೆ. ದ್ವಾರಕೀಶ್, ಹೊನ್ನವಳ್ಳಿ ಕೃಷ್ಣ, ದ್ವಾರ್ಕಿ, ಬೂದಾಳ್ ಕೃಷ್ಣಮೂರ್ತಿ, ಕೆ.ವಿ.ಪ್ರಸಾದ್ ಅವರ ಸಹಾಯಕ ನಿರ್ದೆಶಕರಾಗಿ ಕೆಲಸ ಮಾಡಿ ಅನುಭವವಿರುವ ಗೊರವಾಲೆ ಮಹೇಶ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಕುರಿತು ತರಭೇತಿಯನ್ನು ಪಡೆದಿದ್ದಾರೆ. ಇದು ಅವರ ಚೊಚ್ಚಲ ನಿರ್ದೆಶನದ ಚಿತ್ರ.

೫ ಹಾಡುಗಳಿರುವ ಈ ಚಿತ್ರಕ್ಕೆ ರಾಜು ಎಮ್ಮಿಗಾನೂರು ಸಂಗೀತ ನೀಡುತ್ತಿದ್ದಾರೆ. `ಒಳಿತು ಮಾಡು ಮನುಸ` ಹಾಡಿನ ಖ್ಯಾತಿಯ ನಮ್‌ಋಷಿ ಹಾಗೂ ಹನಸೊಗೆ ಸೋಮಶೇಖರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಧನುಷ್ ಛಾಯಾಗ್ರಹಣ, ವಿಶ್ವ ಸಂಕಲನ, ಅಶೋಕ್ ಸಾಹಸ ನಿರ್ದೆಶನ ಹಾಗೂ ಹೈಟ್ ಮಂಜು, ಮನು ಅವರ ನೃತ್ಯ ನಿರ್ದೆಶನ ಈ ಚಿತ್ರಕ್ಕಿದೆ.
ಮಾಸ್ಟರ್ ಆನಂದ್ ಅವರಿಗೆ ನಾಯಕಿಯಾಗಿ ರಾಜೇಶ್ವರಿ ಅಭಿನಯಿಸಿದ್ದಾರೆ. ಭವ್ಯ, ಹೊನ್ನವಳ್ಳಿ ಕೃಷ್ಣ, ಶಕಿಲಾ, ಬಿರಾದಾರ್, ಗುರುರಾಜ್ ಹೊಸಕೋಟೆ, ರಾಕ್‌ಲೈನ್ ಸುಧಾಕರ್, ಗಡ್ದಪ್ಪ, ಪಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!