‘ಶಾರ್ದೂಲ’ ಚಿತ್ರದ ಟ್ರೇಲರ್ ಬಿಡುಗಡೆ

ದೆವ್ವ ಇದೆಯಾ, ಇಲ್ಲವಾ ಎಂಬ ಚರ್ಚೆಯನ್ನು ಹೊಂದಿರುವ ಶಾರ್ದೂಲ ದೆವ್ವ ಇರಬಹುದಾ ಎಂಬ ಚಿತ್ರದ ಟ್ರೇಲರ್ ಅನ್ನು ಮೊನ್ನೆ ಬಿಡುಗಡೆ ಮಾಡಲಾಯಿತು. ಹೂಮಳೆ ಬೆಡಗಿ ಸುಮನ್‍ನಗರ್‍ಕರ್ ಹಾಗೂ ನಟ, ನಿರ್ದೇಶಕ ರಿಷಭ್‍ಶೆಟ್ಟಿ , ಭಾ.ಮ.ಹರೀಶ್, ಗಿರೀಶ್,ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಹುಲಿರಾಯ ಖ್ಯಾತಿಯ ಅರವಿಂದ ಕೌಶಿಕ್ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ರೋಹಿತ್ ಬಂಡವಾಳ ಹೂಡಿದ್ದರೆ, ಚೇತನ್ ಚಂದ್ರ , ಕೃತಿಕಾ ರವೀಂದ್ರ, ರವಿತೇಜಾ ಹಾಗೂ ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಅರವಿಂದ್ ಕೌಶಿಕ್ ಮಾತನಾಡಿ, ಒಂದು ಅಪರಿಚಿತ ಸ್ಥಳಕ್ಕೆ ನಾವು ಹೋದಾಗ ಅಲ್ಲಿ ಕಾಣುವ ದೃಶ್ಯಗಳು, ಕೇಳುವ ಶಬ್ದ ನಮಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಅಂಥ ಪ್ರಶ್ನೆಗಳಿಗೆಲ್ಲಾ ಶಾರ್ದೂಲ ಉತ್ತರ ಕೊಡಲಿದೆ.ಇಡೀ ಚಿತ್ರವನ್ನು ಭಯದ ಮೂಲಕ ಕೃತಿಕಾ ರವೀಂದ್ರ ಕ್ಯಾರಿ ಮಾಡಿದ್ದಾರೆ, ನನ್ನ ಗೆಳೆಯ ರಿಶಬ್‍ಶೆಟ್ಟಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿರುವುದು ನನ್ನ ಸಂತಸವನ್ನು ಹೆಚ್ಚಿಸಿದೆ ಎಂದು ಹೇಳಿದರು.

ನಾಯಕನಟ ಚೇತನ್ ಚಂದ್ರ ಮಾತನಾಡಿ, ಒಂದು ತಿಂಗಳ ಕಾಲ ಕಾಡಿನಲ್ಲೇ ಚಿತ್ರೀಕರಣ ಮಾಡಿದ್ದು ನನಗೆ ರೋಚಕ ಅನುಭವ ನೀಡಿತು. ಅರವಿಂದ್ ಕೌಶಿಕ್‍ರೊಂದಿಗೆ ನಾನು ಕೆಲಸ ಮಾಡಿರುವ ಎರಡನೇ ಚಿತ್ರ. ಕೃತಿಕಾ, ರವಿತೇಜಾ, ಐಶ್ವರ್ಯ ಅವರೂ ಕೂಡ ನನಗೆ ತುಂಬಾ ಸಪೆÇೀರ್ಟ್ ಮಾಡಿದರು ಎಂದು ಹೇಳಿದರು.

ರವಿತೇಜಾ ಮಾತನಾಡಿ, ಸೀರಿಯಲ್‍ನಲ್ಲಿ ನಟಿಸುತ್ತಿದ್ದ ನನ್ನನ್ನು ರಾಜಧಾನಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಕರೆದುಕೊಂಡು ಬಂದ ಚೇತನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಸಂತಸವಾಗಿದೆ. ನನಗೆ ಸಿನಿಮಾ ಅಂತ ಫೀಲ್ ಬರಲು ಕಾರಣವೇ ಅರವಿಂದ್‍ಕೌಶಿಕ್. ಈ ಚಿತ್ರದಲ್ಲಿ ನಾನು ಸೆಕೆಂಡ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ನಿರ್ದೇಶಕ ಅರವಿಂದ್ ಕೌಶಿಕ್ ಮಾತನಾಡಿ, ಶಾರ್ದೂಲ ಚಿತ್ರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆದಾಡುವ ಜನರ ಕಥೆ ಇದೆ. ಈ ಹಂತದಲ್ಲಿ ಹಲವು ಕುತೂಹಲಕರ ವಿಷಯಗಳು ಗೋಚರಿಸುತ್ತವೆ, ಭಯ ಹುಟ್ಟಿಸುತ್ತವೆ. ಇವೆಲ್ಲ ಕೃತಕವೋ ಅಥವಾ ಸಹಜವೋ ಅನ್ನುವುದು ಸಿನಿಮಾದಲ್ಲಿ ನೋಡಬಹುದು ಎಂದು ಹೇಳಿದರು.

ರಿಷಭ್‍ಶೆಟ್ಟಿ ಮಾತನಾಡಿ, ಅರವಿಂದ್ ಕೌಶಿಕ್ ಅವರು ನನ್ನ ಗುರುಗಳಿದ್ದಂತೆ. ಟೀವಿ ಹಾಗೂ ಸಿನಿಮಾ ಬಗ್ಗೆ ನಾನು ಅವರಿಂದ ಕಲಿತೆ. ನನ್ನ ಗುರು ಮಾಡಿರುವ ಶಾರ್ದೂಲ ಸಂಪೂರ್ಣ ಎಂಟರ್‍ಟೇನರ್ ಅಂಶಗಳೂ ಇವೆ.

ಚಿತ್ರ ಸಕ್ಸಸ್ ಆಗುತ್ತದೆ, ರವಿತೇಜ ಮೂಲಕ ನನಗೆ ಅರವಿಂದಕೌಶಿಕ್‍ರ ಪರಿಚಯವಾಗಿ ಅವರ ತುಘಲಕ್ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದೆ ಎಂದು ಹೇಳಿದರು. ಮನು ಛಾಯಾಗ್ರಹಣ, ಸತೀಶ್‍ಬಾಬು ಸಂಗೀತ, ಶಿವರಾಜ್‍ಮೇಹು ಸಂಕಲನ ಈ ಚಿತ್ರಕ್ಕಿದೆ.

This Article Has 3 Comments
  1. Pingback: Lenoir solar panel Installation

  2. Pingback: bell & ross replica

  3. Pingback: cvv shop

Leave a Reply

Your email address will not be published. Required fields are marked *

Translate »
error: Content is protected !!