‘ರಾಸಲೀಲೆ ದೃಶ್ಯ’ ಲೀಕ್ ಆಗಿ ಮನೆಯಿಂದ ಹೊರ ಬಾರದ ನಟಿ!

ತಮ್ಮ ಸಿನಿಮಾವೊಂದರ ಹಸಿಬಿಸಿ ದೃಶ್ಯವೊಂದು ಸೋರಿಕೆಯಾದ ನಂತರ  ನಾನು ಹಲವು ದಿನಗಳ ಕಾಲ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದೆ ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ  ಬಹಿರಂಗಪಡಿಸಿದ್ದಾರೆ.

‘ನಾನು ನಟಿಸಿದ್ದ ದೃಶ್ಯವೊಂದು ಸೋರಿಕೆಯಾದಾಗ ಸತತ ನಾಲ್ಕು ದಿನಗಳ ಕಾಲ ನನಗೆ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗಲಿಲ್ಲ.  ಇದರ ಪರಿಣಾಮಗಳು ಬಹಳ ಬೇಗನೆ ನಮ್ಮ ಮನೆ ಬಾಗಿಲನ್ನೇ ತಲುಪಬಲ್ಲವು. ಯಾರಾದರೂ ನಿಮ್ಮ ಮನೆಯ ಡೋರ್‌ಬೆಲ್ ಬಾರಿಸಬಹುದು ಮತ್ತು ಆ ದೃಶ್ಯದಿಂದ ಮನನೊಂದು ಯಾರಾದರೂ ನಿಮ್ಮ ಮನೆಯ ಹೊರಗೆ ಬಂದು ನಿಲ್ಲಬಹುದು.  ಇದು ಬಹಳ ಸಂಕೀರ್ಣವಾದ ವಿಷಯ. ಇಂತಹ ದೃಶ್ಯಗಳು ಆಗಾಗ್ಗೆ ಕಲಾವಿದರ ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರುತ್ತವೆ’ ಎಂದು ರಾಧಿಕಾ  ತಿಳಿಸಿದ್ದಾರೆ.

‘ವಿಡಿಯೋ ಕ್ಲಿಪ್ ಸೋರಿಕೆಯಾದಾಗ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಮಾತ್ರ ಸೀಮಿತವಾಗಲಿಲ್ಲ. ಅದು ಪ್ರತಿದಿನ ನೋಡುವ ಮತ್ತು ಭೇಟಿಯಾಗುವ ಜನರ ಬಳಿಗೂ ತಲುಪಿತ್ತು. ವಾಚ್ ಮನ್, ನನ್ನ ಕಾರು ಚಾಲಕ ಆ ವಿಡಿಯೋ ನೋಡಿದ್ದರು. ಸ್ಟೈಲಿಸ್ಟ್‌ನ ಚಾಲಕ  ಆ ಕ್ಲಿಪ್‌ನ್ನು  ನೋಡುತ್ತಾ, ಆಕೆಗೆ ‘ನೀವು ಅವರ ಮನೆಗೆ ಹೋಗುತ್ತಿದ್ದೀರಾ?’ ಎಂದು ಅವಳನ್ನು ಕೇಳುತ್ತಲೇ ಇದ್ದದ್ದು ನನಗೆ ನೆನಪಿದೆ. ಇಂತಹ ಘಟನೆಗಳು ನಡೆಯಲಾರಂಭಿಸಿ ಪರಿಸ್ಥಿತಿಯನ್ನು ನಿಭಾಯಿಸುವುದು ಬಹಳ ಕಷ್ಟವಾಯಿತು” ಎಂದು ನೆನಪಿಸಿಕೊಂಡಿದ್ದಾರೆ.

ರಾಧಿಕಾ ಆಪ್ಟೆ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬೋಲ್ಡ್ ದೃಶ್ಯ ಹಾಗೂ ಸಾಂಪ್ರದಾಯಿಕವಲ್ಲದ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಸಿನಿಮಾವೊಂದರ ಹಸಿಬಿಸಿ ದೃಶ್ಯ  ಸೋರಿಕೆಯಾದ ನಂತರ ಅನುಭವಿಸಿದ ತೀವ್ರ ಭಾವನಾತ್ಮಕ ಸಂಕಟವನ್ನು ಅವರು ನೆನಪಿಸಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!