ಯುವ ಪ್ರತಿಭೆ ಸೂಚನ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಗಾಡ್ ಪ್ರಾಮಿಸ್’ ಸಿನಿಮಾ ನವೆಂಬರ್ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ.
‘ಗಾಡ್ ಪ್ರಾಮಿಸ್’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶೂಟಿಂಗ್ ಪೂರ್ಣಗೊಂಡಿರುವ ಸಂಭ್ರಮದಲ್ಲಿರುವ ಚಿತ್ರತಂಡ ತೆರೆಮರೆಯ ಆಕರ್ಷಕ ಕ್ಷಣಗಳನ್ನು ಒಳಗೊಂಡ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ.
ಚಿತ್ರದಲ್ಲಿ ಸೂಚನ್ ಶೆಟ್ಟಿಗೆ ಜೋಡಿಯಾಗಿ ಜೂಹಿ ಜಯಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ಪವಿ ಕೇರ್ಟೇಕರ್’, ‘ತಲೈವನ್ ತಲೈವಿ’ ಹಾಗೂ ‘ಸುಮತಿ ಒಲವು’ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಜೂಹಿ ಈ ಚಿತ್ರದ ಮೂಲಕ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ರಘು ಪಾಂಡೇಶ್ವರ, ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಸಿದ್ಧಿ ಪ್ರಶಾಂತ್, ಪ್ರಸಿದ್ಧ್ ನಾಗ್, ಶೋಭಾ ಶೆಟ್ಟಿ, ಪ್ರತಿಮಾ ನಾಯಕ್, ಅಕ್ಷತಾ ರೈ, ರಾಧಾಕೃಷ್ಣ ಕುಂಬ್ಳೆ, ಪ್ರಭಾಕರ್ ಕುಂದರ್, ರಾಮ್ ಕುಮಾರ್ ಉಪ್ಪುಂದ, ಜಯಶೀಲಾ ಮರೋಳಿ, ಶ್ರುತಿ ಭಟ್, ವಿಶಾಲ್ ಜೈವಿಕ್, ಚಂದ್ರಿಕಾ ಕಾಮತ್, ಶ್ರಾವ್ಯ ಪುತ್ರನ್ ಸೇರಿದಂತೆ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ.
ಪಾಂಚಜನ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ನಡಿ ಮಹೇಂದ್ರ ಶೆಟ್ಟಿ ಅದ್ದೂರಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ಭರತ್ ಮಧುಸೂದನನ್ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ, ನವೀನ್ ಶೆಟ್ಟಿ ಅವರ ಸಂಕಲನ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ, ಎನ್. ಸರವಣ ಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.
—-





Be the first to comment