18 ಎಕರೆ ಸಿನಿಮಾ ಲಕ್ಕಪ್ಪ

ಇದೇ ತಿಂಗಳಲ್ಲಿ ತೆರೆಯ ಮೇಲೆ ’18 ಎಕರೆ ಸಿನಿಮಾ ಲಕ್ಕಪ್ಪ’

ಹಿಂದಿನಿಂದಲೂ ಕಂಟೆಂಟ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ನಿರ್ದೇಶಕ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಅವರು ಬಿಡುಗಡೆಗೆ ಸಿದ್ದವಾಗಿರುವ ‘ಮಾರ್ಲಾಮಿ’, ಚಿತ್ರೀಕರಣ ಹಂತದಲ್ಲಿರುವ ‘ರುದ್ರ ಕಾಲಭೈರವ’, ‘ಲೋ ಬಜೆಟ್ ನೋ ಬಜೆಟ್’, ‘ಪವನಸುತ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ತಮಿಳಲ್ಲಿ ‘ಮರ್ಮಮುಟುಚಿ’, ‘ಕಾದಲ್ ವಾರ್’, ‘ಗಾಯತ್ರಿ ನಿಲಮ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಇದೀಗ ಚಿತ್ರರಂಗದಲ್ಲಿ ತೆರೆಯಹಿಂದೆ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನು ಇಟ್ಟುಕೊಂಡು ’18 ಎಕ್ರೆ ಸಿನಿಮಾ ಲಕ್ಕಪ್ಪ’ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ತಿಂಗಳಲ್ಲಿ ಈ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಿರ್ಮಾಣ ಹಂತದಲ್ಲಿ ನಿರ್ಮಾಪಕ ಯಾವ ರೀತಿ ಕಮಿಷನ್ ದಂದೆಗೆ ಹಣ ಕಳೆದುಕೊಳ್ಳುತ್ತಾನೆ, ಇಂಥ ಹಲವಾರು ಸತ್ಯಘಟನೆಗಳನ್ನು ಈ ಚಿತ್ರದಲ್ಲಿ ರಿಯಲ್ಲಾಗಿ ತೋರಿಸಿದ್ದಾರೆ. ಚಿತ್ರರಂಗಕ್ಕೆ ಹೊಸದಾಗಿ ಬರುವವರ ಕಹಿ ಅನುಭವಗಳು, ಪ್ರೊಡಕ್ಷನ್ ಬಗ್ಗೆ ಏನೂ ಗೊತ್ತಿಲ್ಲದೆ ಸಿನಿಮಾ ಮಾಡಲು ಬರುವವರನ್ನು ಮ್ಯಾನೇಜರ್ ಗಳು ಹೇಗೆಲ್ಲಾ ನಂಬಿಸಿ ಯಾಮಾರಿಸುತ್ತಾರೆ, ಕಲಾವಿದರಿಗೂ, ಜೀವನಕ್ಕೂ ‘ಸಿನಿಮಾ’ ಎನ್ನುವುದು ಕನ್ನಡಿ ಇದ್ದಹಾಗೆ ಎಂದು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಮಂಡ್ಯ, ಕೀಲಾರ, ಬೆಂಗಳೂರು, ಸಕಲೇಶಪುರ ಹಾಗೂ ಶ್ರವಣಬೆಳಗೊಳದ ಸುತ್ತಮುತ್ತ 45 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಕುಮಾರ್ ಮೂವೀಸ್ ಅಡಿ ಕೆ.ದಯಾನಂದ್, ಎ.ಸುಬ್ರಮಣಿ, ರಾಮಗೊಂಡನಹಳ್ಳಿ ಅಲ್ಲದೆ ಒಂದಷ್ಟು ಸ್ನೇಹಿತರೇ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿ.ಕುಮಾರ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ತಸೀ ರಂಗರಾಜನ್ ಅವರ ಸಂಗೀತ, ಅರುಣ್ ಅವರ ಕ್ಯಾಮೆರಾ, ದುರ್ಗಾಪ್ರಸಾದ್ ಅವರ ಸಂಕಲನ ’18 ಎಕರೆ ಸಿನಿಮಾ ಲಕ್ಕಪ್ಪ’ ಚಿತ್ರಕ್ಕಿದ್ದು, ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಚಿತ್ರದಲ್ಲಿ ಹರಿಚೇತು, ಸಂಜನಾ ನಾಯ್ಡು ಪ್ರಮುಖ ಪಾತ್ರಗಳಲ್ಲಿದ್ದಾರೆ. ಉಳಿದಂತೆ ಸಂಗೀತ, ಸುಬ್ರಮಣಿ, ರಾಜಶೇಖರ, ದಯಾನಂದ, ಸತ್ಯಸಾಮ್ರಾಟ್, ಲಿಂಗೇಶ್, ನಯನಕೃಷ್ಣ, ಜೂನಿಯರ್ ದ್ವಾರಕಿ, ಶ್ರೀನಿವಾಸ, ದುಬೈ ರಫೀಕ್ ಮುಂತಾದವರು ನಟಿಸಿದ್ದಾರೆ.

18 ಎಕರೆ ಸಿನಿಮಾ ಲಕ್ಕಪ್ಪ

Be the first to comment

Leave a Reply

Your email address will not be published. Required fields are marked *

Translate »
error: Content is protected !!