ನಿರ್ದೇಶಕ ವಿನಯ ಭಾರದ್ವಾಜ ಅವರು ನಿರ್ದೇಶಿಸುತ್ತಿರುವ ಮುಂದಿನ ನಿಲ್ದಾಣ ಚಿತ್ರದ ಪೋಸ್ಟರ್ ಹಾಗೂ ಫಸ್ಟ್ ಲುಕ್ ಅನ್ನು ಮೊನ್ನೆ ನಿರ್ದೇಶಕ ರಿಷಭ್‍ಶೆಟ್ಟಿ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ಮೂಲಕ ತಾರಾನಾಥ ರೈ ನಿರ್ಮಿಸಿರುವ ಈ ಚಿತ್ರದಲ್ಲಿ ಮೂವರು ವಿಭಿನ್ನ ವ್ಯಕ್ತಿತ್ವದವರು ನಡೆಯುವ ಹಾದಿಯ ಬಗ್ಗೆ ಬಿಂಬಿತವಾಗಿದ್ದು ಪ್ರವೀಣತೇಜ, ರಾಧಿಕಾ ನಾರಾಯಣ ಹಾಗೂ ಅನನ್ಯ ಅವರು ನಟಿಸಿದ್ದಾರೆ.
ನಿರ್ಮಾಪಕ ತಾರಾನಾಥ ರೈ ಮಾತನಾಡಿ, ಮಂಗಳೂರು ಕಡೆಯವರೆಲ್ಲಾ ಕೂಡಿಕೊಂಡು ನಿರ್ಮಿಸಿರುವ ಚಿತ್ರ ಇದಾಗಿದ್ದು , ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಒಂದು ವಾರದಲ್ಲಿ ಚಿತ್ರದ ಮೊದಲ ಪ್ರತಿ ಹೊರಬರುವ ಈ ಚಿತ್ರದಲ್ಲಿ ಈಗಿನ ಜನರೇಷನ್‍ಗೆ ಒಗ್ಗುವಂತಹ ಸಿನಿಮಾವಿದು ಎಂದು ಹೇಳಿದರು.
ನಿರ್ದೇಶಕ ವಿನಯ ಭಾರದ್ವಾಜ ಮಾತನಾಡಿ, 18 ರಿಂದ 40 ವಯೋಮಾನದವರನ್ನು ಕೇಂದ್ರಬಿಂದುವಾಗಿಸಿಕೊಂಡು ನಿರ್ಮಿಸಿರುವ ಈ ಚಿತ್ರದಲ್ಲಿ 3 ಜನರ ಜರ್ನಿ ಈ ಚಿತ್ರದಲ್ಲಿದ್ದು, ಅವರ ಜೀವನ ಹೇಗೆ ಶುರುವಾಗುತ್ತದೆ ಎಂಬುದನ್ನು ಹೇಳಲು ಹೊರಟಿದ್ದಾರೆ. ಮೀರಾ, ಪಾರ್ಥ ಹಾಗೂ ಅಹಲ್ಯಾ ಈ ಮೂರು ಪಾತ್ರಗಳ ಮೇಲೆ ಕಥೆ ಮಾಡಿದ್ದೇವೆ ಎಂದರು.
ಈ ಹಾಡುಗಳಲ್ಲಿ ಏಳು ಹಾಡುಗಳು ಚಿತ್ರದಲ್ಲಿದ್ದು ಬೆಂಗಳೂರು, ಸಕಲೇಶಪುರ, ಕೋಲಾರ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದು ಸದ್ಯದಲ್ಲೇ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.
ನಾಯಕ ಪ್ರವೀಣ್ ಚಿತ್ರದಲ್ಲಿ ಒಟ್ಟ ಸಾಫ್ಟ್ ವೇರ್ ಎಂಜಿನಿಯರ ಆಗಿದ್ದಾರೆ. ನಾಲ್ಕು ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ನಿಲ್ದಾಣ ಚಿತ್ರವು ತುಂಬಾ ವಿಭಿನ್ನವಾಗಿದೆ ಎಂದು ಚಿತ್ರತಂಡದವರು ಹೇಳುತ್ತಿದ್ದು ಸಿನಿಮಾ ಆದಷ್ಟು ಬೇಗ ಬಿಡುಗಡೆಗೊಂಡು ಸಕ್ಸಸ್ ಸ್ಟಾಪ್‍ನತ್ತ ಸಾಗುವಂತಾಗಲಿ.
Be the first to comment