ನಾಗುಗೆ ವಧು ಬೇಕಾಗಿದೆ

‘ನಾಗುಗೆ ವಧು ಬೇಕಾಗಿದೆ’ ಸಿನಿಮಾ ಇದೇ ತಿಂಗಳ ಬಿಡುಗಡೆ

ಬಹುತೇಕ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಇದು ಈಗ ದೊಡ್ಡ ಸಮಸ್ಯೆ. ಇದಕ್ಕೆ ಕಾರಣಗಳು ಹಲವಾರು. ಇಂತಹ ಪ್ರಸ್ತುತ ಪರಿಸ್ಥಿತಿಯನ್ನಿಟ್ಟುಕೊಂಡು ನಿರ್ದೇಶಕ ಆರ್ ಕೆ “ನಾಗುಗೆ ವಧು ಬೇಕಾಗಿದೆ” ಎನ್ನುವ ಸಿನಿಮಾ‌ ಮಾಡಿದ್ದಾರೆ. ಆರ್ ಕೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಶ್ರೀಗುರು ರಾಘವೇಂದ್ರ ಕನ್ನಡ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿದೆ. ಈ ಚಿತ್ರ ಅಕ್ಟೋಬರ್ ನಲ್ಲೇ ತೆರೆಗೆ ಬರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾಗುಗೆ ವಧು ಬೇಕಾಗಿದೆ

ನಗರ ಪ್ರದೇಶಗಳಲ್ಲಾಗಲಿ ಹಾಗೂ ಹಳ್ಳಿಗಳಲ್ಲಾಗಲಿ ಹುಡುಗರಿಗೆ ಮದುವೆ ಆಗುತ್ತಿಲ್ಲ. ಹುಡುಗನಿಗೆ ಸರ್ಕಾರಿ ಕೆಲಸಾನೆ ಬೇಕು. ಹೆಣ್ಣು ಕೊಡಬೇಕು ಅಂದರೆ ಅತ್ತೆ, ಮಾವ ಇರಬಾರದು. ಅದರಲ್ಲೂ ಅತ್ತೆ ಅಂತೂ ಇರಲೇ ಬಾರದು. ಬೆಂಗಳೂರಿನಲ್ಲೇ ಸೈಟ್ ಅಥವಾ ಮನೆ ಇರಬೇಕು. ಈಗಿನ ಕಾಲದ ಹೆಚ್ಚಿನ ಹುಡುಗಿಯರು ಈ ರೀತಿಯ ಬೇಡಿಕೆಗಳನ್ನಿಡುತ್ತಾರೆ. ಈ ಅಂಶಗಳನ್ನಿಟ್ಟುಕೊಂಡು ಹಾಗೂ ಹತ್ತಿರದಿಂದ ಕಂಡ ಕೆಲವು ಸನ್ನಿವೇಶಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಬರೆದಿದ್ದೇನೆ. ಇದೊಂದು ನೈಜಘಟನೆ ಆಧಾರಿತ ಚಿತ್ರ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಮದ್ದೂರು, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಅಕ್ಟೋಬರ್ ತಿಂಗಳಿನಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ದತ್ತು ಪೂಜಾರಿ ನಾಯಕನಾಗಿ ಅಭಿನಯಿಸಿದ್ದಾರೆ. ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ, ಅಪೂರ್ವಶ್ರೀ, ರೇಖಾದಾಸ್, ಬೌ ಬೌ ಬಿರಿಯಾನಿ ಜಯರಾಮ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಒಂದೊಳ್ಳೆ ಕಂಟೆಂಟ್ ವುಳ್ಳ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ ಎಂದರು ನಿರ್ದೇಶಕ ಆರ್.ಕೆ.

ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಾಗು ನನ್ನ ಪಾತ್ರದ ಹೆಸರು. ನನಗೆ ಮದುವೆ ಆಗಿದೆ. ಆದರೆ ಮದುವೆ ಆಗದ ಹುಡುಗನಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂದು ನಾಯಕ ದತ್ತು ಪೂಜಾರಿ ಹೇಳಿದರು .

ಚಿತ್ರದಲ್ಲಿ ನಟಿಸಿರುವ ಅಪೂರ್ವಶ್ರೀ, ಚಿತ್ರಾಲ್ ರಂಗಾಸ್ವಾಮಿ, ಸೋನಿಕಾ ಸೋಮಣ್ಣ, ಶರತ್, ರವಿ, ಪುನೀತ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಶ್ರೀಸುರೇಶ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ನಾಗುಗೆ ವಧು ಬೇಕಾಗಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!