‘ಮದುವೆಗೂ ಮುನ್ನ ನಾನು ಎರಡು ಬಾರಿ ಐವಿಎಫ್ ಮೂಲಕ ಮಗು ಪಡೆದುಕೊಳ್ಳಲು ಪ್ರಯತ್ನಿಸಿದ್ದೆ’ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ತಾಯ್ತನದ ಬಗ್ಗೆ ಮಾತನಾಡಿದ್ದಾರೆ.
ಸ್ವರಾ ಭಾಸ್ಕರ್ ಅವರು ತಮ್ಮತಾಯ್ತನದ ಬಗ್ಗೆ ಕುರಿತು ‘ರೈಸ್ ಅಂಡ್ ಫಾಲ್’ ಸೀಸನ್ 2ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
‘ಮಗು ಪಡೆದುಕೊಳ್ಳಲು ನನ್ನ ಪೋಷಕರನ್ನೂ ಒಪ್ಪಿಸಿದ್ದೆ. ಈ ಪ್ರಕ್ರಿಯೆಯಲ್ಲಿ ಪೋಷಕರನ್ನೂ ಒಪ್ಪಿಸಿದ್ದೆ. ಅವರೂ ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು. ಅಲ್ಲದೆ ಮಗುವನ್ನು ಬೆಳೆಸುವುದೆಂದರೆ ಸವಾಲುಗಳು ಇರುತ್ತವೆ ಎಂದೂ ಎಚ್ಚರಿಸಿದ್ದರು. ನನಗೆ ಮದುವೆಯಾಗುತ್ತದೆ ಎನ್ನುವ ನಂಬಿಕೆ ಇರಲಿಲ್ಲ. ನನಗೂ ಒಂದು ಕುಟುಂಬ, ಮಗು ಇರಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಅದು ಫಲಿಸಲಿಲ್ಲ’ ಎಂದಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗೆ ರಾಜಕೀಯ ಕಾರ್ಯಕರ್ತ ಫಹಾದ ಅಹಮದ್ ಜತೆಗೆ ಪ್ರೀತಿಯಾಗಿತ್ತು. ಈ ಜೋಡಿ 2023ರ ಫೆ.16ರಂದು ಮದುವೆಯಾಗಿತ್ತು. ಮದುವೆ ಕಾರ್ಯಕ್ರಮ, ಸಂಭ್ರಮ ಮುಗಿದು ಒಂದು ತಿಂಗಳ ನಂತರ ಮದುವೆಯ ಬಗ್ಗೆ ಸ್ವರಾ ಬಹಿರಂಗಪಡಿಸಿದ್ದರು. ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿದೆ. ಮಗಳಿಗೆ ರಾಬಿಯಾ ರಾಮ ಅಹಮದ್ ಎಂದು ಹೆಸರಿಟ್ಟಿದೆ.
——





Be the first to comment