‘ಮ್ಯಾಂಗೋ ಪಚ್ಚಾ’ ಡಿಜಿಟಲ್ ಸ್ಟ್ರೀಮಿಂಗ್ ಆರಂಭ

ಮೈಸೂರಿನ ಭೂಗತ ಲೋಕ ಹಾಗೂ ರಿಯಲಿಸ್ಟಿಕ್ ಕ್ರೈಂ ಜಗತ್ತಿನ ಹಿನ್ನೆಲೆಯಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ‘ಮ್ಯಾಂಗೋ ಪಚ್ಚಾ’ ಸಿನಿಮಾ ಸೆ.25ರಿಂದ ‘ಜಿಯೋಹಾಟ್‌ಸ್ಟಾರ್‌’ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಈ ಚಿತ್ರ ಸಾಮಾನ್ಯ ಮಧ್ಯಮ ವರ್ಗದ ಬದುಕನ್ನು ಸಾಗಿಸುತ್ತಿದ್ದ ಯುವಕನೊಬ್ಬ ಅನಿವಾರ್ಯ ಪರಿಸ್ಥಿತಿಗಳ ಸುಳಿಗೆ ಸಿಲುಕಿ ಅಪರಾಧ ಲೋಕಕ್ಕೆ ಹೇಗೆ ಕಾಲಿಡುತ್ತಾನೆ, ಕಾಲಕ್ರಮೇಣ ಅದೇ ಜಗತ್ತಿನಲ್ಲಿ ತನ್ನದೇ ಆದ ಬಲವಾದ ಪ್ರಭಾವ ಬೆಳೆಸಿಕೊಂಡು ಹೇಗೆ ಬೆಳೆಯುತ್ತಾನೆ ಎಂಬ ಮಾಸ್ ಜರ್ನಿಯನ್ನು ನೈಜವಾಗಿ ತೆರೆದಿಡುತ್ತದೆ.

ಸಿನಿಮಾದಲ್ಲಿ ಸಂಚಿತ್ ಸಂಜೀವ್ ಅವರು ಪ್ರಶಾಂತ್ ಅಲಿಯಾಸ್ ‘ಪಚ್ಚ’ ಎಂಬ ಪವರ್‌ಫುಲ್ ಶೇಡ್ ಹೊಂದಿರುವ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಚಿತ್ ಅವರ ನಟನೆ, ಬಾಡಿ ಲಾಂಗ್ವೇಜ್ ಮತ್ತು ಮಾಸ್ ಮ್ಯಾನರಿಸಂ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.

ನಿರ್ದೇಶಕ ವಿವೇಕ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರ  2001ರಿಂದ 2011ರ ನಡುವಿನ ಮೈಸೂರಿನ ಹಿನ್ನೆಲೆಯಲ್ಲಿ ಸಾಗುತ್ತದೆ. ಆ ಕಾಲಘಟ್ಟದ ಸ್ಥಳೀಯ ರಾಜಕೀಯ, ಗ್ಯಾಂಗ್‌ಗಳ ನಡುವಿನ ರಕ್ತಸಿಕ್ತ ಸಂಘರ್ಷ, ಕುಟುಂಬದ ಭಾವನೆಗಳು ಮತ್ತು ಪ್ರೀತಿಯ ನಡುವೆ ನಾಯಕನ ಬದುಕು ತೆಗೆದುಕೊಳ್ಳುವ ತಿರುವುಗಳನ್ನು ಕಥೆಯಲ್ಲಿ ಕುತೂಹಲಕಾರಿಯಾಗಿ ಕಟ್ಟಿಕೊಡಲಾಗಿದೆ.

ಸಂಚಿತ್ ಜೊತೆಗೆ ಮಯೂರ್ ಪಟೇಲ್, ಹಂಸಾ, ಉಗ್ರಂ ಮಂಜು, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಮುಂತಾದ ಪ್ರತಿಭಾವಂತ ಕಲಾವಿದರ ತಾರಾಗಣ ಅಭಿನಯಿಸಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!