‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಟ್ರೋಲ್‌ಗೆ ಬಾಲಿವುಡ್ ನಟ ಅಮೀರ್ ಖಾನ್ ತಿರುಗೇಟು ನೀಡಿದ್ದಾರೆ.
ದೀರ್ಘಕಾಲದ ಸ್ನೇಹಿತೆ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗಿರುವ ಅಮೀರ್ ಖಾನ್, ಮದುವೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದಅಮೀರ್ ಖಾನ್ “ನಮ್ಮ ಕುಟುಂಬ ಅತ್ಯಂತ ವಿಶಾಲ ಮನೋಭಾವ ಹೊಂದಿದೆ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ಮದುವೆಯಾಗಿದ್ದಾರೆ. ನನ್ನ ಮಗಳು ಇರಾ ಖಾನ್ ಹಿಂದೂ ಯುವಕನನ್ನು ವಿವಾಹವಾಗಿದ್ದಾಳೆ. ನನ್ನ ಸೋದರ ಸಂಬಂಧಿ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾರೆ. ನಮ್ಮ ಕುಟುಂಬದಲ್ಲಿ ಎಲ್ಲ ಧರ್ಮದವರೂ ಇದ್ದಾರೆ” ಎಂದು ಹೇಳಿದ್ದಾರೆ.
“ನನ್ನ ಪತ್ನಿಯರಾದ ರೀನಾ ದತ್ತಾ, ಕಿರಣ್ ರಾವ್ ಅಥವಾ ಗೌರಿ ಸ್ಪ್ರ್ಯಾಟ್ ಯಾರೂ ಧರ್ಮ ಬದಲಾಯಿಸಿಲ್ಲ. ನಮ್ಮ ಮದುವೆಗಳೆಲ್ಲವೂ ಕಾನೂನುಬದ್ಧ ಸಿವಿಲ್ ಮ್ಯಾರೇಜ್ ಆಗಿವೆ. ಈಗಿನ ನನ್ನ ಪತ್ನಿ ಗೌರಿ ಹಿಂದೂ ಅಲ್ಲ. ಕ್ರಿಶ್ಚಿಯನ್ ಕುಟುಂಬದವರು” ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ 5ರಂದು ಮುಂಬೈನ ನಿವಾಸದಲ್ಲಿ ಗೌರಿ ಸ್ಪ್ರ್ಯಾಟ್ ಜೊತೆ ಸರಳವಾಗಿ ಅಮೀರ್ ವಿವಾಹವಾಗಿದ್ದರು. ಮಾರು ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
—-





Be the first to comment