ನ. 20ಕ್ಕೆ ‘ಶಂಕರಾಭರಣ’ ತೆರೆಗೆ

ಸ್ಯಾಂಡಲ್‌ವುಡ್‌ ನಟ ಶೈನ್ ಶೆಟ್ಟಿ ನಟನೆಯ’ಶಂಕರಾಭರಣ’ ಸಿನಿಮಾ ನವೆಂಬರ್ 20ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

‘ಶಂಕರಾಭರಣ’ ಹೆಸರಿನ ಬಸ್ ಪೋಸ್ಟರ್ ಮೂಲಕ ಈಗಾಗಲೇ ಸಿನಿ ಅಭಿಮಾನಿಗಳ ಗಮನ ಸೆಳೆದಿದ್ದ  ಸಿನಿಮಾದ ಟೀಸರ್  ರಿಲೀಸ್ ಆಗಿದೆ. ಆಕರ್ಷಕ ಟೈಟಲ್ ಮೂಲಕ  ಗಮನ ಸೆಳೆದಿರುವ ‘ಶಂಕರಾಭರಣ’ ಇದೀಗ ರಿಲೀಸ್ ಆಗಿರುವ ಟೀಸರ್‌ನಿಂದ ನಿರೀಕ್ಷೆ ಹೆಚ್ಚಿಸಿದೆ.

ಶೈನ್ ಶೆಟ್ಟಿ   ಸಿನಿಮಾದಲ್ಲಿ ಬಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ. ಶಂಕರಾಭರಣ ಬಸ್‌ನ ಚಾಲಕನಾಗಿ ಜೀವನ ಸಾಗಿರುವ ವ್ಯಕ್ತಿಯ ಪಾತ್ರದಲ್ಲಿ ಶೈನ್ ಮಿಂಚಿದ್ದಾರೆ. ಮೊದಲ ಬಾರಿಗೆ ಸುಮಂತ್ ಭಟ್ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಬಸ್ ಹೈಲೆಟ್. ಇಲ್ಲಿ ಹೀರೋ, ಹೀರೋಯಿನ್ ನ ಷ್ಟೆ ಪ್ರಮುಖ ಪಾತ್ರವನ್ನು ಬಸ್ ವಹಿಸಲಿದೆ. ಶೈನ್ ಶೆಟ್ಟಿ  ತಮ್ಮ ಜೀವನದಲ್ಲಿ ತಮ್ಮ ಸುತ್ತಮುತ್ತ ನೋಡಿದ ಒಂದಷ್ಟು ಅನುಭವವಗಳನ್ನೂ ಸೇರಿಸಿ ಸಿನಿಮಾದ ಕಥೆ ರಚಿಸಿದ್ದಾರೆ.

ಶಂಕರಾಭರಣ ಸಿನಿಮಾ ಮೂಲಕ ಶೈನ್ ನಿರ್ಮಾಪಕನಾಗಿ  ಎಂಟ್ರಿ ಕೊಡುತ್ತಿದ್ದಾರೆ. ರಂಗಸ್ಥಳ ಸ್ಟುಡಿಯೋ ಬ್ಯಾನರ್ ನಡಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ  ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಿನಿಮಾದ ನಾಯಕಿ ಪಾತ್ರದಲ್ಲಿ ತನ್ವಿ ರಾವ್ ಕಾಣಿಸಿಕೊಂಡಿದ್ದಾರೆ.  ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಿನಿಮಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!