ಮಲಯಾಳಂನ ಸೂಪರ್ಹಿಟ್ ‘ದೃಶ್ಯಂ’ ಸರಣಿಯ ನಾಲ್ಕನೇ ಭಾಗದ ಘೋಷಣೆ ಆಗಿದ್ದು, ಅಭಿಮಾನಿಗಳಿಂದ ನಿರಾಸೆ ವ್ಯಕ್ತವಾಗಿದೆ.
‘ದೃಶ್ಯಂ’ ಮೂರನೇ ಭಾಗ ನಿರೀಕ್ಷೆ ತಲುಪಲು ವಿಫಲವಾಗಿದ್ದು ಮತ್ತೆ ‘ದೃಶ್ಯಂ 4’ ಮಾಡುವ ನಿರ್ಧಾರಕ್ಕೆ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ‘ದೃಶ್ಯಂ’ ಸರಣಿ ಅನಗತ್ಯವಾಗಿ ಮುಂದುವರಿಸಲಾಗುತ್ತಿದೆ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಅಭಿಮಾನಿಗಳು ‘ದೃಶ್ಯಂ 3’ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು. ಆ ಸಿನಿಮಾ ಕೂಡ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿತ್ತು. ಮೂರನೇ ಭಾಗ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಋಣಾತ್ಮಕ ಪ್ರತಿಕ್ರಿಯೆ ಪಡೆಯಿತು. ಸರಣಿಯಲ್ಲೇ ಇದು ಅತ್ಯಂತ ವೀಕ್ ಸಿನಿಮಾ ಎಂದು ಪ್ರೇಕ್ಷಕರು ಕರೆದಿದ್ದರು. ಮೋಹನ್ಲಾಲ್ ಅವರ ನಟನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಗಮನ ಸೆಳೆದಿದ್ದವು. ಆದರೆ ಕಥೆಯನ್ನು ಅನಗತ್ಯವಾಗಿ ಎಳೆಯಲಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು.
‘ದೃಶ್ಯಂ’ ಸರಣಿಯ ಮೊದಲ ಎರಡು ಭಾಗಗಳು ಅತ್ಯುತ್ತಮ ಸಸ್ಪೆನ್ಸ್ ಹೊಂದಿದ್ದವು. ಟ್ವಿಸ್ಟ್ ಹಾಗೂ ಡ್ರಾಮಾ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದವು. ಮೂರನೇ ಭಾಗದಲ್ಲಿ ಆ ರೀತಿಯ ಮ್ಯಾಜಿಕ್ ಮಾಯವಾಗಿತ್ತು. ನಾಲ್ಕನೇ ಭಾಗದ ಮೇಲಿನ ಭರವಸೆ ಹುಸಿಯಾಗಿ ಈ ಸಿನಿಮಾ ಹಣ ಮಾಡುವ ತಂತ್ರ ಎಂದು ಅನೇಕರು ಕಿಡಿ ಕಾರಿದ್ದಾರೆ.
ಈಗ ನಿರ್ದೇಶಕ ಜೀತು ಜೋಸೆಫ್ ಅವರ ನಡೆ ಕುತೂಹಲ ಮೂಡಿಸಿದೆ. ಅವರು ಹಳೆಯ ಕಥೆಯನ್ನು ಮುಂದುವರಿಸುತ್ತಾರೋ ಅಥವಾ ಹೊಸ ಕಾನ್ಸೆಪ್ಟ್ ತರುತ್ತಾರೋ ಎಂಬ ಚರ್ಚೆ ಎದ್ದಿದೆ.
—–





Be the first to comment